
ವಿಶ್ವದ ಅತೀ ದೊಡ್ಡ ಸ್ಮಾರ್ಟ್ ಫೋನ್ ಕಂಪನಿ ದಕ್ಷಿಣ ಕೊರಿಯಾದ ಸ್ಯಾಮ್ಸಂಗ್ ತನ್ನ ಸಂಸ್ಥೆಯ ಗ್ಯಾಲಕ್ಸಿ ನೋಟ್ 7 ಬೆಂಕಿ ಹೊತ್ತಿಕೊಳ್ಳುವ ಬಗ್ಗೆ ಅಧಿಕೃತವಾಗಿ ಸತ್ಯ ಬಿಚ್ಚಿಟ್ಟಿದೆ. ಆ್ಯಪಲ್ ಐಫೋನಿಗೆ ಸ್ಪರ್ಧೆ ನೀಡುವ ಸಲುವಾಗಿ ಗ್ಯಾಲಕ್ಸಿ ನೋಟ್ 7 ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ವಿಶ್ವದ ಬಹುತೇಕ ಕಡೆ ಈ ಸೀರಿಸ್ ಫೋನ್'ಗಳು ಹೊತ್ತಿಕೊಂಡ ಪರಿಣಾಮ ತಯಾರಿಕೆ ಹಾಗೂ ಮಾರಾಟವನ್ನು ಸ್ಥಗಿತಗೊಳಿಸಿತ್ತು.
ಗ್ಯಾಲಕ್ಸಿ ನೋಟ್ 7 ನಲ್ಲಿದ್ದ ಕಳಪೆ ಬ್ಯಾಟರಿಯೇ ಬೆಂಕಿ ಹೊತ್ತಿಕೊಳ್ಳಲು ಕಾರಣವಾಗಿದ್ದು, ಇದಕ್ಕಾಗಿ ನಮ್ಮ ನಂಬಿಕೆಯ ಗ್ರಾಹಕರ ಕ್ಷಮೆ ಕೇಳುತ್ತೇವೆ' ಎಂದು ಸ್ಯಾಮ್ಸಂಗ್ ಸಂಸ್ಥೆಯ ಮೊಬೈಲ್ ಮಾರುಕಟ್ಟೆಯ ಮುಖ್ಯಸ್ಥರಾದ ಕೊಹ್ ಡಾಂಗ್-ಜಿನ್ ಅಧಿಕೃತವಾಗಿ ತಿಳಿಸಿದ್ದಾರೆ.
ನೋಟ್ 7 ಸೀರಿಸ್'ನಲ್ಲಿ ಬೆಂಕಿ ಹೊತ್ತಿಕೊಳ್ಳುವ ದೂರುಗಳು ಹೆಚ್ಚಾದ ಕಾರಣದಿಂದ ಆ ಮಾದರಿಯ ಫೋನ್'ಅನ್ನು ವಾಪಸ್ ತೆಗೆದುಕೊಂಡು ಬೇರೆ ಸಂಸ್ಥೆಯಲ್ಲಿ ತಯಾರಿಸಿದ ಬ್ಯಾಟರಿಯ ಜೊತೆ ಹೊಸ ಫೋನನ್ನು ಗ್ರಾಹಕರಿಗೆ ನೀಡಲಾಗಿತ್ತು. ವಿಶ್ವದಾದ್ಯಂತ 2.5 ಕೋಟಿಗೂ ಅಧಿಕ ಫೋನ್'ಗಳನ್ನು ಹಿಂತೆಗೆದುಕೊಳ್ಳಲಾಗಿತ್ತು. ಇದರಲ್ಲಿ 1.9 ಕೋಟಿ ಫೋನ್'ಗಳನ್ನು ಅಮೆರಿಕಾಕ್ಕೆ ಮಾರಾಟ ಮಾಡಲಾಗಿತ್ತು.
ಕಂಪನಿಯು ಉತ್ತಮ ಗುಣಮಟ್ಟದ ಬ್ಯಾಟರಿಯೊಂದಿಗೆ ಗ್ಯಾಲಕ್ಸಿ ನೋಟ್ 8 ಮಾದರಿಯ ಸ್ಮಾರ್ಟ್ ಫೋನನ್ನು ಬಿಡುಗಡೆ ಮಾಡಲಿದ್ದು ಫೆಬ್ರವರಿಯಲ್ಲಿ ಅನಾವರಣಗೊಳ್ಳುವ ಸಾಧ್ಯತೆಯಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.