ಬೆಳಗ್ಗೆ 6 ಗಂಟೆಗೆ ಯುದ್ದ ಸ್ಟಾರ್ಟ್‌ ಮಾಡಿ ಸಂಜೆ 6 ಗಂಟೆಗೆ ಮುಗಿಸಲಿ: ಸಚಿವ ಸತೀಶ್‌ ಜಾರಕಿಹೊಳಿ

Published : Apr 29, 2025, 08:17 PM ISTUpdated : Apr 29, 2025, 08:20 PM IST
ಬೆಳಗ್ಗೆ 6 ಗಂಟೆಗೆ ಯುದ್ದ ಸ್ಟಾರ್ಟ್‌ ಮಾಡಿ ಸಂಜೆ 6 ಗಂಟೆಗೆ ಮುಗಿಸಲಿ: ಸಚಿವ ಸತೀಶ್‌ ಜಾರಕಿಹೊಳಿ

ಸಾರಾಂಶ

ಸಚಿವ ಸತೀಶ್ ಜಾರಕಿಹೊಳಿ ಪಹಲ್ಗಾಮ್ ದಾಳಿ ಕುರಿತು ಸೇನೆಯನ್ನು ಲೇವಡಿ ಮಾಡಿದ್ದಾರೆ. ಯುದ್ಧ ಆರಂಭಿಸಿ ಮುಗಿಸಲು ತಮಗೇನೂ ಅಭ್ಯಂತರವಿಲ್ಲ ಎಂದು ಉಡಾಫೆಯಾಗಿ ಹೇಳಿದ್ದಾರೆ. ಯುದ್ಧದ ಆರ್ಥಿಕ ಪರಿಣಾಮಗಳ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ಸರಿ ಎಂದಿದ್ದಾರೆ. ಬಿಜೆಪಿ ಕಾರ್ಯಕರ್ತರ ಗಲಾಟೆ ಖಂಡಿಸಿ, ನಾಯಕರು ಬುದ್ಧಿ ಹೇಳಬೇಕಿತ್ತು ಎಂದರು. ಕಾಂತರಾಜು ವರದಿ ಜಾರಿಗೆ ಸದನದಲ್ಲಿ ಚರ್ಚೆ ಮತ್ತು ಬಹಿರಂಗ ಚರ್ಚೆ ಅಗತ್ಯ ಎಂದಿದ್ದಾರೆ.

ಬೆಳಗಾವಿ (ಏ.29): ಜಮ್ಮು ಕಾಶ್ಮೀರದ ಪಹಲ್ಗಾಮ್‌ ದಾಳಿಯ ಬಗ್ಗೆ ಮಾತನಾಡುವ ವೇಳೆ ಸಚಿವ ಸತೀಶ್‌ ಜಾರಕಿಹೊಳಿ ಸೇನೆಯನ್ನೇ ಲೇವಡಿ ಮಾಡುವಂಥ ಹೇಳಿಕೆ ನೀಡಿದ್ದಾರೆ. 'ನಾಳೆ ಬೆಳಗ್ಗೆ ಎಂಟು ಗಂಟೆಗೆ ಯುದ್ಧ ಆರಂಭ ಮಾಡಿ, ಸಂಜೆ ಆರಕ್ಕೆ ಮುಗಿಸಲು ನಮಗೇನೂ ಅಭ್ಯಂತರವಿಲ್ಲ' ಎಂದು ಉಡಾಫೆಯ ಹೇಳಿಕೆ ನೀಡಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ, 'ನಾಳೆ ಬೆಳಗ್ಗೆ ಎಂಟು ಗಂಟೆಗೆ ಯುದ್ಧ ಪ್ರಾರಂಭ ಮಾಡಿ ಸಂಜೆ ಆರಕ್ಕೆ ಮುಗಿಸಲಿ ನಮಗೇನು ಅಭ್ಯಂತರವಿಲ್ಲ. ಯುದ್ಧ ಬೇಕು ಬೇಡ ಅಂತ ಹೇಳೋಕೆ ಸಿಎಂ ಅವರು  ಕಮಾಂಡರಾ? ಲೆಫ್ಟಿನೆಂಟ್ ಕಮಾಂಡರಾ? ಎಂದು ಪ್ರಶ್ನೆ ಮಾಡಿದ್ದಾರೆ.

ಯುದ್ದಮಾಡಿ ಎಂದು ಹೇಳಿ ಎಲ್ಲರೂ ಇಲ್ಲೇ ಕೂರುತ್ತಾರೆ. ಯುದ್ದವಾದರೆ ಎನು ಸಮಸ್ಯೆ ಅಗುತ್ತೆ ಎಂದು ಆ ಮೇಲೆ ಗೊತ್ತಾಗುತ್ತದೆ. ಸಿದ್ದರಾಮಯ್ಯ ಯುದ್ದವಾದರೆ ಆರ್ಥಿಕವಾಗಿ ಏನು ತೊಂದರೆ ಆಗುತ್ತೆ ಅದನ್ನ ಹೇಳಿದ್ದಾರೆ. ಅವಶ್ಯವಿದ್ದರೆ ಯುದ್ದ ಮಾಡಬಹುದು ಅದರಲ್ಲಿ ನಮ್ಮನ್ನು ಕೇಳೋದು ಏನಿದೆ. ಅವರು ತಮ್ಮ ವಿಫಲತೆಯನ್ನು ಹೇಳುತ್ತಿಲ್ಲ. ಇದೆಲ್ಲ ಸರಿಯಾದ ಕ್ರಮ ಅಲ್ಲ ಎಂದು ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ. ಯುದ್ಧವಾದರೆ  ಆರ್ಥಿಕವಾಗಿ ಸಮಸ್ಯೆಗಳಾಗುತ್ತೆ ಎನ್ನುವುದು ಗೊತ್ತು ಎಂದಿದ್ದಾರೆ.

ಸಮಾವೇಶದಲ್ಲಿ ಬಿಜೆಪಿ ಕಾರ್ಯಕರ್ತರ ಗಲಾಟೆ ವಿಚಾರದ ಬಗ್ಗೆ ಮಾತನಾಡಿದ ಅವರು, ಕಾರ್ಯಕರ್ತರಿಗೆ ಬಿಜೆಪಿ ನಾಯಕರು ಬುದ್ದಿವಾದ ಹೇಳಬೇಕು. ಅಂತಹ ಘಟನೆ ನಡೆಯಬಾರದಿತ್ತು ಎಂದು ಹೇಳಿದ್ದಾರೆ. 'ಅವರಿಗೆ ವಿರೋಧ ಮಾಡಲಿಕ್ಕೆ ಸಾಕಷ್ಟು ಅವಕಾಶ ಇತ್ತು. ಇದನ್ನು‌ ಬಿಜೆಪಿಯವರು ಸರಿ ಮಾಡಿಕೊಳ್ಳಬೇಕು ಎಂದಿದ್ದಾರೆ.

ಇದೇ ವೇಳೆ ಎಎಸ್‌ಪಿ ಮೇಲೆ ಸಿಎಂ ಹಲ್ಲೆಗೆ ಮುಂದಾಗ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು,  ಹಲ್ಲೆ ಮಾಡಲು ಮುಂದಾಗಿಲ್ಲ ಕೈ ಮಾಡಿ ಹೇಳಿದ್ದಾರೆ. ಯಾಕೆ ಹೀಗೆ ಆಯ್ತು ಅಂತ ಪೊಲೀಸರನ್ನು ಪ್ರಶ್ನೆ ಮಾಡಿದ್ದಾರೆ ಎಂದರು. ಬಿಹಾರದಲ್ಲಿ ಮೋದಿ ಪ್ರಚಾರದಲ್ಲಿ ಕಾಶ್ಮೀರ ವಿಚಾರ ಬಳಸುತ್ತಿರುವ ಬಗ್ಗೆ ಮಾತನಾಡಿದ ಅವರು, ಅವರಿಗೆ ಬೇರೆ ವಿಚಾರಗಳಿಲ್ಲ ಬರೀ ಪಾಕಿಸ್ತಾನ ಮುಸ್ಲಿಂ ಅಂತಾನೆ ಹೇಳಬೇಕು ಎಂದಿದ್ದಾರೆ.

ಕಾಂತರಾಜು ವರದಿ ಜಾರಿ ವಿಚಾರಕ್ಕೆ ಕೆಲ ಸಮುದಾಯಗಳ ಒತ್ತಡ ವಿಚಾರದ ಬಗ್ಗೆ, ಒತ್ತಾಯ ಇದ್ದೆ ಇದೆ ಸರ್ಕಾರಕ್ಕೆ ಬೇಡಿಕೆ ಕೊಟ್ಟಿದ್ದೆವೆ. ಕೆಲವರು ಬೇಕು ಬೇಡ ಅಂತ ವಾದ ಮಾಡ್ತಿದ್ದಾರೆ,‌ಎನು ಸಮಸ್ಯೆ ಅಂತ ಕೇಳಬೇಕು. ಮತ್ತೊಂದು ಬಾರಿ ಸದನದಲ್ಲಿ ಚರ್ಚೆ ಮಾಡಿ ಜಾರಿ ಮಾಡಬೇಕು. ಬಹಿರಂಗವಾಗಿ ಲಾಭ ನಷ್ಟಗಳ ಚರ್ಚೆ ಆಗಬೇಕು. ನಿಮ್ಮ ಸಮಸ್ಯೆಯನ್ನು ಹೇಳಿ ತಹಶೀಲ್ದಾರ್ ಗೆ ಅವಕಾಶ ಕೊಟ್ಟರೆ  ಅದನ್ನ ಪರಿಶೀಲಿಸಿ ಪಬ್ಲಿಶ್‌ ಮಾಡುತ್ತಾರೆ ಎಂದರು.

ಮಲ್ಲಿಕಾರ್ಜುನ ಖರ್ಗೆ ಹೇಳಿರುವುದು ಸತ್ಯ ನಾವು ಹುಷಾರಾಗಿರಬೇಕು: ಸಚಿವ ಸತೀಶ್ ಜಾರಕಿಹೊಳಿ

ಬಿಜೆಪಿ ಕಾರ್ಯಕರ್ತರಿಗೆ ಶಾಸಕರು ರಾಜ್ಯ ಸಭಾ ಸದಸ್ಯರು ಸಪೋರ್ಟ್ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸತೀಶ್‌ ಜಾರಕಿಹೊಳಿ, ಅವರ ವೇದಿಕೆಯ ಮೇಲೆ ಅದನ್ನು‌ಹೇಳಬೇಕಿತ್ತು. ನಾಳೆ ನಮ್ಮವರು ಹೋಗಿ  ಅವರ ಕಾರ್ಯಕ್ರಮದಲ್ಲಿ ಗಲಾಟೆ  ಮಾಡಿದರೆ ಸರಿ ಕಾಣುತ್ತಾ ಎಂದು ಪ್ರಶ್ನಿಸಿದ್ದಾರೆ.

ಜಾತಿ ಗಣತಿ ವರದಿ ಜಾರಿ ತೀರ್ಮಾನಕ್ಕೆ ಒಂದು ವರ್ಷ ಬೇಕು: ಸತೀಶ್ ಜಾರಕಿಹೊಳಿ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಲವರ್ ಜೊತೆ ಸೇರಿ ಪತಿ ಹತ್ಯೆಗೈದು ದೇಹದ ಒಂದೊಂದು ಪೀಸ್ ಜಿಲ್ಲೆಯ ಪ್ರತಿ ಗಾಮದಲ್ಲಿ ಎಸೆದ ಪತ್ನಿ
ಗೋವಾ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿಗೆ ಕ್ಲೀನ್ ಸ್ವೀಪ್ ಗೆಲುವು, 10 ಸ್ಥಾನಕ್ಕೆ ತೃಪ್ತಿಪಟ್ಟ ಕಾಂಗ್ರೆಸ್