ಎಟಿಎಂ ನಲ್ಲಿ ಹಣ ತೆಗೆಯುವುದಕ್ಕೆ ಎಸ್ ಬಿಐ ಮಿತಿ : ಎಷ್ಟಕ್ಕಿದೆ ಅವಕಾಶ..?

By Web DeskFirst Published Oct 1, 2018, 11:07 AM IST
Highlights

ಎಸ್ ಬಿಐ ಇದೀಗ ಎಟಿಎಂ ನಿಂದ ಹಣವನ್ನು ತೆಗೆಯುವುದಕ್ಕೆ ಮಿತಿಯನ್ನು ಹೇರಿದೆ. ಇನ್ನು ಮುಂದೆ ದಿನಕ್ಕೆ ನೀವು ಇಷ್ಟೇ ಹಣವನ್ನು ತೆಗೆಯಲು ಮಾತ್ರ ಅವಕಾಶವಿದೆ. 

ನವದೆಹಲಿ :  ಎಸ್ ಬಿಐ ಇದೀಗ ದಿನಕ್ಕೆ ತನ್ನ ಕ್ಯಾಶ್ ವಿತ್ ಡ್ರಾ ಮಾಡಲು ಮಿತಿಯನ್ನು ಹೇರುತ್ತಿದೆ. ಈ ನಿಯಮ ಅಕ್ಟೋಬರ್ 31ರ ನಂತರ ಜಾರಿಗೆ ಬರಲಿದೆ. 

ಮಿತಿಯಲ್ಲಿ ಒಂದು ದಿನಕ್ಕೆ 20 ಸಾವಿರ ಮಾತ್ರ ತೆಗೆಯಬಹುದಾಗಿದೆ. ಸದ್ಯ 40 ಸಾವಿರ ಮಿತಿ ಇದ್ದು ಇನ್ನು ಮುಂದೆ ದಿನಕ್ಕೆ 20 ಸಾವಿರಕ್ಕೆ ಮಿತಿ ಹೇರಲಾಗುತ್ತಿದೆ. 

ಎಟಿಎಂ ವ್ಯವಹಾರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸಮಸ್ಯೆಗಳ ಬಗ್ಗೆ ದೂರುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. 

ಅಲ್ಲದೇ ಡಿಜಿಟಲ್ ವ್ಯವಹಾರಕ್ಕೆ ಹೆಚ್ಚು ಒತ್ತು ನೀಡುವ ಹಿನ್ನೆಲೆಯಲ್ಲಿ  ಎಸ್ ಬಿಐ ಮಿತಿಯನ್ನು ಹೇರಿದೆ. 

ಕಳೆದ ಒಂದು ದಶಕದಲ್ಲಿ ಎಟಿಎಂ  ದುರುಪಯೋಗ ಪಡಿಸಿಕೊಳ್ಳುತ್ತಿರುವ ಸಂಖ್ಯೆಯೂ ಕೂಡ ಹೆಚ್ಚು ಕೇಳಿಬರುತ್ತಿದ್ದು ಈ ಎಲ್ಲಾ ವಿಚಾರಗಳಿಗೂ ಕೂಡ ಕಡಿವಾಣ ಹಾಕುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. 

click me!