
ನವದೆಹಲಿ(ನ.13): ಕೇಂದ್ರ ಸರ್ಕಾರ ಕಪ್ಪು ಹಣವನ್ನು ತಡೆಗಟ್ಟಲು ಮಾಡಿರುವ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು , ಒಟ್ಟಾರೆ 2ಲಕ್ಷ ಕೋಟಿ ಹಣ ಬ್ಯಾಂಕುಗಳಲ್ಲಿ ಜಮೆ ಆಗಿದೆ.
ವಿವಿಧ ಬ್ಯಾಂಕುಗಳಲ್ಲಿ 2 ಲಕ್ಷ ಕೋಟಿ ಹಣ ಜಮೆ
ಕಪ್ಪು ಹಣದ ವಿರುದ್ಧ ಸಮರ ಸಾರಿರುವ ಕೇಂದ್ರ ಸರ್ಕಾರ ಜನರ ಬಳಿಯಿರುವ ಹಳೆಯ 500 ಮತ್ತು 1000 ಮುಖ ಬೆಲೆಯ ನೋಟುಗಳನ್ನು ಬದಲಿಸಿಕೊಳ್ಳಲು ದೇಶದ ಜನರಿಗೆ ಸೂಚನೆ ನೀಡಿದೆ. ಜನರು ಕಳೆದ 5 ದಿನಗಳಿಂದ ತಮ್ಮ ಬಳಿ ಇರುವ 500 ಹಾಗೂ 1000 ಮುಖ ಬೆಲೆಯ ನೋಟುಗಳನ್ನು ಬ್ಯಾಂಕ್'ಗಳಲ್ಲಿ ಡೆಪಾಸಿಟ್ ಮಾಡುತ್ತಿದ್ದಾರೆ. ಅಚ್ಚರಿ ಎಂದರೆ ನಿನ್ನೆ ಮಧ್ಯಾಹ್ನ 12.15ರ ವೇಳೆಗೆ 2 ಲಕ್ಷ ಕೋಟಿ ಹಣ ವಿವಿಧ ಬ್ಯಾಂಕ್ ಗಳಲ್ಲಿ ಜಮೆ ಆಗಿದೆ.
ಹಣ ಸಂಗ್ರಹದಲ್ಲಿ ಎಸ್ಬಿಐಗೆ ಅಗ್ರ ಸ್ಥಾನ
ಗ್ರಾಹಕರು ಹೆಚ್ಚಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಹಣ ತುಂಬಿದ್ದು , 47, 868 ಕೋಟಿ ಹಣವನ್ನು ಡೆಪಾಸಿಟ್ ಮಾಡಿದ್ದಾರೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಜನ್ ಧನ್ ಅಕೌಂಟ್ಗಳಲ್ಲೂ ಹಣದ ಹೊಳೆ!
ಇದಿಷ್ಟೇ ಅಲ್ಲದೆ ಪ್ರಧಾನಿ ಮೋದಿಯವರ ಯೋಜನೆಗಳಲ್ಲೊಂದಾದ ಜನ್ಧನ್ ಯೋಜನೆಯಲ್ಲೂ ಜನರು ಹಣ ತುಂಬಿದ್ದು , ಅದರಲ್ಲೂ ಹಣ ಏರಿಕೆಯಾಗಿದೆ. ಬಡತನ ನಿರ್ಮೂಲನೆ ಮಾಡುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಯಿತು. ಇದೀಗ ಜನರು ಹಣ ವಿನಿಮಯಕ್ಕೆ ಮುಂದಾಗಿದ್ದಾರೆ. ಹೀಗಾಗಿ ಈ ಯೋಜನೆ ಮೇಲೆ ಅಧಿಕಾರಿಗಳು ನಿಗಾ ಇಟ್ಟಿದ್ದಾರೆ. ಒಟ್ಟಿನಲ್ಲಿ ಕೇಂದ್ರ ಸರ್ಕಾರ ಕಪ್ಪು ಹಣದ ವಿರುದ್ಧ ಸಮರ ಸಾರಿದ್ದು ಇದಕ್ಕೆ ದೇಶದ ನಾಗರೀಕರು ಉತ್ತಮವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.