'ಗೋರಕ್ಷಣೆ'ಯ ಹಿಂಸೆ ತಡೆಗೆ ಅಧಿಕಾರಿಗಳನ್ನು ನೇಮಿಸಿ: ರಾಜ್ಯಗಳಿಗೆ ಸುಪ್ರಿಂ ಆದೇಶ

By Suvarna Web DeskFirst Published Sep 22, 2017, 8:44 PM IST
Highlights

. ಹೆದ್ದಾರಿಗಳಲ್ಲಿ ಗೋರಕ್ಷಕರ ಹೆಸರಿನಲ್ಲಿ ಪಶುಗಳನ್ನು ಸಾಗಿಸುವ ವಾಹನಗಳನ್ನು ನಿಲ್ಲಿಸಿ ತೊಂದರೆ ನೀಡುವ ಪ್ರವೃತ್ತಿಗಳು ಹೆಚ್ಚಿತ್ತಿರುವ ಕಾರಣ ಭದ್ರತೆಯನ್ನು ಹೆಚ್ಚಿಸಬೇಕು ಎಂದು ತಿಳಿಸಿದೆ.

ನವದೆಹಲಿ(ಸೆ.22): ಗೋರಕ್ಷಣೆಯ ಹೆಸರಿನಲ್ಲಿ ನಡೆಯುವ ಹಿಂಸೆ ತಡೆಗೆ ಅಕ್ಟೋಬರ್ 13ರ ಒಳಗಾಗಿ  ಪ್ರತಿ ಜಿಲ್ಲೆಗೆ ಹಿರಿಯ ಪೊಲೀಸ್ ಅಧಿಕಾರಿಗಳನ್ನು ನೇಮಿಸಬೇಕೆಂದು ಸುಪ್ರೀಂ ಕೋರ್ಟ್ ರಾಜ್ಯಗಳಿಗೆ ಆದೇಶಿಸಿದೆ.

ಜವಾಬ್ದಾರಿ ಹೊತ್ತ ಅಧಿಕಾರಿ ಗಲಭೆ ಸಂರಕ್ಷಣೆಯ ಸಂಪೂರ್ಣ ಜವಾಬ್ದಾರಿ ಹೊರಬೇಕು. ಅದೇ ರೀತಿ ಗೋ ರಕ್ಷಣೆಯ ಹೆಸರಿನಲ್ಲಿ  ಇಲ್ಲಿಯವರೆಗೂ ಗಲಭೆಯಿಂದ ಹಾನಿಗೊಳಗಾದವರಿಗೆ ಪರಿಹಾರ ಒದಗಿಸಬೇಕು.ರಾಜ್ಯಗಳು ಅಧಿಕಾರಿಗಳನ್ನು ನೇಮಿಸಲು ಒಂದು ವಾರದೊಳಗೆ ಆದೇಶ ನೀಡಬೇಕು. ಹೆದ್ದಾರಿಗಳಲ್ಲಿ ಗೋರಕ್ಷಕರ ಹೆಸರಿನಲ್ಲಿ ಪಶುಗಳನ್ನು ಸಾಗಿಸುವ ವಾಹನಗಳನ್ನು ನಿಲ್ಲಿಸಿ ತೊಂದರೆ ನೀಡುವ ಪ್ರವೃತ್ತಿಗಳು ಹೆಚ್ಚಿತ್ತಿರುವ ಕಾರಣ ಭದ್ರತೆಯನ್ನು ಹೆಚ್ಚಿಸಬೇಕು ಎಂದು ತಿಳಿಸಿದೆ.

ಕಳೆದ 3 ವರ್ಷಗಳಲ್ಲಿ ಬಿಜೆಪಿ ಅಧಿಕಾರ ಹೊಂದಿರುವ ರಾಜ್ಯಗಳಲ್ಲಿ ಗೋರಕ್ಷಕರ ಹೆಸರಿನ ಗುಂಪು ಅಮಾಯಕರ ಮೇಲೆ ಹಿಂಸೆಗಳನ್ನು ನಡೆಸಿವೆ. ಇವರ ಬಹುತೇಕ ಗುರಿ ಜಾನುವಾರು ಹಾಗೂ ಗೋಮಾಂಸ ಮಾರಾಟಗಾರರಾಗಿದ್ದಾರೆ. ರಸ್ತೆಯಲ್ಲಿ ಸಂಚರಿಸುವ ಏನು ಅರಿಯದ ಮುಗ್ಧ ರೈತರ ಮೇಲೂ ಹಲ್ಲೆಗಳು ನಡೆದಿದೆ. ಈ ಘಟನೆಗಳಲ್ಲಿ ಹಲವಾರು ಮಂದಿ ಮೃತಪಟ್ಟಿದ್ದಾರೆ. ಗೋ ರಕ್ಷಕರ ಹೆಸರಿನಲ್ಲಿ ನಡೆಯುವ ಹಿಂಸೆಯನ್ನು ಪ್ರಧಾನಿ ಮೋದಿ ಕೂಡ ಖಂಡಿಸಿದ್ದರು.    

click me!