ತೆಲುಗಿನ ಖ್ಯಾತ ನಿರ್ದೇಶಕ ಕೆ. ವಿಶ್ವನಾಥ್'ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ

By Suvarna Web DeskFirst Published Apr 24, 2017, 1:31 PM IST
Highlights

2016ನೇ ಸಾಲಿನ ಪ್ರಶಸ್ತಿಯನ್ನು ಕಸನಾಥುನಿ ವಿಶ್ವನಾಥ್ ಎಂದೇ ಪ್ರಸಿದ್ಧರಾದ ಇವರಿಗೆ ನೀಡಬೇಕೆಂದು ದಾದಾ ಸಾಹೇಬ್ ಫಾಲ್ಕೆ ಸಮಿತಿ ಮಾಡಿದ ಶಿಪಾರಸ್ಸನ್ನು ಕೇಂದ್ರ ಮಾಹಿತಿ ಮತ್ತು ವಾರ್ತಾ ಸಚಿವ ಅನುಮೋದಿಸಿದ್ದಾರೆ.

ನವದೆಹಲಿ(ಏ.24): ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕ ಕೆ. ವಿಶ್ವನಾಥ್ ಅವರಿಗೆ ಭಾರತೀಯ ಸಿನಿಮಾ ರಂಗದ ಅತ್ಯುತ್ತಮ ಪ್ರಶಸ್ತಿ ಎಂದೇ ಪರಿಗಣಿಸಲಾದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ದೊರೆತಿದೆ.

2016ನೇ ಸಾಲಿನ ಪ್ರಶಸ್ತಿಯನ್ನು ಕಸನಾಥುನಿ ವಿಶ್ವನಾಥ್ ಎಂದೇ ಪ್ರಸಿದ್ಧರಾದ ಇವರಿಗೆ ನೀಡಬೇಕೆಂದು ದಾದಾ ಸಾಹೇಬ್ ಫಾಲ್ಕೆ ಸಮಿತಿ ಮಾಡಿದ ಶಿಪಾರಸ್ಸನ್ನು ಕೇಂದ್ರ ಮಾಹಿತಿ ಮತ್ತು ವಾರ್ತಾ ಸಚಿವ ಅನುಮೋದಿಸಿದ್ದಾರೆ.

ಸ್ವರ್ಣ ಕಮಲ, 10 ಲಕ್ಷ ರೂ. ನಗದು, ಶಲ್ಯ ಒಳಗೊಂಡಿರುವ ಪ್ರಶಸ್ತಿಯನ್ನು ಮೇ.3, 2017 ರಂದು  ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ವಿಜ್ಞಾನ ಭವನದಲ್ಲಿ ವಿತರಿಸಲಿದ್ದಾರೆ.

1930, ಫೆಬ್ರವರಿ 19ರಂದು ಆಂದ್ರಪ್ರದೇಶದ ಗೋದಾವರಿಯಲ್ಲಿ ಜನಿಸಿದ ಇವರು 1957ರಲ್ಲಿ ತೋಡಿ ಕೊಡಲ್ಲು ಎಂಬ ಚಿತ್ರ ನಿರ್ದೇಶಿಸುವ ಮೂಲಕ ಸಿನಿಮಾ ರಂಗ ಪ್ರವೇಶಿಸಿದರು. ಕಲೆ, ಸಂಗೀತ, ನೃತ್ಯ ಆಧಾರಿತ ಚಿತ್ರಗಳನ್ನು ನಿರ್ದೇಶಿಸುವುದರಲ್ಲಿ ಇವರು ಪ್ರಖ್ಯಾತರಾಗಿದ್ದಾರೆ. ವಿಶ್ವನಾಥ್ ನಿರ್ದೇಶಿಸಿದ ಸ್ವಾತಿಮುತ್ಯಂ, ಶಂಕರಭರಣಂ, ಸಪ್ತಪದಿ ಹಾಗೂ ಸ್ವರಾಬಿಶೇಕಂ ಸಿನಿಮಾಗಳಿಗೆ ರಾಷ್ಟ್ರಪ್ರಶಸ್ತಿ ದೊರಕಿದೆ. ಸ್ವಾತಿಮುತ್ಯಂ ಸೇರಿದಂತೆ ಇವರು ನಿರ್ದೇಶಿಸಿದ ಕೆಲವು ಚಿತ್ರಗಳು ಕನ್ನಡಕ್ಕೆ ರಿಮೇಕ್ ಕೂಡ ಆಗಿವೆ.

ಇವರು 50ಕ್ಕೂ ಹೆಚ್ಚು ತೆಲುಗು, ಹಿಂದಿ ಮಲಯಾಳಂ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಶ್ರೀಯುತರಿಗೆ  1992ರಲ್ಲಿಯೇ ಕೇಂದ್ರ ಸರ್ಕಾರದ ಪ್ರದ್ಮಶ್ರಿ ಪ್ರಶಸ್ತಿ ಲಭಿಸಿದೆ.

click me!