‘ಬೆಂಕಿ ಯಾಕ್‌ ಹಾಕ್ತಾರೆ? ಬೆಂಕಿ ಹಾಕೋದ್ರಿಂದ ಏನ್‌ ಸಿಗುತ್ತೆ?...': ವನ್ಯಜೀವಿ ಸಂರಕ್ಷಣಾ ಅಭಿಯಾನದ ಮೊದಲ ಹೆಜ್ಜೆ

By Suvarna Web DeskFirst Published Apr 24, 2017, 2:58 PM IST
Highlights

‘ಬೆಂಕಿ ಯಾಕ್‌ ಹಾಕ್ತಾರೆ? ಬೆಂಕಿ ಹಾಕೋದ್ರಿಂದ ಏನ್‌ ಸಿಗುತ್ತೆ?...' ಇದು ಕನ್ನಡಪ್ರಭ, ಸುವರ್ಣ ನ್ಯೂಸ್‌ ‘ವನ್ಯಜೀವಿ ಸಂರಕ್ಷಣೆ' ಮಹಾ ಅಭಿಯಾನದ ಅಂಗವಾಗಿ ಬಂಡೀ ಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಅಭಿಯಾನದ ರಾಯಭಾರಿ ಹಾಗೂ ಬಹುಭಾಷಾ ನಟ ಪ್ರಕಾಶ್‌ ರೈ ತಮ್ಮದೇ ಶೈಲಿಯಲ್ಲಿ ಮಹಿಳಾ ಸಿಬ್ಬಂದಿಯನ್ನು ಪ್ರಶ್ನಿಸಿದ ಶೈಲಿ. ಬಂಡೀಪುರದಲ್ಲಿ ಸೋಮವಾರ ಬೆಳಗ್ಗೆ ಅರಣ್ಯ ಇಲಾಖೆಯ ಪುರುಷ ಹಾಗೂ ಮಹಿಳಾ ಸಿಬ್ಬಂದಿ ಜೊತೆ ಪ್ರತ್ಯೇಕವಾಗಿ ಸಂವಾದ ನಡೆಸಿದ ರೈ, ಕಾಡು ಹಾಗೂ ಪ್ರಾಣಿ ಸಂರಕ್ಷಣೆ ಸಂಬಂಧ ಚರ್ಚೆ ನಡೆಸಿ ದರು. ಬೆಂಕಿ ಯಾಕ್‌ ಹಾಕ್ತಾರೆ? ಬೆಂಕಿ ಹಾಕೋದ್ರಿಂದ ಏನ್‌ ಸಿಗುತ್ತೇ? ಎಂದು ರೈ ಪ್ರಶ್ನಿಸಿದರು.

‘ಬೆಂಕಿ ಯಾಕ್‌ ಹಾಕ್ತಾರೆ? ಬೆಂಕಿ ಹಾಕೋದ್ರಿಂದ ಏನ್‌ ಸಿಗುತ್ತೆ?...'

ಇದು ಕನ್ನಡಪ್ರಭ, ಸುವರ್ಣ ನ್ಯೂಸ್‌ ‘ವನ್ಯಜೀವಿ ಸಂರಕ್ಷಣೆ' ಮಹಾ ಅಭಿಯಾನದ ಅಂಗವಾಗಿ ಬಂಡೀ ಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಅಭಿಯಾನದ ರಾಯಭಾರಿ ಹಾಗೂ ಬಹುಭಾಷಾ ನಟ ಪ್ರಕಾಶ್‌ ರೈ ತಮ್ಮದೇ ಶೈಲಿಯಲ್ಲಿ ಮಹಿಳಾ ಸಿಬ್ಬಂದಿಯನ್ನು ಪ್ರಶ್ನಿಸಿದ ಶೈಲಿ. ಬಂಡೀಪುರದಲ್ಲಿ ಸೋಮವಾರ ಬೆಳಗ್ಗೆ ಅರಣ್ಯ ಇಲಾಖೆಯ ಪುರುಷ ಹಾಗೂ ಮಹಿಳಾ ಸಿಬ್ಬಂದಿ ಜೊತೆ ಪ್ರತ್ಯೇಕವಾಗಿ ಸಂವಾದ ನಡೆಸಿದ ರೈ, ಕಾಡು ಹಾಗೂ ಪ್ರಾಣಿ ಸಂರಕ್ಷಣೆ ಸಂಬಂಧ ಚರ್ಚೆ ನಡೆಸಿ ದರು. ಬೆಂಕಿ ಯಾಕ್‌ ಹಾಕ್ತಾರೆ? ಬೆಂಕಿ ಹಾಕೋದ್ರಿಂದ ಏನ್‌ ಸಿಗುತ್ತೇ? ಎಂದು ರೈ ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮಹಿಳಾ ಸಿಬ್ಬಂದಿಯೊಬ್ಬರು, ಕಾಡಂಚಿನ ಗ್ರಾಮಸ್ಥರು ಮೇವಿಗಾಗಿ ಜಾನುವಾರು ಗಳನ್ನು ಕಾಡಿಗೆ ಬಿಡಲು ಬಂದಾಗ ನಾವು ಅದಕ್ಕೆ ಅವಕಾಶ ನೀಡುವುದಿಲ್ಲ. ಅಲ್ಲದೇ ಕಾಡಂಚಿನ ಜಮೀ ನುಗಳಿಗೆ ಕಾಡಾನೆ ದಾಳಿ ಮಾಡುವುದರಿಂದ ಬೆಳೆ ನಷ್ಟವಾಗುತ್ತದೆ. ಜೊತೆಗೆ ಕಾಡಿನಿಂದ ಸೌದೆ ತರಲು ಅವಕಾಶ ನೀಡದಿದ್ದಾಗ ಆಕ್ರೋಶಗೊಳ್ಳುವ ಕಾಂಚಿನ ಗ್ರಾಮಸ್ಥರು ಕಾಡಿಗೆ ಬೆಂಕಿ ಹಾಕುತ್ತಾರೆ ಎಂದರು. ‘ಕಾಡು ಕಾಪಾಡಬೇಕಲ್ವಮ್ಮ, ತಳಮಟ್ಟದಲ್ಲಿ ಕಾಡಂಚಿನ ಗ್ರಾಮಸ್ಥರೊಂದಿಗೆ ಮಾತನಾಡಿ. ಕಾಡು ಹಾಗೂ ಪ್ರಾಣಿಗಳ ಸಂರಕ್ಷಣೆಗೆ ಬಗ್ಗೆ ಗಮನ ಸೆಳೆಯುವ ಕೆಲಸ ಮಾಡಲಾಗುತ್ತದೆ' ಎಂದು ಪ್ರಕಾಶ್‌ರೈ ತಿಳಿಸಿದರು.

ಪುರುಷ ಸಿಬ್ಬಂದಿಯೊಂದಿಗೆ ರೈ ಸಂವಾದ ನಡೆಸಿದಾಗ, ಇಲಾಖೆಯಲ್ಲಿನ ಸಿಬ್ಬಂದಿ ಕೊರತೆ ಇರುವುದನ್ನು ತಿಳಿಸಿದರು. ಜತೆಗೆ ಅರಣ್ಯಾಧಿಕಾರಿಗಳ ಜೊತೆಯಲ್ಲೂ ಜನರು ಏಕವಚನದಲ್ಲಿ ಮಾತನಾಡುವ ವಿಷಯವನ್ನು ಗಾರ್ಡ್‌​ ವೊಬ್ಬರು ತಿಳಿಸಿದರು. ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ.ಹೀರಾಲಾಲ್‌ ಮಾತನಾಡಿ, ಕಾಡಂಚಿನ ಗ್ರಾಮಸ್ಥರಿಗೆ ನೀಡುವ ಗ್ಯಾಸ್‌ ಸಂಪರ್ಕವನ್ನು ಕೆಲವರು ದುಡ್ಡಿನಾಸೆಗೆ ಮಾರಿಕೊಳ್ಳು ತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು. ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರ ಮುಂದಾಗಿದೆ. ಆದರೆ ಭರ್ತಿಯಾದ ಹುದ್ದೆಗಳಿಗೆ ಬಂದವರು ಕೆಲ ಕಾಲ ಕೆಲಸ ಮಾಡಿ ಬೇರೇನೋ ಕಾರಣ ನೀಡಿ ಬೇರೆಡೆ ತೆರಳುತ್ತಿದ್ದಾರೆ ಎಂದರು. ಕಾಡು ಮತ್ತು ಪ್ರಾಣಿಗಳ ಸಂರಕ್ಷಣೆಗೆ ಜನರ ಸಹಭಾಗಿತ್ವದ ಅಗತ್ಯವಾಗಿದೆ. ಈ ಕೆಲಸ ಮಹಾ ಅಭಿಯಾನದ ರಾಯ​ಭಾರಿ ಪ್ರಕಾಶ್‌ ರೈ ಮಾಡಲಿದ್ದಾರೆ ಎಂದರು. ಜನರಿಗೆ ಜಾಗೃತಿ: ಕಾಡು ಮತ್ತು ವನ್ಯಜೀವಿಗಳ ಬಗ್ಗೆ ಜನರಿಗೆ ಜಾಗೃತಿ ಬೇಕಾಗಿದೆ ಎಂದು ನಟಿ ಭಾವನಾ ಹೇಳಿದರು. ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಹೋದ ಕಡೆಯಲ್ಲ ಮಾಡುತ್ತಿದ್ದೇನೆ. ಹಳ್ಳಿ ಅಥವಾ ನಗರ ಪ್ರದೇಶಗಳ ಜನರಿಗೂ ಪ್ರಕೃತಿ ಬೇಕಾಗಿದ್ದು, ಈ ನಿಟ್ಟಿನಲ್ಲಿ ಮಾಧ್ಯಮಗಳು ಕಾಡು ಉಳಿಸಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತಸ ತಂದಿದೆ ಎಂದು ಹೇಳಿದರು.

ಅಲ್ಲದೇ ಬಂಡೀಪುರ ವಂಡರ್‌ಫುಲ್‌ ಕುಳ್ಳನಬೆಟ್ಟದ ಮೇಲೆ ನಿಂತು ಬಂಡೀಪುರ ಅರಣ್ಯದ ವಲಯವನ್ನು ಪ್ರಕಾಶ್‌ ರೈ ವೀಕ್ಷಿ ಸಿದರು. ನಂತರ ಸಂದರ್ಶನ ಪುಸ್ತಕದಲ್ಲಿ ಬಂಡೀಪುರ ವಂಡರ್‌ಫುಲ್‌ ಎಂದು ನಮೂದಿಸಿ​ದರು. ಬಳಿಕ ಸಫಾರಿ ವಾಹನ ಏರಿದ ಅವರಿಗೆ ಸಫಾರಿ ಸಮಯದಲ್ಲಿ ಆನೆ, ಸಂಬಾರ್‌, ನವಿಲು, ಜಿಂಕೆ, ಹದ್ದುಗಳು ಪ್ರಕಾಶ್‌ ರೈಗೆ ದರ್ಶನ ನೀಡಿದವು

click me!