24 ವಾರಗಳ ಭ್ರೂಣವನ್ನು ತೆಗೆಸಲು ಸುಪ್ರೀಂಕೋರ್ಟ್ ಅನುಮತಿ

By Suvarna Web DeskFirst Published Feb 7, 2017, 1:11 PM IST
Highlights

ಮುಂಬೈ ಮೂಲದ ಮಹಿಳೆಯೊಬ್ಬಳಿಗೆ 6 ತಿಂಗಳ ಭ್ರೂಣವನ್ನು ಗರ್ಭಪಾತ ಮಾಡಿಸಿಕೊಳ್ಳಲು ಮೆಡಿಕಲ್ ಟರ್ಮಿನೇಶನ್ ಆಫ್ ಪ್ರೆಗ್ನೆನ್ಸಿ ಕಾಯ್ದೆಯಡಿ ಸುಪ್ರೀಂಕೋರ್ಟ್ ಅನುಮತಿ ನೀಡಿದೆ.

ನವದೆಹಲಿ (ಫೆ.7): ಮುಂಬೈ ಮೂಲದ ಮಹಿಳೆಯೊಬ್ಬಳಿಗೆ 6 ತಿಂಗಳ ಭ್ರೂಣವನ್ನು ಗರ್ಭಪಾತ ಮಾಡಿಸಿಕೊಳ್ಳಲು ಮೆಡಿಕಲ್ ಟರ್ಮಿನೇಶನ್ ಆಫ್ ಪ್ರೆಗ್ನೆನ್ಸಿ ಕಾಯ್ದೆಯಡಿ ಸುಪ್ರೀಂಕೋರ್ಟ್ ಅನುಮತಿ ನೀಡಿದೆ.

ಮುಂಬೈ ಮೂಲದ 22 ವರ್ಷದ ಗರ್ಭಿಣಿ ಮಹಿಳೆಯ 24 ವಾರಗಳ ಭ್ರೂಣದಲ್ಲಿ ಕಿಡ್ನಿಯಿಲ್ಲ. ಜನನದ ಬಳಿಕ ಶಿಶು ಬದುಕುವ ಸಾಧ್ಯತೆಯಿಲ್ಲವೆಂದು ಕೆಇಎಂ ಆಸ್ಪತ್ರೆ ಮೆಡಿಕಲ್ ವರದಿ ನೀಡಿತ್ತು. ಗರ್ಭಪಾತ ಮಾಡದೇ ಇದ್ದರೆ ತಾಯಿಯ ಜೀವಕ್ಕೆ ಅಪಾಯವಿದೆ ಎಂದು ವೈದ್ಯರು ತಿಳಿಸಿದ್ದರು. ಹಾಗಾಗಿ ಆ ಮಹಿಳೆ ಕೋರ್ಟ್ ಮೆಟ್ಟಿಲೇರಿದ್ದರು.

ಭ್ರೂಣದಲ್ಲಿ ಕಿಡ್ನಿಯಿಲ್ಲದಿರುವುದು, ತಾಯಿಯ ಜೀವಕ್ಕೆ ಅಪಾಯವಿರುವುದನ್ನು ಮನಗಂಡ ಸುಪ್ರೀಂಕೋರ್ಟ್ ಗರ್ಭಪಾತಕ್ಕೆ ಅನುಮತಿ ನೀಡಿದೆ.

   

click me!