ಈ ಗ್ರಾಮ ಪಂಚಾಯಿತಿಯಲ್ಲಿ ಹಣ ಡ್ರಾ ಅಗುತ್ತೆ, ಆದರೆ ಕಾಮಗಾರಿ ಮಾತ್ರ ಶೂನ್ಯ!

Published : Jun 15, 2017, 08:58 AM ISTUpdated : Apr 11, 2018, 12:35 PM IST
ಈ ಗ್ರಾಮ ಪಂಚಾಯಿತಿಯಲ್ಲಿ ಹಣ ಡ್ರಾ ಅಗುತ್ತೆ, ಆದರೆ ಕಾಮಗಾರಿ ಮಾತ್ರ ಶೂನ್ಯ!

ಸಾರಾಂಶ

ಗ್ರಾಮಗಳು ಅಭಿವೃದ್ಧಿಗೆ ಸರ್ಕಾರ ಕೋಟಿ ಕೋಟಿ ಹಣವನ್ನು  ನೇರವಾಗಿ ಗ್ರಾಮ ಪಂಚಾಯಿತಿಗೆ ನೀಡುತ್ತದೆ. ಆದರೆ ಗ್ರಾಮದ ಅಭಿವೃದ್ಧಿ ಮಾತ್ರ ಶೂನ್ಯ. ಬಿಡುಗಡೇ ಆದ ಹಣ ಮಾತ್ರ ಅಧಿಕಾರಿಗಳ ನುಂಗಿ ನೀರು ಕುಡಿಯುತ್ತಿದ್ದಾರೆ. ಇಂಥಹದೊಂದು ಹಗರಣವೊಂದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಮುಡಿಯನೂರು ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.

ಕೋಲಾರ: ಗ್ರಾಮಗಳು ಅಭಿವೃದ್ಧಿಗೆ ಸರ್ಕಾರ ಕೋಟಿ ಕೋಟಿ ಹಣವನ್ನು  ನೇರವಾಗಿ ಗ್ರಾಮ ಪಂಚಾಯಿತಿಗೆ ನೀಡುತ್ತದೆ. ಆದರೆ ಗ್ರಾಮದ ಅಭಿವೃದ್ಧಿ ಮಾತ್ರ ಶೂನ್ಯ. ಬಿಡುಗಡೇ ಆದ ಹಣ ಮಾತ್ರ ಅಧಿಕಾರಿಗಳ ನುಂಗಿ ನೀರು ಕುಡಿಯುತ್ತಿದ್ದಾರೆ. ಇಂಥಹದೊಂದು ಹಗರಣವೊಂದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಮುಡಿಯನೂರು ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.

ಈ ಗ್ರಾಮ ಪಂಚಾಯ್ತಿಯಲ್ಲಿ ಕಾಮಗಾರಿ ನಡೆಯದೇ ಹಣ ಡ್ರಾ ಮಾಡಿ ಗುಳುಂ ಮಾಡಲಾಗಿದೆ. ಸದ್ಯ ಆಡಳಿತದಲ್ಲಿರುವ ಗ್ರಾಮ ಪಂಚಾಯತ್ ಸದಸ್ಯರು, ಅಧ್ಯಕ್ಷರು, ಅಧಿಕಾರಿಗಳು ಕಾಮಗಾರಿಗೆ ವರ್ಷದ ಹಿಂದೆಯೇ ಹಣ ಡ್ರಾ ಮಾಡಿದ್ದಾರೆ.

ಈ ಹಗರಣದಲ್ಲಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಲಕ್ಷ್ಮೀದೇವಮ್ಮ  ಹಾಗೂ  ಅಧಿಕಾರಿಗಳು , ಸದಸ್ಯರು  ಈ ಹಗರಣದಲ್ಲಿ ಶಾಮೀಲಾಗಿದ್ದಾರೆ.

ಮುಡಿಯನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ, ಕೃಷ್ಣ ಗಿರಿ ಗ್ರಾಮದ ಸೊಣ್ಣೆಗೌಡ ಎಂಬುವರ ಮನೆಯಿಂದ  ಚರಂಡಿ ಮತ್ತು ರಸ್ತೆ ಕಾಮಗಾರಿಗೆ ರೂ.2.82 ಲಕ್ಷ  ಹಾಗೂ ವೇಮನಕುಂಟೆಯಿಂದ ಸರ್ಕಾರಿ ಕೊಳವೆ ಬಾವಿವರೆಗೂ ರಸ್ತೆಗೆ ರೂ. 2. 27 ಲಕ್ಷ ಮತ್ತು  ಕೃಷ್ಣಗಿರಿ ಗ್ರಾಮದ ಶ್ರೀನಿವಾಸಪ್ಪ ಮನೆಯಿಂದ ವೇಣುಗೋಪಾಲಪ್ಪ ಮನೆವರೆಗೂ ಚರಂಡಿ ಕೆಲಸಕ್ಕೆ ರೂ.2.86 ಲಕ್ಷ ಹಣವನ್ನು ಡ್ರಾ ಮಾಡಲಾಗಿದೆ. ಆದರೆ ಕೆಲಸ ಮಾತ್ರ ಶೂನ್ಯ.

ಗ್ರಾಮಪಂಚಾಯಿತಿ ಹಾಲಿ ಅಧ್ಯಕ್ಷ ಲಕ್ಷ್ಮೀದೇವಮ್ಮ ಕುರಿ, ದನದ ಹಟ್ಟಿ ನಿರ್ಮಾಣಕ್ಕೆ 34 ಸಾವಿರ ಹಣ ಮಂಜೂರು ಮಾಡಿಸಿಕೊಂಡಿದ್ದಾರೆ. ಆದರೆ,ಹಟ್ಟಿ ನಿರ್ಮಾಣ ಕಾರ್ಯ ಮಾತ್ರ ಆಗಿಲ್ಲ. ಆದರೆ ಪಕ್ಕದ ಗ್ರಾಮದ   ಮುನಿಯಪ್ಪ ಎಂಬುವರಿಗೆ ಸೇರಿದ್ದ ಹಟ್ಟಿಯನ್ನು ಕಟ್ಟಿ ವರ್ಷವಾದ್ರೂ ಬಿಲ್ ಮಾತ್ರ ಆಗಿಲ್ಲ.

ಒಟ್ಟಾರೆ, ಭ್ರಷ್ಟರ ಕೂಪವಾಗಿರುವ ಮುಡಿಯನೂರು ಗ್ರಾಮಪಂಚಾಯಿಗೆ ಸೇರಿದ ಮೂವತ್ತಾರು ಗ್ರಾಮಗಳಲ್ಲಿ ಅನೇಕ ಹಗರಣಗಳು ಅಡಗಿ ಕುಳತಿವೆ.  ಪ್ರಾಮಾಣಿಕ ತನಿಖೆ ನಡೆಸಿದರೆ ಅನೇಕ ಭ್ರಷ್ಟರ ಬಣ್ಣ ಬಯಲಾಗಿದೆ. ಇನ್ನಾದ್ರೂ ಈ ವರದಿ ಬಳಿಕ ಅಧಿಕಾರಿಗಳು ಎಚ್ಚೆತು  ಸೂಕ್ತ  ಕ್ರಮ ಕೈಗೊಳ್ತಾರಾ ಎಂದು ಕಾದು ನೋಡಬೇಕು.

ವರದಿ: ಕೋಲಾರದಿಂದ  ಡಿ.ಎನ್.ಲಕ್ಷ್ಮೀಪತಿ ಸುವರ್ಣ ನ್ಯೂಸ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮದುವೆ ಮಾತುಕತೆಗೆಂದು ಕರೆಸಿ ಎಂಜಿನಿಯರಿಂಗ್ ವಿದ್ಯಾರ್ಥಿಯ ಮಸಣಕ್ಕೆ ಅಟ್ಟಿದ ಗರ್ಲ್‌ಫ್ರೆಂಡ್ ಮನೆಯವರು
ಕೆನಡಾದ ಮಹಿಳಾ ವೈದ್ಯರಿಗೆ ತೋರಿಸಬಾರದನ್ನು ತೋರಿಸಿದ ಭಾರತೀಯ ಯುವಕನ ಬಂಧನ