ಪ್ರಧಾನಿ ಮೋದಿಗೆ ಪ್ರತಿಷ್ಠಿತ ಶಾಂತಿ ಪ್ರಶಸ್ತಿ

By Web DeskFirst Published Oct 25, 2018, 11:49 AM IST
Highlights

ಅಂತಾರಾಷ್ಟ್ರೀಯ ಸಹಕಾರ ಮತ್ತು ಜಾಗತಿಕ ಆರ್ಥಿಕ ಪ್ರಗತಿಗೆ ಉತ್ತೇಜನ ನೀಡಿದ್ದನ್ನು ಪರಿಗಣಿಸಿ ಪ್ರಶಸ್ತಿಗೆ ಮೋದಿ ಅವರನ್ನು 2018ನೇ ಸಾಲಿನ ಸೋಲ್‌ ಶಾಂತಿ ಪ್ರಶಸ್ತಿಗೆ  ಆಯ್ಕೆ ಮಾಡಲಾಗಿದೆ. 

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 2018ನೇ ಸಾಲಿನ ಸೋಲ್‌ ಶಾಂತಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಅಂತಾರಾಷ್ಟ್ರೀಯ ಸಹಕಾರ ಮತ್ತು ಜಾಗತಿಕ ಆರ್ಥಿಕ ಪ್ರಗತಿಗೆ ಉತ್ತೇಜನ ನೀಡಿದ್ದನ್ನು ಪರಿಗಣಿಸಿ ಪ್ರಶಸ್ತಿಗೆ ಮೋದಿ ಅವರನ್ನು ಆಯ್ಕೆ ಮಾಡಲಾಗಿದೆ. 

ರಿಪಬ್ಲಿಕ್‌ ಕೊರಿಯಾ ಜೊತೆಗಿನ ಭಾರತದ ಸಂಬಂಧವನ್ನು ಇನ್ನಷ್ಟುಗಟ್ಟಿಗೊಳಿಸುವ ಉದ್ದೇಶದಿಂದ ಪ್ರಶಸ್ತಿ ಸ್ವೀಕರಿಸಲು ಮೋದಿ ಅವರು ಒಪ್ಪಿಕೊಂಡಿದ್ದಾರೆ ಮತ್ತು ತಮ್ಮನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿರುವುದಕ್ಕೆ ಮೋದಿ ಅವರು ಕೃತಜ್ಞತೆ ಅರ್ಪಿಸಿದ್ದಾರೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.

ವಿಶ್ವ, ಮೋದಿ ಅವರನ್ನು ಬರಮಾಡಿಕೊಂಡಿದೆ. ಮೋದಿನೋಮಿಕ್ಸ್‌ ಎಂಬ ಪರಿಕಲ್ಪನೆಯ ಮೂಲಕ ಭಾರತ ಮತ್ತು ವಿಶ್ವದ ಆರ್ಥಿಕ ಪ್ರಗತಿಗೆ ಕೊಡುಗೆ ನೀಡಿದ್ದನ್ನು ಪರಿಗಣಿಸಿ ಪ್ರತಿಷ್ಠಿತ ಸೋಲ್‌ ಶಾಂತಿ ಪ್ರಶಸ್ತಿ- 2018ಕ್ಕೆ ಮೋದಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ವಿದೇಶಾಂಗ ಸಚಿವಾಲಯದ ಅಧಿಕಾರಿ ರವೀಶ್‌ ಕುಮಾರ ಟ್ವೀಟ್‌ ಮಾಡಿದ್ದಾರೆ. 

ಕೋರಿಯಾ ಜನರ ಶಾಂತಿ ಬಯಕೆಯ ಧ್ಯೋತಕವಾಗಿ 1990ರಲ್ಲಿ ಸ್ಥಾಪಿಸಲಾದ ಸೋಲ್‌ ಶಾಂತಿ ಪ್ರಶಸ್ತಿ ಸ್ಥಾಪಿಸಲಾಗಿದೆ. ಮೋದಿ ಈ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವ 14ನೇ ವ್ಯಕ್ತಿಯಾಗಿದ್ದಾರೆ.

click me!