ತ್ರಿವಳಿ ತಲಾಖ್: ಸುಪ್ರೀಂಕೋರ್ಟ್ ನಿಂದ ಸಕಾರಾತ್ಮಕ ತೀರ್ಪು ನಿರೀಕ್ಷೆ

By Suvarna Web DeskFirst Published Mar 20, 2017, 11:53 AM IST
Highlights

ಟ್ರಿಪಲ್ ತಲಾಖ್ ವಿಚಾರ ದಿನದಿಂದ ದಿನಕ್ಕೆ ತ್ವರಿತಗತಿ ಪಡೆದುಕೊಳ್ಳುತ್ತಿದ್ದು ಮಹಿಳೆಯರ ಶ್ರೇಯೋಭಿವೃದ್ಧಿಗಾಗಿ ಸುಪ್ರೀಂಕೋರ್ಟ್ ನಿಂದ ಸಕಾರಾತ್ಮಕ ತೀರ್ಪು ಹೊರಬರಬೇಕು. ಅದಕ್ಕಾಗಿ ಕಾಯುತ್ತಿದ್ದೇನೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಮಣಿಶಂಕರ್ ಅಯ್ಯರ್ ಹೇಳಿದ್ದಾರೆ.

ನವದೆಹಲಿ (ಮಾ.20): ಟ್ರಿಪಲ್ ತಲಾಖ್ ವಿಚಾರ ದಿನದಿಂದ ದಿನಕ್ಕೆ ತ್ವರಿತಗತಿ ಪಡೆದುಕೊಳ್ಳುತ್ತಿದ್ದು ಮಹಿಳೆಯರ ಶ್ರೇಯೋಭಿವೃದ್ಧಿಗಾಗಿ ಸುಪ್ರೀಂಕೋರ್ಟ್ ನಿಂದ ಸಕಾರಾತ್ಮಕ ತೀರ್ಪು ಹೊರಬರಬೇಕು. ಅದಕ್ಕಾಗಿ ಕಾಯುತ್ತಿದ್ದೇನೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಮಣಿಶಂಕರ್ ಅಯ್ಯರ್ ಹೇಳಿದ್ದಾರೆ.

ನಮ್ಮ ದೇಶದಲ್ಲಿ ತ್ರಿವಳಿ ತಲಾಖ್ ವಿಚಾರವಾಗಿ ಸಮಸ್ಯೆಗಳನ್ನು ಎದುರಿಸುತ್ತಿರುವ 10 ಲಕ್ಷ ಮಹಿಳೆಯರ ಬಗ್ಗೆ ನನಗೆ ಕಳಕಳಿಯಿದೆ. ನಾನು ಇದನ್ನು ವಿರೋಧಿಸುತ್ತೇನೆ. ಸುಪ್ರೀಂಕೋರ್ಟ್ ನಿಂದ ಸಕಾರಾತ್ಮಕ ತೀರ್ಪು ಹೊರ ಬರುತ್ತದೆ ಎಂಬ ವಿಶ್ವಾಸವಿದೆ. ಅಂದಹಾಗೆ ತ್ರಿವಳಿ ತಲಾಖ್ ಎನ್ನುವ ಪದವನ್ನು ಸುಪ್ರೀಂಕೋರ್ಟ್ ನಿಷೇಧಿಸಬೇಕು ಎಂದು ಅಯ್ಯರ್ ಹೇಳಿದ್ದಾರೆ.

ವಿವಾದಾತ್ಮಕ ವಿಚ್ಚೇದನ ಪದ್ಧಿತಿಯಾದ ತ್ರಿವಳಿ ತಲಾಖ್ ಗೆ ಪೂರ್ಣವಿರಾಮ ಇಡಬೇಕೆಂಬ ಅರ್ಜಿಗೆ ದೇಶಾದ್ಯಂತ ಮಿಲಿಯನ್ ಗಿಂತಲೂ ಹೆಚ್ಚು ಮಹಿಳೆಯರು ಕಳೆದ ವಾರ ಸಹಿ ಹಾಕಿದ್ದಾರೆ.

 

click me!