
ಬೆಂಗಳೂರು(ಆ. 24): ಶ್ರೀಸಾಮಾನ್ಯನ ಸಾಂವಿಧಾನಿಕ ಹಕ್ಕು ಕುಂಠಿತಗೊಳ್ಳುತ್ತಿದೆ ಎಂದು ಮಾಜಿ ಅಡ್ವೊಕೇಟ್ ಜನರಲ್ ರವಿವರ್ಮಕುಮಾರ್ ಖೇದ ವ್ಯಕ್ತಪಡಿಸಿದ್ದಾರೆ. ಖಾಸಗಿತನದ ಹಕ್ಕಿನ ಪರವಾಗಿ ಸುಪ್ರೀಂಕೋರ್ಟ್ ಗುರುವಾರ ಚಾರಿತ್ರಿಕ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಸುವರ್ಣನ್ಯೂಸ್'ಗೆ ರವಿವರ್ಮಕುಮಾರ್ ಪ್ರತಿಕ್ರಿಯೆ ನೀಡುತ್ತಿದ್ದರು.
ರವಿವರ್ಮಕುಮಾರ್ ಅವರು ಸುಪ್ರೀಂಕೋರ್ಟ್'ನ ಚಾರಿತ್ರಿಕ ತೀರ್ಪನ್ನು ಸ್ವಾಗತಿಸಿದರಾದರೂ ಜನಸಾಮಾನ್ಯನ ಸಾಂವಿಧಾನಿಕ ಹಕ್ಕಿನ ಬಗ್ಗೆ ಯಾರೂ ಮಾತನಾಡುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದ್ದಾರೆ.
"ಮೂಲಭೂತ ಸ್ವಾತಂತ್ರ್ಯ ಮತ್ತು ವೈಯಕ್ತಿಕ ಹಕ್ಕುಗಳು ಸಾಕಷ್ಟು ಎಗ್ಗಿಲ್ಲದೇ ಬೆಳೆಯುತ್ತಿದೆ. ಅವುಗಳ ಬಗ್ಗೆಯೇ ಎಲ್ಲರೂ ಮಾತನಾಡುತ್ತಿದ್ದಾರೆ. ಆದರೆ, ಸಂವಿಧಾನದ 4ನೇ ಭಾಗದ ಡೈರೆಕ್ಟಿವ್ ಪ್ರಿನ್ಸಿಪಲ್ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಶಿಕ್ಷಣ ಹಕ್ಕು, ವಸತಿ ಹಕ್ಕು, ಆರೋಗ್ಯ ಹಕ್ಕು ಇತ್ಯಾದಿ ಮೂಲಭೂತ ಹಕ್ಕುಗಳು ದುರ್ಬಲಗೊಳ್ಳುತ್ತಿವೆ. ಇದರ ಬಗ್ಗೆ ಯಾರೂ ಮಾತನಾಡುತ್ತಿಲ್ಲದಿರುವುದು ದುರದೃಷ್ಟಕರ.." ಎಂದು ರವಿವರ್ಮಕುಮಾರ್ ಹೇಳಿದ್ದಾರೆ.
ಇದೇ ವೇಳೆ, ಖಾಸಗಿತನದ ಹಕ್ಕು ಎತ್ತಿಹಿಡಿದ ಸುಪ್ರೀಂಕೋರ್ಟ್ ತೀರ್ಪಿಗೂ ಸರಕಾರದ ಆಧಾರ್ ಕಾರ್ಡ್ ಯೋಜನೆಗೂ ಸಂಬಂಧವಿಲ್ಲ ಎಂದು ಮಾಜಿ ಅಡ್ವೊಕೇಟ್ ಜನರಲ್ ಸ್ಪಷ್ಟಪಡಿಸಿದ್ದಾರೆ.
ಸಮುದಾಯಗಳ ನಡುವೆ ಭೇದಭಾವವಿಲ್ಲ:
ಇನ್ನು, ಸುಪ್ರೀಂಕೋರ್ಟ್ ಸಂವಿಧಾನದ ಪರಿಚ್ಛೇದ 21ರ ಅಡಿಯಲ್ಲಿ ಖಾಸಗಿತನದ ಹಕ್ಕಿನ ಬಗ್ಗೆ ತೀರ್ಪು ನೀಡಿದೆ. ಈ ಪರಿಚ್ಛೇದದ ಪ್ರಕಾರ, ಸಮುದಾಯಗಳ ನಡುವೆ, ಜಾತಿಜಾತಿಗಳ ನಡುವೆ ಭೇದಭಾವ ಮಾಡುವಂತಿಲ್ಲ. ಎಲ್ಲರಿಗೂ ಸಮಾನ ಕಾನೂನು, ಸಮಾನ ಭಾವನೆ ಇರಬೇಕೆಂಬುದು ಆಶಯವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.