ಗರುಡಾ ಮಾಲ್'ನಲ್ಲಿ ದಸರಾ ಕಳೆ; ಆತ್ಮೀಯವಾಗಿ ಸ್ವಾಗತಿಸುತ್ತವೆ ದಸರಾ ಬೊಂಬೆಗಳು

Published : Sep 22, 2017, 07:45 PM ISTUpdated : Apr 11, 2018, 01:03 PM IST
ಗರುಡಾ ಮಾಲ್'ನಲ್ಲಿ ದಸರಾ ಕಳೆ; ಆತ್ಮೀಯವಾಗಿ ಸ್ವಾಗತಿಸುತ್ತವೆ ದಸರಾ ಬೊಂಬೆಗಳು

ಸಾರಾಂಶ

ನವರಾತ್ರಿ ಎಂದಾಕ್ಷಣ ನೆನಪಿಗೆ ಬರೋದು ಮನೆ ಮನೆಗಳಲ್ಲಿ ಗೊಂಬೆ ಕೂರಿಸುವುದು. ಆದರೆ ಇತ್ತೀಚಿನ ದಿನಗಳಲ್ಲಿ ಆ ಸಂಪ್ರದಾಯ ತನ್ನ ಕಳೆ ಕಳೆದುಕೊಳ್ಳುತ್ತಿದೆ. ಆದರೆ ಜನರಿಗೆ ಅರಿವು ಮೂಡಿಸಿ, ಹಬ್ಬದ ಪ್ರಾಮುಖ್ಯತೆಯ ಬಗ್ಗೆ ತಿಳಿಸುವ ದೃಷ್ಟಿಯಿಂದ ನಗರದ ಗರುಡ ಮಾಲ್ ನಲ್ಲಿ ಸಂಪ್ರದಾಯಿಕ ಗೊಂಬೆಗಳನ್ನು ಕೂರಿಸಲಾಗಿದೆ.  

ಬೆಂಗಳೂರು (ಸೆ.22): ನವರಾತ್ರಿ ಎಂದಾಕ್ಷಣ ನೆನಪಿಗೆ ಬರೋದು ಮನೆ ಮನೆಗಳಲ್ಲಿ ಗೊಂಬೆ ಕೂರಿಸುವುದು. ಆದರೆ ಇತ್ತೀಚಿನ ದಿನಗಳಲ್ಲಿ ಆ ಸಂಪ್ರದಾಯ ತನ್ನ ಕಳೆ ಕಳೆದುಕೊಳ್ಳುತ್ತಿದೆ. ಆದರೆ ಜನರಿಗೆ ಅರಿವು ಮೂಡಿಸಿ, ಹಬ್ಬದ ಪ್ರಾಮುಖ್ಯತೆಯ ಬಗ್ಗೆ ತಿಳಿಸುವ ದೃಷ್ಟಿಯಿಂದ ನಗರದ ಗರುಡ ಮಾಲ್ ನಲ್ಲಿ ಸಂಪ್ರದಾಯಿಕ ಗೊಂಬೆಗಳನ್ನು ಕೂರಿಸಲಾಗಿದೆ.  

ಮಾಲ್'ನ ಒಳಗಡೆ ಪ್ರವೇಶಿಸುವ ಮುನ್ನವೇ 12/14 ಅಡಿ ಎತ್ತರದ ಈ ವಿಶೇಷ ದಸರಾ ಬೊಂಬೆಗಳು ನಿಮ್ಮನ್ನ ಆತ್ಮೀಯವಾಗಿ ಸ್ವಾಗತಿಸುತ್ತವೆ. ಈ ಬೊಂಬೆಗಳು ನಮ್ಮ ಬೊಂಬೆ ನಗರಿ ಎಂದೇ ಪ್ರತೀತಿ ಪಡೆದಿರುವ  ಚನ್ನಪಟ್ಟಣವನ್ನು ಪ್ರತಿನಿಧಿಸುತ್ತವೆ. ಇಲ್ಲಿ ಮುಖ್ಯವಾಗಿ ನಮ್ಮ ಸಂಪ್ರದಾಯದಂತೆ ಮಾಲ್ ಒಳಗೆ  ಸ್ವಾಗತಿಸಲು ಒಂದು ದ್ವಾರವನ್ನು ನಿರ್ಮಿಸಲಾಗಿದೆ.

ಇಂದು ಆರಂಭವಾದ ಈ ಗೊಂಬೆ ಕೂರಿಸುವ ಕಾರ್ಯಕ್ರಮಕ್ಕೆ ಭರ್ಜರಿ ನಟಿ ವೈಶಾಲಿ ದೀಪಿಕಾ ಚಾಲನೆ ನೀಡಿದ್ರು. ಮೈಸೂರಿಗೆ ಹೋಗಲಾಗದೇ ಇರುವವರು ಕೂಡ ಮಾಲ್ ಗೆ ಬಂದು ಸಂತಸ ವ್ಯಕ್ತಪಡಿಸಿದರು. ಹೊರಗಡೆಯಷ್ಟೆ  ಅಲ್ಲದೆ ಮಾಲ್ ನ ಒಳಗಡೆಯ ಆವರಣದಲ್ಲಿಯೂ ಕೂಡ ಪೌರಾಣಿಕ ಕಥೆಗಳನ್ನು ಹೇಳುವ ಬೊಂಬೆಗಳನ್ನು ಇಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಬಡ್ಡಿ ಟೂರ್ನಿ ವೇಳೆಯಲ್ಲೇ ಪ್ಲೇಯರ್‌ ರಾಣಾ ಬಲ್ಚೌರಿಯಾ ಕೊ*ಲೆ!
ಅತ್ಯಂತ ಕಡಿಮೆ ಬೆಲೆಯ ಹ್ಯಾಪಿ ನ್ಯೂ ಇಯರ್‌ ಪ್ಲ್ಯಾನ್‌ ರಿಲೀಸ್‌ ಮಾಡಿದ ಜಿಯೋ!