
ನವದೆಹಲಿ(ಜ.10): ಸರ್ಕಾರದಿಂದ ನಡೆಯುವ ಕೇಂದ್ರೀಯ ವಿದ್ಯಾಲಯಗಳಲ್ಲಿ ಹಿಂದಿ ಪ್ರಾರ್ಥನೆ ಹಾಡುವುದನ್ನು ಪ್ರಶ್ನಿಸಿ ಸುಪ್ರಿಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ.
ಮಧ್ಯಪ್ರದೇಶದ ಜಬಲಾ'ಪುರದ ವ್ಯಕ್ತಿಯೊಬ್ಬರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು(ಪಿಐಎಲ್) ವಿಚಾರಣೆ ನಡೆಸಿದ ಸುಪ್ರಿಂ ಕೋರ್ಟ್, ದೇಶದ 1100ಕ್ಕೂ ಕೇಂದ್ರೀಯ ವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಂದ ಬೆಳಗಿನ ಸಮಯ ಒಂದು ಧರ್ಮದ ಪ್ರಾರ್ಥನೆ ಅದರಲ್ಲೂ ಮುಖ್ಯವಾಗಿ ಹಿಂದಿಯಲ್ಲಿ ಹಾಡಿಸಲಾಗುತ್ತದೆ. ಈ ರೀತಿ ಹಾಡುವುದು ಸಂವಿಧಾನದ ಉಲ್ಲಂಘನೆಯಾಗಿದೆ' ಎಂದು ಕೋರ್ಟ್ ತಿಳಿಸಿದೆ.
ಸರ್ಕಾರದ ವತಿಯಿಂದ ನಡೆಯುವ ಶಾಲೆಗಳಲ್ಲಿ 'ಅಸ್ತೋ ಮಾ ಸದ್ಗಮಯ' ರೀತಿಯ ಒಂದು ಧರ್ಮದ ಶ್ಲೋಕಗಳನ್ನು ಹಾಡಿಸುವುದು' ಸಂವಿಧಾನದ ವಿರೋಧಿ ನಡೆಯಾಗುತ್ತದೆ. ಹಿಂದಿ ಶ್ಲೋಕಗಳನ್ನು 1962ರಿಂದಲೂ ಕೇಂದ್ರೀಯ ವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಂದ ಹೇಳಿಸಲಾಗುತ್ತಿದೆ. ಕೇಂದ್ರೀಯ ವಿದ್ಯಾಲಯಗಳಲ್ಲಿ ಇತರ ಧರ್ಮದವರು ಶಿಕ್ಷಣ ಪಡೆಯುತ್ತಿರುವ ಕಾರಣ' ಹಿಂದೂ ಧರ್ಮದ ಪ್ರಾರ್ಥನೆಗಳು' ಬಲವಂತದಿಂದ ಹೇಳಿಸಿದಂತಾಗುತ್ತದೆ' ಎಂದು ಕೋರ್ಟ್ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.