ಕೋರ್ಟ್ ಹಾಲ್ ನಲ್ಲಿ ಪತ್ರಕರ್ತರಿಗೆ ಮೊಬೈಲ್ ಬಳಕೆಗೆ ಅವಕಾಶ

First Published Jun 25, 2018, 7:46 PM IST
Highlights
  • ಕೋರ್ಟ್ ಹಾಲ್'ನಲ್ಲಿ  ಮಾಧ್ಯಮ ವ್ಯಕ್ತಿಗಳು/ಪತ್ರಕರ್ತರಿಗೆ ಮೊಬೈಲ್ ಹೊಂದಿರಲು ಅನುಮತಿ
  • ಮೊಬೈಲ್ ಫೋನ್'ಗಳನ್ನು ಸೈಲೆಂಟ್ ಮೂಡಿನಲ್ಲಿ ಇಡಬೇಕಾಗುತ್ತದೆ

ನವದೆಹಲಿ[ಜೂ.25]: ಕೋರ್ಟ್ ಹಾಲ್'ನಲ್ಲಿ ಪತ್ರಕರ್ತರಿಗೆ ಮೊಬೈಲ್ ಬಳಕೆಗೆ ಸುಪ್ರಿಂ ಕೋರ್ಟ್ ಅವಕಾಶ ನೀಡಿದೆ.

ಮಾನ್ಯ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಇಂದು ಹೊರಡಿಸಿರುವ ಆದೇಶದಂತೆ ಮಾಧ್ಯಮ ವ್ಯಕ್ತಿಗಳು/ಪತ್ರಕರ್ತರಿಗೆ ಮೊಬೈಲ್ ಹೊಂದಿರಲು ಅನುಮತಿ ನೀಡಲಾಗಿದೆ.ರಿಜಿಸ್ಟ್ರಾರ್ ಅವರಿಂದ 6 ತಿಂಗಳ ಪಾಸ್ ಪಡೆದುಕೊಳ್ಳುವುದು ಕಡ್ಡಾಯವಾಗಿದೆ.

ಕೋರ್ಟ್ ಕೊಠಡಿಯಲ್ಲಿ ಮೊಬೈಲ್ ಫೋನ್'ಗಳನ್ನು ಸೈಲೆಂಟ್ ಮೂಡಿನಲ್ಲಿ ಇಡಬೇಕಾಗುತ್ತದೆ. ಒಂದು ವೇಳೆ ಕೋರ್ಟ್ ಹಾಲಿನಲ್ಲಿ ಮೊಬೈಲ್ ಫೋನ್ ರಿಂಗಣಿಸುವುದು ಸೇರಿದಂತೆ ಕಲಾಪಗಳಿಗೆ ತೊಂದರೆ ನೀಡಿದರೆ ನ್ಯಾಯಾಲಯದ ಅಧಿಕಾರಿಗಳು ಪೋನ್ ವಶಪಡಿಸಿಕೊಂಡು ಹೆಚ್ಚುವರಿ ರಿಜಿಸ್ಟ್ರಾರ್ [ಭದ್ರತೆ] ಅವರಿಗೆ ಹಸ್ತಾಂತರಿಸುತ್ತಾರೆ.

click me!