ಪ್ರಾಮಾಣಿಕತೆಗೆ ಮಾದರಿಯಾದ ಬೆಂಗಳೂರಿನ ಆಟೋ  ಡ್ರೈವರ್

By Suvarna Web DeskFirst Published Jan 10, 2018, 2:42 PM IST
Highlights
  • ಪ್ರಯಾಣಿಕರೊಬ್ಬರು ಮರೆತುಹೋದ ಸುಮಾರು 2 ಲಕ್ಷ ರೂ.ವಿದ್ದ ಬ್ಯಾಗ್
  • ಪೊಲೀಸರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ ಶಿವಾಜಿನಗರದ ಆಟೋ ಚಾಲಕ ಸುಹೇಲ್ ಪಾಷಾ

ಬೆಂಗಳೂರು: ಪ್ರಯಾಣಿಕರೊಬ್ಬರು ಮರೆತುಹೋದ, ಸುಮಾರು 2 ಲಕ್ಷ ರೂ.ವಿದ್ದ ಬ್ಯಾಗನ್ನು ಮರಳಿಸಿ,  ಆಟೋ ರಿಕ್ಷಾ ಚಾಲಕರೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ.

2 ಲಕ್ಷಕ್ಕಿಂತಲೂ ಹೆಚ್ಚು ಹಣವಿದ್ದ ಬ್ಯಾಗನ್ನು ಪೊಲೀಸರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ ಶಿವಾಜಿನಗರದ ಆಟೋ ಚಾಲಕ ಸುಹೇಲ್ ಪಾಷಾ.

ಸುಹೇಲ್ ಪಾಷಾ ಖುದ್ದು ಪೊಲೀಸ್ ಆಯುಕ್ತರ ಕಛೇರಿಗೆ ಬಂದು ಪೊಲೀಸರಿಗೆ ಹಣ ಒಪ್ಪಿಸಿದ್ದಾರೆ. ಚರ್ಚ್ ಸಿಬ್ಬಂದಿ ದಿವ್ಯಶ್ರೀ ಎಂಬುವವರಿಗೆ ಸೇರಿದ ಹಣವಾಗಿತ್ತು.

ನಿನ್ನೆ ಶಿವಾಜಿನಗರದಲ್ಲಿ ದಿವ್ಯಶ್ರೀಯವರನ್ನು ಪಿಕ್ ಮಾಡಿದ್ದ ಪಾಷಾ, ಇನ್’ಫ್ಯಾಂಟ್ರಿ ರಸ್ತೆಯಲ್ಲಿ ಬಿಟ್ಟಿದ್ದರು.  

ಇನ್’ಫ್ಯಾಂಟ್ರಿ ರಸ್ತೆಯ ಬ್ಯಾಂಕೊಂದಕ್ಕೆ ಕಟ್ಟಲು ದಿವ್ಯಶ್ರಿ 7 ಬ್ಯಾಗ್ ನಲ್ಲಿ 15 ಲಕ್ಷ ಹಣವನ್ನು ಕೊಂಡೊಯ್ದಿದ್ದರು. ಆದರೆ ಇಳಿಯುವ ಹೊತ್ತಿಗೆ ಹಣವಿದ್ದ 6 ಬ್ಯಾಗ್’ಗಳನ್ನ ತೆಗೆದುಕೊಂಡು 2ಲಕ್ಷವಿದ್ದ ಒಂದು ಹಣದ ಬ್ಯಾಗನ್ನು ಮರೆತಿದ್ದಾರೆ.

ಈ ಬಗ್ಗೆ ದಿವ್ಯಶ್ರೀ ಕರ್ಮಷಿಯಲ್ ಪೊಲೀಸ್ ಠಾಣೆಯಲ್ಲಿ ದೂರನ್ನು ಕೂಡಾ ದಾಖಲಿಸಿದ್ದರು. ಆದರೆ, ಪಾಷಾ ಆಟೋದಲ್ಲಿ ಸಿಕ್ಕ ಹಣವನ್ನು ಪೊಲೀಸರಿಗೆ ತಾನೇ ಒಪ್ಪಿಸಿದ್ದಾರೆ.

click me!