ಮಹಾತ್ಮ ಗಾಂಧಿ ಹತ್ಯೆ ಮರುತನಿಖೆಯ ಅರ್ಜಿ: ಅಮಿಕಸ್ ಕ್ಯೂರಿ ನೇಮಿಸಿದ ಸುಪ್ರಿಂ

Published : Oct 06, 2017, 08:02 PM ISTUpdated : Apr 11, 2018, 12:39 PM IST
ಮಹಾತ್ಮ ಗಾಂಧಿ ಹತ್ಯೆ ಮರುತನಿಖೆಯ ಅರ್ಜಿ: ಅಮಿಕಸ್ ಕ್ಯೂರಿ ನೇಮಿಸಿದ ಸುಪ್ರಿಂ

ಸಾರಾಂಶ

ಅರ್ಜಿ ವಿಚಾರಣೆಗೆ ಪುರಸ್ಕರಿಸಿರುವ ಸುಪ್ರೀಕೋರ್ಟ್​​, ಸುಮಾರು ಹದಿನೈದು ನಿಮಿಷಗಳ ಕಾಲ ವಿಚಾರಣೆ ನಡೆಸಿತು. ಗಾಂಧಿ ಹತ್ಯೆ ಪುನರ್‌‌ ತನಿಖೆ ವಿಷಯದಲ್ಲಿ ನ್ಯಾಯಾಲಯದ ಮಾರ್ಗದರ್ಶಿಯಾಗಿ ಹಿರಿಯ ವಕೀಲ ಹಾಗೂ ಮಾಜಿ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅಮರೇಂದ್ರ ಶರಣ್‌ ಅವರನ್ನು ನೇಮಿಸಿತು.

ನವದೆಹಲಿ(ಅ.06): ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹತ್ಯೆ ಪ್ರಕರಣದ ತನಿಖೆಯನ್ನು ಪುನರಾರಂಭಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಕೈಗೆತ್ತಿಕೊಂಡಿದೆ.

ವಿಚಾರಣೆಯಲ್ಲಿ ಕೆಲ ಶೋಧಕ ಪ್ರಶ್ನೆಗಳನ್ನು ಮುಂದಿರಿಸಿದೆ. ಗಾಂಧಿ ಅವರ ಹತ್ಯೆಯನ್ನು ಅನೇಕ ಕಾರಣಗಳ ಮೇಲೆ ತನಿಖೆ ನಡೆಸಬೇಕಿದ್ದು, ಪ್ರಕರಣ ಪುನರಾರಂಭಿಸುವ ಅಗತ್ಯವಿದೆ ಎಂದು ಮುಂಬೈ ಮೂಲದ ಸಂಶೋಧಕ ಹಾಗೂ ಅಭಿನವ್‌ ಭಾರತ್‌ ಟ್ರಸ್ಟಿ ಪಂಕಜ್‌ ಫ‌ಡ್ನಿ ಎಂಬುವವರು ಸುಪ್ರೀಂ ಕೋರ್ಟ್‌‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆಗೆ ಪುರಸ್ಕರಿಸಿರುವ ಸುಪ್ರೀಕೋರ್ಟ್​​, ಸುಮಾರು ಹದಿನೈದು ನಿಮಿಷಗಳ ಕಾಲ ವಿಚಾರಣೆ ನಡೆಸಿತು. ಗಾಂಧಿ ಹತ್ಯೆ ಪುನರ್‌‌ ತನಿಖೆ ವಿಷಯದಲ್ಲಿ ನ್ಯಾಯಾಲಯದ ಮಾರ್ಗದರ್ಶಿಯಾಗಿ ಹಿರಿಯ ವಕೀಲ ಹಾಗೂ ಮಾಜಿ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅಮರೇಂದ್ರ ಶರಣ್‌ ಅವರನ್ನು ನೇಮಿಸಿತು.

ಅಲ್ಲದೇ ಮುಂದಿನ ವಿಚಾರಣೆಯನ್ನು ಅಕ್ಟೋಬರ್‌ 30ಕ್ಕೆ ನಿಗದಿ ಮಾಡಿತು. ಗಾಂಧಿ ಅವರನ್ನು 1948ರ ಜನವರಿ 30ರಂದು ದೆಹಲಿಯಲ್ಲಿ ನಾಥೂರಾಮ್​​ ಗೋಡ್ಸೆ ಗುಂಡಿಟ್ಟು ಹತ್ಯೆಗೈದಿದ್ದರು. ಮಹಾತ್ಮಾ ಗಾಂಧಿ ಹತ್ಯೆ ಇತಿಹಾಸದ ಹಿಂದೆ ದೊಡ್ಡ ಮುಸುಕಿದೆ. ಹತ್ಯೆಯಲ್ಲಿ 'ವಿದೇಶಿ ಕೈವಾಡ' ಎಂದು ಅರ್ಜಿದಾರ ಪಂಕಜ್‌ ಫ‌ಡ್ನಿ ಆರೋಪಿಸಿದ್ದಾರೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೊಲ್ಲೂರು ದೇವಳ ಹೆಸರಲ್ಲಿ ನಕಲಿ ವೆಬ್‌ಸೈಟ್: ಭಕ್ತರಿಗೆ ವಂಚಿಸುತ್ತಿದ್ದ ಆರೋಪಿ ನಾಸೀರ್ ಹುಸೇನ್ ಬಂಧನ
ಬಂಗಾಳದಲ್ಲಿ ಶೀಘ್ರ ಜಂಗಲ್‌ ರಾಜ್ಯ ಅಂತ್ಯ : ಮೋದಿ ಪಣ