ಡಬ್ಲ್ಯೂಇಎಫ್ ವ್ಯವಸ್ಥಾಪನಾ ಮಂಡಳಿಗೆ ಸರಿತಾ ನಾಯರ್

Published : Jun 08, 2018, 05:10 PM IST
ಡಬ್ಲ್ಯೂಇಎಫ್ ವ್ಯವಸ್ಥಾಪನಾ ಮಂಡಳಿಗೆ ಸರಿತಾ ನಾಯರ್

ಸಾರಾಂಶ

ವಿಶ್ವ ಆರ್ಥಿಕ ವೇದಿಕೆ ವ್ಯವಸ್ಥಾಪನಾ ಮಂಡಳಿಗೆ ಸರಿತಾ ನಾಯರ್ ವಿಶ್ವ ಆರ್ಥಿಕ ವೇದಿಕೆಯ ಎಲ್ಎಲ್‌ಸಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಾರತ, ಜಪಾನ್ ಮತ್ತು ಚೀನಾದಲ್ಲಿ ಹೊಸ ಕೇಂದ್ರಗಳ ಸ್ಥಾಪನೆಗೆ ನೇತೃತ್ವ ಉದಯೋನ್ಮುಖ ತಂತ್ರಜ್ಞಾನಗಳ ಪ್ರಯೋಜನಕ್ಕೆ ಆದ್ಯತೆ ಎಂದ ನಾಯರ್

ನವದೆಹಲಿ(ಜೂ.8): ವಿಶ್ವ ಆರ್ಥಿಕ ವೇದಿಕೆಯ ವ್ಯವಸ್ಥಾಪನಾ ಮಂಡಳಿಗೆ ವ್ಯವಸ್ಥಾಪನಾ ಮಂಡಳಿಗೆ ಸರಿತಾ ನಾಯರ್ ಅವರನ್ನು ನೇಮಕ ಮಾಡಲಾಗಿದೆ. ಈ ಕುರಿತು ಡಬ್ಲ್ಯೂಇಎಫ್ ಮಾಹಿತಿ ನೀಡಿದ್ದು, ವಿಶ್ವ ಆರ್ಥಿಕ ವೇದಿಕೆಯ ಎಲ್ಎಲ್‌ಸಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಸರಿತಾ ನಾಯರ್ ಅವರಿಗೆ ಈಗ ಹೆಚ್ಚುವರಿಯಾಗಿ ವ್ಯವಸ್ಥಾಪನಾ ಮಂಡಳಿಯ ಜವಾಬ್ದಾರಿ ನೀಡಲಾಗಿದೆ. 

ನಾಯರ್ ವ್ಯವಸ್ಥಾಪನಾ ಮಂಡಳಿ ಮೂಲಕ ವಿಶ್ವ ಆರ್ಥಿಕ ವೇದಿಕೆಯ ಅಂತರಾಷ್ಟ್ರೀಯ ವಿಸ್ತರಣೆಗೆ ನೆರವಾಗಲಿದ್ದಾರೆ. ಅಲ್ಲದೆ ಭಾರತ, ಜಪಾನ್ ಮತ್ತು ಚೀನಾದಲ್ಲಿ ವಿಶ್ವ ಆರ್ಥಿಕ ವೇದಿಯ ಹೊಸ ಕೇಂದ್ರಗಳ ಸ್ಥಾಪನೆಗೆ ನಾಯರ್ ನೇತೃತ್ವ ವಹಿಸಿಕೊಳ್ಳಲಿದ್ದಾರೆ.

‘ವಿಶ್ವ ಆರ್ಥಿಕ ವೇದಿಕೆಯ ವ್ಯವಸ್ಥಾಪನಾ ಮಂಡಳಿಗೆ ನೇಮಕಗೊಂಡಿರುವುದಕ್ಕೆ ಹೆಮ್ಮೆಯಾಗುತ್ತಿದೆ. ಉದಯೋನ್ಮುಖ ತಂತ್ರಜ್ಞಾನಗಳ ಪ್ರಯೋಜನಗಳನ್ನು ಗರಿಷ್ಠಗೊಳಿಸಲಾಗುವುದು, ಇದು ಅಪಾಯಗಳನ್ನು ಕಡಿಮೆಗೊಳಿಸುತ್ತದೆ, ಇದರಿಂದಾಗಿ ಫೋರಂ ವಿಮರ್ಶಾತ್ಮಕವಾಗಿ ಕೆಲಸ ಮಾಡುತ್ತದೆ’ ಎಂದು ನಾಯರ್ ಪ್ರತಿಕ್ರಿಯೆ ನೀಡಿದ್ದಾರೆ.

2007ರಲ್ಲಿ ಸರಿತಾ ನಾಯರ್ ವಿಶ್ವ ಆರ್ಥಿಕ ವೇದಿಕೆಗೆ ಸೇರಿದ್ದರು. ನವದೆಹಲಿಯ ಸೇಂಟ್ ಸ್ಟಿಫನ್ ಕಾಲೇಜಿನಿಂದ ಅರ್ಥಶಾಸ್ತ್ರ ಪದವಿ, ಐಐಎಂ ನಿಂದ ಸ್ನಾತಕೋತ್ತರ ಪದವಿ ಮತ್ತು ಮಿಚಗಿನ್ ವಿವಿಯಿಂದ ಎಂಬಿಎ ಪದವಿ ಪಡೆದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೆಹಂದಿ ಗಿಡ ಪೂಜಿಸಿದರೆ ಇಷ್ಟೆಲ್ಲಾ ಲಾಭವಿದೆಯೇ?: ಪೂಜೆಗೆ ಇದೇ ಸರಿಯಾದ ದಿನ!
Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!