
ಮುಂಬೈ: ಮೊಬೈಲ್ ಇ-ವ್ಯಾಲೆಟ್ ಬಳಸಿ ಎಟಿಎಂನಲ್ಲಿ ಹಣ ವಿತ್‌ಡ್ರಾವಲ್ ಮಾಡುವ ಅವಕಾಶವನ್ನು ತನ್ನ ಗ್ರಾಹಕರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೀಡಲಿದೆ. ಜೂನ್ 1ರಿಂದ ಇದು ಜಾರಿಗೆ ಬರಲಿದೆ. ಆದರೆ ಮೊಬೈಲ್ ಇ-ವ್ಯಾಲೆಟ್ ಬಳಸಿ ಎಟಿಎಂನಲ್ಲಿ ಹಣ ತೆಗೆದರೆ ಪ್ರತಿ ವಹಿವಾಟಿಗೆ 25 ರು. ಶುಲ್ಕ ವಿಧಿಸಲಾಗುತ್ತದೆ.
‘ಎಸ್‌ಬಿಐ ಬಡಿ' ಹೆಸರಿನ ಮೊಬೈಲ್ ವ್ಯಾಲೆಟ್‌ನಿಂದ ಎಟಿಎಂಗಳಲ್ಲಿ ಹಣ ಹಿಂಪಡೆಯಬಹುದು. ಇದೇ ವೇಳೆ ಎಸ್‌ಬಿಐನ ವ್ಯವಹಾರ ಪ್ರತಿನಿಧಿಗಳ ಮೂಲಕ ಗ್ರಾಹಕರು ತಮ್ಮ ಮೊಬೈಲ್ ವ್ಯಾಲೆಟ್‌ಗೆ ಅಥವಾ ವ್ಯಾಲೆಟ್‌ನಿಂದ ಹಣ ಹಾಕಬಹುದು ಅಥವಾ ಹಿಂಪಡೆಯಬಹುದು. ಈ ಮುನ್ನ ಈ ವ್ಯವಸ್ಥೆ ಇರಲಿಲ್ಲ ಎಂದು ಎಸ್‌ಬಿಐ ವ್ಯವಸ್ಥಾಪಕ ನಿರ್ದೇಶಕ (ರಾಷ್ಟ್ರೀಯ ಬ್ಯಾಂಕಿಂಗ್) ರಜನೀಶ್ ಕುಮಾರ್ ಹೇಳಿದ್ದಾರೆ.
ಈ ರೀತಿ ವ್ಯವಹಾರ ಪ್ರತಿನಿಧಿಗಳ ಮೂಲಕ ನಡೆಯುವ 1000 ರು.ವರೆಗಿನ ಜಮೆಗೆ ಪ್ರತಿ ವಹಿವಾಟಿಗೆ 0.25ರಷ್ಟು(ಕನಿಷ್ಠ 2 ರು. ಹಾಗೂ ಗರಿಷ್ಠ 8 ರು.+ಸೇವಾ ತೆರಿಗೆ) ಸೇವಾ ಶುಲ್ಕ ವಿಧಿಸಲಾಗುತ್ತದೆ. ಇನ್ನು ವ್ಯವಹಾರ ಪ್ರತಿನಿಧಿಗಳ ಮೂಲಕ ನಡೆವ 2000 ರು.ವರೆಗಿನ ಹಿಂತೆಗೆತಕ್ಕೆ ಶೇ.2.5ರಷ್ಟುಸೇವಾ ಶುಲ್ಕ (ಕನಿಷ್ಠ 6 ರು.+ಸೇವಾ ತೆರಿಗೆ) ವಿಧಿಸಲಾಗುತ್ತದೆ. ಎಸ್‌ಬಿಐ ಬಡಿ ಮೂಲಕ ಐಎಂಪಿಎಸ್ ಸೇವೆಯ ಮೂಲಕ ನಡೆಯುವ ಫಂಡ್ ಟ್ರಾನ್ಸಫರ್‌ಗಳಿಗೆ ಶೇ.3 ಸೇವಾ ಶುಲ್ಕ+ಸೇವಾ ತೆರಿಗೆ ಹಾಕಲಾಗುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.