ವಿವಿಪ್ಯಾಟ್ ರಹಿತ ಇವಿಎಂ ಬಳಕೆ: ಪ್ರತಿಕ್ರಿಯೆ ಕೋರಿ ಕೇಂದ್ರ, ಚು.ಆಯೋಗಕ್ಕೆ ಸುಪ್ರೀಂ ನೋಟಿಸ್

Published : Apr 13, 2017, 12:09 PM ISTUpdated : Apr 11, 2018, 12:56 PM IST
ವಿವಿಪ್ಯಾಟ್ ರಹಿತ ಇವಿಎಂ ಬಳಕೆ: ಪ್ರತಿಕ್ರಿಯೆ ಕೋರಿ ಕೇಂದ್ರ, ಚು.ಆಯೋಗಕ್ಕೆ ಸುಪ್ರೀಂ ನೋಟಿಸ್

ಸಾರಾಂಶ

ವಿವಿಪ್ಯಾಟ್ ರಹಿತ ವಿದ್ಯುನ್ಮಾನ ಮತಯಂತ್ರಗಳ ಬಳಕೆಯನ್ನು ಪ್ರಶ್ನಿಸಿ ಬಿಎಸ್ಪಿ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಈ ಸಂಬಂಧ  ಚುನಾವಣಾ ಆಯೋಗ, ಹಾಗೂ ಕೇಂದ್ರ ಸರ್ಕಾರಕ್ಕೆ ಪ್ರತಿಕ್ರಿಯೆ ಕೇಳಿದೆ.

ನವದೆಹಲಿ (ಏ.13): ವಿವಿಪ್ಯಾಟ್ ರಹಿತ ವಿದ್ಯುನ್ಮಾನ ಮತಯಂತ್ರಗಳ ಬಳಕೆಯನ್ನು ಪ್ರಶ್ನಿಸಿ ಬಿಎಸ್ಪಿ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಈ ಸಂಬಂಧ  ಚುನಾವಣಾ ಆಯೋಗ, ಹಾಗೂ ಕೇಂದ್ರ ಸರ್ಕಾರಕ್ಕೆ ಪ್ರತಿಕ್ರಿಯೆ ಕೇಳಿದೆ.

ಮೇ. 8 ರಂದು ವಿಚಾರಣೆ ನಡೆಯಲಿದ್ದು ಅಷ್ಟರೊಳಗೆ ಪ್ರತಿಕ್ರಿಯೆ ನೀಡಿ ಎಂದು ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ನ್ಯಾ. ಚಲಮೇಶ್ವರ್ ನ್ಯಾಯಪೀಠವು ನೋಟಿಸ್ ನೀಡಿದೆ.

ವಿಚಾರಣೆ ವೇಳೆ ಬಿಸ್ಪಿ ಪರ ವಕೀಲ ಪಿ. ಚಿದಂಬರಂ, ವಿವಿಪ್ಯಾಟ್ ಇಲ್ಲದೇ ಇವಿಎಂ ಬಳಸುವುದರಿಂದ ಮತದಾರನಿಗೆ ತಾನು ಯಾರಿಗೆ ಮತ ಹಾಕಿದ್ದೇನೆಂದು ದೃಢವಾಗುವುದಿಲ್ಲ. ಹಾಗಾಗಿ ಮತದಾನದ ನಿಖರತೆ ಬಗ್ಗೆ ಅನುಮಾನ ಏಳುತ್ತದೆ. ಇವಿಎಂಗಳಲ್ಲಿ ವಂಚನೆ ಮಾಡುವ ಸಾಧ್ಯತೆಯಿರುತ್ತದೆ. ಈ ಮಷಿನ್ ನ ಹಾರ್ಡ್ ವೇರ್ ಹಾಗೂ ಸಾಫ್ಟ್ ವೇರ್ ಎರಡನ್ನು ಸುಲಭವಾಗಿ ಹ್ಯಾಕ್ ಮಾಡಬಹುದು ಎಂದು ಹೇಳಿದ್ದಾರೆ.

ಹಿರಿಯ ವಕೀಲ ಕಪಿಲ್ ಸಿಬಲ್, ಈ ವಿಚಾರದಲ್ಲಿ ಕಾಂಗ್ರೆಸ್ ಮಧ್ಯಪ್ರವೇಶಿಸಲು ಇಚ್ಚಿಸುತ್ತದೆ. ಜಗತ್ತಿನಲ್ಲಿ 1 ದೇಶವನ್ನು ಹೊರತುಪಡಿಸಿ ಉಳಿದೆಲ್ಲಾ ದೇಶಗಳು ಇವಿಎಂ ಯಂತ್ರಗಳನ್ನು ಬಳಸುತ್ತಿದೆ. ಪ್ರತಿಯೊಂದು ಟೆಕ್ನಾಲಜಿಯನ್ನು ಹ್ಯಾಕ್ ಮಾಡಬಹುದು ಎಂದಿದ್ದಾರೆ.      

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Darshan The Devil Movie: ಕಾಲವೇ ಸತ್ಯ ಹೇಳುತ್ತದೆ. ಸಮಯವೇ ಉತ್ತರಿಸುತ್ತದೆ-ಜೈಲಿನಿಂದಲೇ ದರ್ಶನ್‌ ಮೆಸೇಜ್
ಅಕ್ಕಿ ಅಕ್ರಮದಲ್ಲಿ ಬಿಜೆಪಿಯವರೇ ಶಾಮೀಲು: ಸಚಿವ ಪ್ರಿಯಾಂಕ್ ಖರ್ಗೆ