
ನವದೆಹಲಿ (ಮಾ. 13): ದೇಶದಲ್ಲೇ ಶ್ರೀಮಂತ ಸಂಸದೆ ಜಯಾ ಬಚ್ಚನ್ ..! ಜಯಾ ಬಚ್ಚನ್ ಆಸ್ತಿ ಮೌಲ್ಯ 1,000 ಕೋಟಿ ರೂ! ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ರಾಜ್ಯಸಭೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸುವ ವೇಳೆ ಆಸ್ತಿ ವಿವರ ಬಹಿರಂಗಗೊಂಡಿದೆ.
2012 ರಲ್ಲಿ 492 ಕೋಟಿ ರೂ. ಆಸ್ತಿ ಮೌಲ್ಯ ಹೊಂದಿದ್ದ ಜಯಾ- ಅಮಿತಾಬ್ ದಂಪತಿ ಬಳಿ 62 ಕೋಟಿ ರೂ ಮೌಲ್ಯದ ಚಿನ್ನಾಭರಣ ಇದೆ ಎಂದು ಹೇಳಲಾಗಿತ್ತು. 13 ಕೋಟಿ ಮೌಲ್ಯದ 12 ವಾಹನಗಳು 1 ರೋಲ್ಸ್‌ರಾಯ್ಸ್, 3 ಮರ್ಸಿಡಿಸ್, 1 ಪೋರ್ಶೆ, 1 ರೇಂಜ್ ರೋವರ್ ಕಾರುಗಳಿವೆ. ಅಮಿತಾಬ್ ಬಳಿ 1 ನ್ಯಾನೋ ಕಾರು, 1 ಟ್ರ್ಯಾಕ್ಟರ್ ಕೂಡ ಇದೆ ಎನ್ನಲಾಗಿದೆ. ಒಟ್ಟು ಚರಾಸ್ತಿ ಮೌಲ್ಯ 540 ಕೋಟಿ ರೂ.ಗೆ ಏರಿದೆ. ನೋಯಿಡಾ, ಭೋಪಾಲ್, ಪುಣೆ, ಅಹಮದಾಬಾದ್ , ಗಾಂಧಿನಗರ, ಫ್ರಾನ್ಸ್’ನಲ್ಲೂ ಆಸ್ತಿ ಹೊಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.