ಗರಂಆದ ಸುಪ್ರಿಂ ಕೋರ್ಟ್: 6 ತಿಂಗಳಲ್ಲಿ 2ಜಿ ಹಗರಣ ಪೂರ್ಣಗೊಳಿಸುವಂತೆ ಸಿಬಿಐ,ಇಡಿಗೆ ನಿರ್ದೇಶನ

Published : Mar 12, 2018, 03:58 PM ISTUpdated : Apr 11, 2018, 01:12 PM IST
ಗರಂಆದ ಸುಪ್ರಿಂ ಕೋರ್ಟ್: 6 ತಿಂಗಳಲ್ಲಿ 2ಜಿ ಹಗರಣ ಪೂರ್ಣಗೊಳಿಸುವಂತೆ ಸಿಬಿಐ,ಇಡಿಗೆ ನಿರ್ದೇಶನ

ಸಾರಾಂಶ

ವಿಚಾರಣೆಗಳು ಧೀರ್ಘ ಸಮಯಪಡೆದುಕೊಂಡರೆ ಸಾಮಾನ್ಯ ಜನತೆ ನಂಬಿಕೆ ಕಳೆದುಕೊಳ್ಳುತ್ತಾರೆ' ಎಂದು ಆತಂಕ ವ್ಯಕ್ತಪಡಿಸಿದೆ.

ನವದೆಹಲಿ(ಮಾ.12): 2ಜಿ ಹಗರಣದ ಬಗ್ಗೆ ಗರಂ ಆಗಿರುವ ಸುಪ್ರಿಂ ಕೋರ್ಟ್ ಇನ್ನು 6 ತಿಂಗಳಲ್ಲಿ ಹಗರಣ ಹಾಗೂ ಅದಕ್ಕೆ ಸಂಬಂಧಿಸಿದ ವಿಷಯಗಳನ್ನು ಇತ್ಯರ್ಥಗೊಳಿಸುವಂತೆ ಕೇಂದ್ರೀಯ ತನಿಖಾ ಸಂಸ್ಥೆಗಳಾದ ಸಿಬಿಐ ಹಾಗೂ ಇಡಿಗೆ ಸೂಚಿಸಿವೆ.

ವಿಚಾರಣೆ ನಡೆಸಿದ ಅರುಣ್ ಮಿಶ್ರಾ ಹಾಗೂ ನವೀನ್ ಸಿನ್ಹಾ ನೇತೃತ್ವದ ಪೀಠ 2ಜಿ ಹಗರಣ, ಹಾಗೂ ಅದಕ್ಕೆ ಸಂಬಂಧಿಸಿದ ಏರ್'ಸೆಲ್-ಮ್ಯಾಕ್ಸಿಸ್ ಒಪ್ಪಂದಗಳನ್ನು ತನಿಖೆ ನಡೆಸುವಂತೆ ಸೂಚಿಸಿದೆ. ವಿಚಾರಣೆಗಳು ಧೀರ್ಘ ಸಮಯಪಡೆದುಕೊಂಡರೆ ಸಾಮಾನ್ಯ ಜನತೆ ನಂಬಿಕೆ ಕಳೆದುಕೊಳ್ಳುತ್ತಾರೆ' ಎಂದು ಆತಂಕ ವ್ಯಕ್ತಪಡಿಸಿದೆ.

ಸುಪ್ರೀಂ ಕೋರ್ಟ್ 2ಜಿ ಹಗರಣಕ್ಕೆ ಸಂಬಂಧಿಸಿದಂತೆ 2014ರಲ್ಲಿ ನೇಮಿಸಲಾಗಿದ್ದ ವಿಶೇಷ ಸರ್ಕಾರಿ ಅಭಿಯೋಜಕರಾದ ಆನಂದ್ ಗ್ರೋವರ್ ಅವರನ್ನು ಸೇವೆಯಿಂದ ಬಿಡುಗಡೆಗೊಳಿಸಿದ್ದು, ಅದೇ ಸ್ಥಾನಕ್ಕೆ ಹೆಚ್ಚುವರಿ ಸಾಲಿಟರಲ್ ಜನರಲ್ ತುಶಾರ್ ಮೆಹತ್ ಅವರನ್ನು ನಿಯೋಜಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಆಜಾನ್‌ ಚರ್ಚೆ ವೇಳೆ ದೀಪಾವಳಿ ಪಟಾಕಿ ವಿಚಾರ ಎತ್ತಿದ ಖಂಡ್ರೆ ಕೈ-ಬಿಜೆಪಿ ನಡುವೆ ಗದ್ದಲ
ಶಿವಾನಂದ ಮಠದ ಸರಸ್ವತಿ ಸ್ವಾಮಿಯ ಕಾಮ ಪುರಾಣ; ಬೆತ್ತಲೆಯಾಗಿ ಎಣ್ಣೆ ಮಸಾಜ್ ಮಾಡಿಸ್ಕೊಂಡ!