
ಮುಂಬಯಿ: ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ನಿರ್ವಹಿಸದ ಗ್ರಾಹಕರ ಮೇಲೆ ವಿಧಿಸುವ ಸೇವಾ ದರ ಹೆಚ್ಚಿಸಿದ್ದಕ್ಕೆ ಅಪಾರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಈ ಶುಲ್ಕವನ್ನು ಕಡಿಮೆ ಮಾಡಿದ್ದು, ಏಪ್ರಿಲ್ 1 ರಿಂದ ಹೊಸ ದರ ಅನ್ವಯವಾಗಲಿದೆ.
ಮೆಟ್ರೋ ಹಾಗೂ ನಗರ ಪ್ರದೇಶಗಳಲ್ಲಿ ಸರಾಸರಿ ಮಾಸಿಕ ಬ್ಯಾಲೆನ್ಸ್ ನಿರ್ವಹಿಸದ ಖಾತೆದಾರರಿಗೆ ಇದುವರೆಗೆ ವಿಧಿಸುತ್ತಿದ್ದ 50 ರೂ. ಸೇವಾ ದರ ಹಾಗೂ ಜಿಎಸ್‌ಟಿಯನ್ನು ಇನ್ನು ಮುಂದೆ 15 ರೂ ಹಾಗೂ ಜಿಎಸ್‌ಟಿ ವಿಧಿಸಲಾಗುತ್ತದೆ. ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಇಷ್ಟು ದಿನ 40 ರೂ. ಮತ್ತು ಜಿಎಸ್‌ಟಿ ವಿಧಿಸಲಾಗುತ್ತಿದ್ದು, ಇನ್ನು ಮುಂದೆ 10 ರೂ. ಹಾಗೂ ಜಿಎಸ್‌ಟಿ ವಿಧಿಸಬೇಕಾಗುತ್ತದೆ.
ಲಾಭಕ್ಕಿಂತಲೂ, ಕನಿಷ್ಠ ಠೇವಣಿ ನಿರ್ವಹಿಸಲಾಗದ ಗ್ರಾಹಕರಿಂದ ಸಂಗ್ರಹಿಸುವ ದಂಡವೇ ಎಸ್‌ಬಿಐಗೆ ಹೆಚ್ಚಿದ್ದು, ಗ್ರಾಹಕರಿಂದ ತೀವ್ರ ಟೀಕೆಗೆ ಒಳಗಾಗಿತ್ತು. ಅದರಲ್ಲಿಯೂ ಈ ರೀತಿ ವಿಧಿಸುವ ಶುಲ್ಕದಿಂದ ಕಡಿಮೆ ಠೇವಣಿ ಇಡುವ ಬಡವರು ಹಾಗೂ ವಿದ್ಯಾರ್ಥಿಗಳು ಇರೋ ಬರೋ ಅಲ್ಪ ಸ್ವಲ್ಪ ಠೇವಣಿಯನ್ನೂ ಕಳೆದುಕೊಳ್ಳುವಂತಾಗಿತ್ತು.
ಗ್ರಾಹಕರ ಭಾವನೆಗಳನ್ನು ಅರಿತು, ಬ್ಯಾಂಕ್ ಇಂಥದ್ದೊಂದು ಕ್ರಮಕ್ಕೆ ಮುಂದಾಗಿದೆ. ಅಲ್ಲದೇ ರೆಗ್ಯುಲರ್ ಸೇವಿಂಗ್ಸ್ ಬ್ಯಾಂಕ್ ಖಾತೆಯಿಂದ, ಮೂಲ ಸೇವಿಂಗ್ಸ್ ಖಾತೆಗೂ ಬದಲಾಯಿಸುವ ಅವಕಾಶವನ್ನು ಬ್ಯಾಂಕ್ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.