ಮತದಾರರ ಜೊತೆ ಜೆಡಿಎಸ್'ಗೆ ಸಿಎಂ ಧನ್ಯವಾದ, ಬಿಜೆಪಿ ಮುಖಂಡರ ಬಗ್ಗೆ ಟೀಕೆ

Published : Apr 13, 2017, 10:37 AM ISTUpdated : Apr 11, 2018, 12:45 PM IST
ಮತದಾರರ ಜೊತೆ ಜೆಡಿಎಸ್'ಗೆ ಸಿಎಂ ಧನ್ಯವಾದ, ಬಿಜೆಪಿ ಮುಖಂಡರ ಬಗ್ಗೆ ಟೀಕೆ

ಸಾರಾಂಶ

ಯಡಿಯೂರಪ್ಪ ನಾನೆ ಅಭ್ಯರ್ಥಿ ಎಂದುಕೊಂಡು ಮತ ಹಾಕಿ ಎಂದು ಪ್ರಚಾರ ಸಭೆಯಲ್ಲಿ ಮಾತನಾಡಿದ್ದಾರೆ. ಆದರೆ ಮತದಾರ ಪ್ರಭುಗಳು ರಾಜ್ಯ ಸರ್ಕಾರದ ಅಭಿವೃದ್ಧಿ ಸಾಧನೆಯನ್ನು ಮಚ್ಚಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಚುನಾಯಿಸಿದ್ದಾರೆ.ಅವರಿಗೆ ಕೋಟಿ ಕೋಟಿ ಪ್ರಣಾಮಗಳು. ನಮ್ಮ ಸರ್ಕಾರ ಹಾಗೂ ಮಂತ್ರಿ ಮಂಡಲದಲ್ಲಿ ಒಗ್ಗಟ್ಟಿದೆ. ಅದಕ್ಕೆ ಎಲ್ಲರೂ ಒಟ್ಟಿಗೆ ಕೆಲಸ ಮಾಡಿದ್ದಾರೆ' ಎಂದು ನಮ್ಮಲ್ಲಿ ಒಗ್ಗಟ್ಟಿಲ್ಲ ಎನ್ನುತ್ತಿದ್ದವರಿಗೆ ಮುಖ್ಯಮಂತ್ರಿಗಳು ಪರೋಕ್ಷ ಉತ್ತರ ನೀಡಿದರು.

ಬೆಂಗಳೂರು(ಏ.13): ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಸಾಧಿಸಿದ್ದಕ್ಕೆ ಮತದಾರರು, ಕಾರ್ಯಕರ್ತರು, ಜೆಡಿಎಸ್ ಮುಖಂಡರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಧನ್ಯವಾದ ಸಲ್ಲಿಸಿದ್ದಾರೆ.

ಸುದ್ದಿಗಾರರೊಂದಿಗೆ ಗೃಹಕಚೇರಿ ಕೃಷ್ಣದಲ್ಲಿ ಮಾತನಾಡಿದ ಅವರು,ಈ ಗೆಲುವು ನಮ್ಮ ಕಾರ್ಯಕರ್ತರಿಗೆ ಉತ್ಸಾಹ ನೀಡಿದೆ. ಮುಂದಿನ ಚುನಾವಣೆಯಲ್ಲೂ ಜಯಗಳಿಸುವ ವಿಶ್ವಾಸ ಮೂಡಿಸಿದೆ. ಮೋದಿ ಅಲೆ ರಾಜ್ಯದಲ್ಲೂ ಬೀಸುತ್ತೆ ಎಂದು ಭಾವಿಸಿದ್ದರು. ಯುಪಿ ಚುನಾವಣೆ ಬಳಿಕ ಇಲ್ಲೂ ಹೀಗೆ ಆಗುತ್ತೆಂದು ತಿಳಿದುಕೊಂಡಿದ್ದರು. ಆದರೆ ಕರ್ನಾಟಕ ಬಸವಣ್ಣ, ಸೂಫಿ ಸಂತರ ನಾಡು. ಅದಕ್ಕೆ ಇಲ್ಲಿ ಅವಕಾಶವಿಲ್ಲ. ಕಾಂಗ್ರೆಸ್ ಮುಕ್ತ ಮಾಡ್ತಿವಿ ಅಂದಿದ್ದವರು ಇದೀಗ ಭ್ರಮನಿರಸನಗೊಂಡಿದ್ದಾರೆ ಬಿಜೆಪಿ ಮುಖಂಡರ ಮಾತುಗಳಿಗೆ ತಿರುಗೇಟು ನೀಡಿದರು.

ಯಡಿಯೂರಪ್ಪ ನಾನೆ ಅಭ್ಯರ್ಥಿ ಎಂದುಕೊಂಡು ಮತ ಹಾಕಿ ಎಂದು ಪ್ರಚಾರ ಸಭೆಯಲ್ಲಿ ಮಾತನಾಡಿದ್ದಾರೆ. ಆದರೆ ಮತದಾರ ಪ್ರಭುಗಳು ರಾಜ್ಯ ಸರ್ಕಾರದ ಅಭಿವೃದ್ಧಿ ಸಾಧನೆಯನ್ನು ಮಚ್ಚಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಚುನಾಯಿಸಿದ್ದಾರೆ.ಅವರಿಗೆ ಕೋಟಿ ಕೋಟಿ ಪ್ರಣಾಮಗಳು. ನಮ್ಮ ಸರ್ಕಾರ ಹಾಗೂ ಮಂತ್ರಿ ಮಂಡಲದಲ್ಲಿ ಒಗ್ಗಟ್ಟಿದೆ. ಅದಕ್ಕೆ ಎಲ್ಲರೂ ಒಟ್ಟಿಗೆ ಕೆಲಸ ಮಾಡಿದ್ದಾರೆ' ಎಂದು ನಮ್ಮಲ್ಲಿ ಒಗ್ಗಟ್ಟಿಲ್ಲ ಎನ್ನುತ್ತಿದ್ದವರಿಗೆ ಮುಖ್ಯಮಂತ್ರಿಗಳು ಪರೋಕ್ಷ ಉತ್ತರ ನೀಡಿದರು.

ಜೆಡಿಎಸ್'ಗೆ ಧನ್ಯವಾದಗಳು

ಚುನಾವಣೆಯಲ್ಲಿ ಪರೋಕ್ಷವಾಗಿ ಸಹಕರಿಸಿದ ಜೆಡಿಎಸ್ ಅಧ್ಯಕ್ಷರು, ರಾಜ್ಯಧ್ಯಕ್ಷ ಕುಮಾರಸ್ವಾಮಿ, ವರಿಷ್ಠ ದೇವೇಗೌಡರು ಹಾಗೂ ಜೆಡಿಎಸ್ ಕಾರ್ಯಕರ್ತರಿಗೆ ಧನ್ಯವಾದಗಳು. ಕಾಂಗ್ರೆಸ್ ಈ ಜಯ ಮುಂದಿನ 2019ರ  ಲೋಕಸಭೆ ಚುನಾವಣೆಯಲ್ಲಿ ಗೆಲುವಿಗೆ ಕಾರಣವಾಗಲಿದೆ. ಈ ಚುನಾವಣೆ ಮುಂಬರುವ ಚುನಾವಣೆ ದಿಕ್ಸೂಚಿಯಲ್ಲ. ಆದರೆ ಯಡಿಯೂರಪ್ಪ ಮಾತ್ರ ದಿಕ್ಸೂಚಿ ಅಂತಾ ಹೇಳಿದ್ದರು. ಸಂಸತ್ತಿಗೆ ಹೋಗದೇ  ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಅಲ್ಲೇ ಠಿಕಾಣಿ ಹೂಡಿದ್ದರು. ಯಾವುದೇ ಸಾಧನೆಗಳನ್ನು ಇಟ್ಟುಕೊಂಡು ಅವರು ಚುನಾವಣೆ ಮಾಡಲಿಲ್ಲ. ಕೇವಲ ಒಣ ಜಂಬದ ಮಾತನ್ನಾಡಿ, ಕೀಳುಮಟ್ಟದ ಆರೋಪವನ್ನು ಮಾತ್ರ ಮಾಡಿದರು ಎಂದು ಬಿಜೆಪಿ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಾವು ಸರ್ಕಾರದ ಸಾಧನೆಗಳನ್ನಿಟ್ಟುಕೊಂಡು ಜನರ ಮುಂದೆ ಹೋಗಿದ್ದೆವು. ಜನರ ಮನಸ್ಸನ್ನ ಅರ್ಥ ಮಾಡಿಕೊಳ್ಳಲು ಈ ಚುನಾವಣೆ ಅನುಕೂಲವಾಗಿದೆ. ಜನರು ನಮ್ಮ ಸರ್ಕಾರದ ಕಾರ್ಯಗಳನ್ನು ಮೆಚ್ಚಿಕೊಂಡಿದ್ದಾರೆ. ನಾವು ಮಾಡಿದ ಕಾರ್ಯಕ್ರಮಗಳಿಗೆ ಮತದ ರೂಪದಲ್ಲಿ ಕೂಲಿ ಕೊಡಿ ಅಂತಾ ಜನರಲ್ಲಿ ಮನವಿ ಮಾಡಿದ್ದೆ.  ಪರಿಣಾಮ ಎರಡು ಕ್ಷೇತ್ರದಲ್ಲಿ ಅಭೂತಪೂರ್ವ ಬೆಂಬಲ ನೀಡಿದ್ದಾರೆ. ಯಡಿಯೂರಪ್ಪ ಏಕವಚನದಲ್ಲಿ ಅಯೋಗ್ಯ ಮುಖ್ಯಮಂತ್ರಿ ಅಂತಾ ಮಾತಾಡಿದ್ದರು.ನಾನು ಯಾರನ್ನೂ ಕೂಡಾ ವೈಯಕ್ತಿಕವಾಗಿ ಟೀಕೆ ಮಾಡಿಲ್ಲ. ಶ್ರೀನಿವಾಸ ಪ್ರಸಾದ'ರ ಹೆಸರನ್ನು ನಾನು ಪ್ರಚಾರದ ವೇಳೆ ಪ್ರಸ್ತಾಪ ಮಾಡಲಿಲ್ಲ. ಜನರು ಪ್ರಭುದ್ಧರಾಗಿದ್ದಾರೆ. ಜಾತಿ, ಧರ್ಮ ಮೀರಿ ಮತ ಹಾಕಿದ್ದಾರೆ. ಯಡಿಯೂರಪ್ಪ ಜಾತಿ, ಧರ್ಮದ ಮೂಲಕ ಪ್ರಚಾರ ಮಾಡಿದರು.ಜಾತಿ ಮೇಲೆ ಮತ ಕೇಳಿದ್ದರು. ಸಮಾಜ ಒಡೆಯೋ ಕೆಲಸ ಮಾಡಿದರು. ಆದರೆ ಅವರ ಯಾವ ಕಾರ್ಯತಂತ್ರಗಳು ಸಫಲಗೊಳ್ಳಲಿಲ್ಲ ಎಂದು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಣವೀರ್ ನಟನೆಯ ಧುರಂಧರ್ ಸಿನಿಮಾದ ಕತೆ ಭಾರತೀಯ ಸೇನೆಯ ಹೀರೋ ಮೇಜರ್ ಮೋಹಿತ್ ಶರ್ಮಾ ಅವರದ್ದಾ?
ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?