ಪತ್ರಕರ್ತ ಸಂತೋಷ್ ತಮ್ಮಯ್ಯ ಬಂಧನ | ಸಾರ್ವಜನಿಕ ವಲಯದಲ್ಲಿ ಆಕ್ರೋಶ | ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸಾಮಾಜಿಕ ಕಾರ್ಯಕರ್ತ
ಬೆಂಗಳೂರು (ನ. 13): ಪತ್ರಕರ್ತ ಸಂತೋಷ್ ತಮ್ಮಯ್ಯ ಬಂಧನವನ್ನು ಖಂಡಿಸಿ ಸಾಮಾಜಿಕ ಹೋರಾಟಗಾರ ರಾಬರ್ಟ್ ರೊಜಾರಿಯಾ ಕಿಡಿ ಕಾರಿದ್ದಾರೆ.
ಈ ಬಾರಿ ಜನ ವಿರೋಧದ ಮಧ್ಯೆಯೇ ಸರ್ಕಾರ ಟಿಪ್ಪು ಜಯಂತಿ ಆಚರಿಸಲು ಹೊರಟಾಗ ನನಗೆ ಅನುಮಾನ ಮೂಡಿತ್ತು. ಟಿಪ್ಪು ಜಯಂತಿ ಆಚರಣೆ ಮಾತ್ರವಲ್ಲ, ಟಿಪ್ಪುವಿನ ಆಡಳಿತವನ್ನೂ ಜಾರಿಗೆ ತರಲು ಹೊರಟಿದೆ. ಚುನಾಯಿತ ಸರ್ಕಾರ ಟಿಪ್ಪುವಿನ ಭಯೋತ್ಪಾದನೆ ಜಾರಿ ಮಾಡಿರೋದಕ್ಕೆ ಸಂತೋಷ್ ತಮ್ಮಯ್ಯ ಬಂಧನ ಉದಾಹರಣೆ ಎಂದು ರಾಬರ್ಟ್ ಹೇಳಿದ್ದಾರೆ.
ಟಿಪ್ಪು ಜಯಂತಿ ವಿರೋಧಿ ಲೇಖನ: ಪತ್ರಕರ್ತ ಸಂತೋಷ್ ತಮ್ಮಯ್ಯ ಬಂಧನಸಂತೋಷ್ ತಮ್ಮಯ್ಯ ಯಾವುದೇ ವಿವಾದಾತ್ಮಕ ಹೇಳಿಕೆ ನೀಡಿಲ್ಲ. ಟಿಪ್ಪುವಿನ ಮಾನಸಿಕತೆ ಸಂಬಂಧ ಆತ ಯಾವುದರಿಂದ ಸ್ಪೂರ್ತಿ ಪಡೆದಿದ್ದ ಎಂದು ಮಾತನಾಡಿದ್ದರು. ಆದರೆ ಕಾನೂನು ದುರುಪಯೋಗ ಮಾಡಿ ಅರೆಸ್ಟ್ ಮಾಡಲಾಗಿದೆ. ಪೊಲೀಸರು ರಾಜಕೀಯ ಒತ್ತಡದಿಂದ ಮಧ್ಯರಾತ್ರಿ ಬಂಧಿಸಿದ್ದಾರೆ. ಇದು ಭಯೋತ್ಪಾದನೆ ಹುಟ್ಟು ಹಾಕುವ ಕೆಲಸವಾಗಿದೆ. ನನ್ನನ್ನು ಬಂಧಿಸಿದ್ರೆ ಬಂಧನಕ್ಕೆ ನಾನು ಸದಾ ಸಿದ್ದ ಎಂದಿದ್ದಾರೆ.
ಸಂತೋಷ್ ತಮ್ಮಯ್ಯ ಬಂಧನ ; ಕೊಡಗು ಬಂದ್‌ಗೆ ಕರೆನಾವು ವೇದಿಕೆಯಲ್ಲಿ ಇದ್ದ ಕಾರಣಕ್ಕೆ ನಮ್ಮ ಮೇಲೂ ಕೇಸು ದಾಖಲಾಗಿದೆ. ಇದರ ಹಿಂದೆ ಕಾಂಗ್ರೆಸ್ ನ ವೈಚಾರಿಕ ಜನ, ಸಿದ್ದರಾಮಯ್ಯ ಇದ್ದಾರೆ. ಅವರ ಹಿಂಬಾಲಕರು ನಮ್ಮ ಈಗಿನ ಗೃಹಮಂತ್ರಿ ಪರಮೇಶ್ವರ್. ಕಾಂಗ್ರೆಸ್ ನ ಕೆಲವು ಎಡಪಂಥೀಯ ವ್ಯಕ್ತಿಗಳು ಹೀಗೆ ಮಾಡುತ್ತಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣದ ಜೊತೆಗೆ ಭಯೋತ್ಪಾದನೆ ಹರಡಲಾಗುತ್ತಿದೆ. ಕೂಡಲೇ ಸಂತೋಷ್ ತಮ್ಮಯ್ಯರನ್ನು ಪೊಲೀಸರು ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದ್ದಾರೆ.