ಸಿಎಂ ತವರು ಜಿಲ್ಲೆಯಲ್ಲಿ ಕಾಂಗ್ರೆಸ್ ಕಂಗಾಲು!

By Suvarna Web DeskFirst Published Jan 23, 2017, 6:55 AM IST
Highlights

ಬಿಜೆಪಿ ಆಯ್ತು, ಜೆಡಿಎಸ್ ಕೂಡ ಆಯ್ತು. ಆದ್ರೆ ಕಾಂಗ್ರೆಸ್‌ಗೆ ಮಾತ್ರ ಇನ್ನೂ ಅಭ್ಯರ್ಥಿ ಸಿಕ್ಕಿಲ್ಲ. ಹೌದು ಈಗಾಗಲೇ ನಂಜನಗೂಡು ಉಪಚುನಾವಣೆಗೆ ವಿ. ಶ್ರೀನಿವಾಸ್ ಪ್ರಸಾದ್ ಬಿಜೆಪಿಯಿಂದ ಅಖಾಡಕ್ಕಿಳಿದ್ದಾರೆ. ಜೆಡಿಎಸ್ ಕೂಡ ಅಭ್ಯರ್ಥಿ ಹೆಸರನ್ನು ಘೋಷಿಸಿದೆ. ಕಾಂಗ್ರೆಸ್ ಕಣಕ್ಕಿಳಿಸಬೇಕೆಂದಿದ್ದ ಕಳಲೆ ಕೇಶವಮೂರ್ತಿ ಅವರನ್ನೇ ಕುಮಾರಸ್ವಾಮಿ ಅಖಾಡಕ್ಕಿಳಿಸಿ ಸಿಎಂ ಸಿದ್ದರಾಮಯ್ಯ ಅವರಿಗೆ ಮತ್ತಷ್ಟು ತಲೆ ನೋವು ತಂದಿಟ್ಟಿದ್ದಾರೆ.

ಮೈಸೂರು(ಜ.23): ಬಿಜೆಪಿ ಆಯ್ತು, ಜೆಡಿಎಸ್ ಕೂಡ ಆಯ್ತು. ಆದ್ರೆ ಕಾಂಗ್ರೆಸ್‌ಗೆ ಮಾತ್ರ ಇನ್ನೂ ಅಭ್ಯರ್ಥಿ ಸಿಕ್ಕಿಲ್ಲ. ಹೌದು ಈಗಾಗಲೇ ನಂಜನಗೂಡು ಉಪಚುನಾವಣೆಗೆ ವಿ. ಶ್ರೀನಿವಾಸ್ ಪ್ರಸಾದ್ ಬಿಜೆಪಿಯಿಂದ ಅಖಾಡಕ್ಕಿಳಿದ್ದಾರೆ. ಜೆಡಿಎಸ್ ಕೂಡ ಅಭ್ಯರ್ಥಿ ಹೆಸರನ್ನು ಘೋಷಿಸಿದೆ. ಕಾಂಗ್ರೆಸ್ ಕಣಕ್ಕಿಳಿಸಬೇಕೆಂದಿದ್ದ ಕಳಲೆ ಕೇಶವಮೂರ್ತಿ ಅವರನ್ನೇ ಕುಮಾರಸ್ವಾಮಿ ಅಖಾಡಕ್ಕಿಳಿಸಿ ಸಿಎಂ ಸಿದ್ದರಾಮಯ್ಯ ಅವರಿಗೆ ಮತ್ತಷ್ಟು ತಲೆ ನೋವು ತಂದಿಟ್ಟಿದ್ದಾರೆ.

ಇಡೀ ರಾಜ್ಯದ ಜನ ಚಿತ್ತ ನಂಜನಗೂಡು ಉಪ ಚುನಾವಣೆ ಮೇಲಿದೆ. ಈ ಕ್ಷೇತ್ರದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿ ಶ್ರೀನಿವಾಸಪ್ರಸಾದ್ ಅವರಿದ್ದರೆ, ಇನ್ನು ಸಿಎಂ ಸಿದ್ದರಾಮಯ್ಯ ಅವ್ರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಚುನಾವಣೆ ಯಾವ ಸಂದರ್ಭದಲ್ಲಾದರೂ ಘೋಷಣೆಯಾಗುವ ಸಂಭವ ಇದ್ದರೂ ಕಾಂಗ್ರೆಸ್ ಪಕ್ಷಕ್ಕೆ ಅಭ್ಯರ್ಥಿ ಅಂತಿಮಗೊಳಿಸುವುದೇ ಪ್ರಯಾಸದ ಕೆಲಸವಾಗಿದೆ. ಇದುವರೆಗೂ ಕಳಲೆ ಕೇಶವಮೂರ್ತಿ ಅವರನ್ನೇ ಕಾಂಗ್ರೆಸ್ನಿಂದ ಕಣಕ್ಕಿಳಿಸಬೇಕೆಂಬ ಲೆಕ್ಕಾಚಾರವಿತ್ತು. ಅದಕ್ಕೂ ಮೊದಲೇ ಜೆಡಿಎಸ್ ರಾಜ್ಯಾಧ್ಯಕ್ಷರಾದ ಎಚ್.ಡಿ. ಕುಮಾರಸ್ವಾಮಿ ಸಿಎಂ ತವರು ಜಿಲ್ಲೆಯಲ್ಲೇ ಅವರಿಗೆ ಟಾಂಗ್ ನೀಡಿದ್ದಾರೆ.

ಜೆಡಿಎಸ್ ಅಭ್ಯರ್ಥಿಯಾಗಿ ಕಳಲೆ ಕೇಶವಮೂರ್ತಿ ಕಣಕ್ಕೆ

ಜೆಡಿಎಸ್ ಅಭ್ಯರ್ಥಿಯಾಗಿ  ನಂಜನಗೂಡು ಭಾಗದ ಪ್ರಭಾವಿ ಮುಖಂಡ ಕಳಲೆ ಕೇಶವಮೂರ್ತಿ ಅಖಾಡಕ್ಕಿಳಿದಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ  ಕಳಲೆ ಕೇಶವಮೂರ್ತಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆಂದು ಘೋಷಿಸಿದರು.ಅಲ್ಲದೇ ಕಲಬುರಗಿ ಮಾದರಿಯಲ್ಲೇ ಕಳಲೆ ಕೇಶವಮೂರ್ತಿ ಅವರನ್ನು ಗೆಲ್ಲಿಸುತ್ತೇನೆ ಅಂತಾ ವಾಗ್ದಾನ ಮಾಡಿದರು.

ಎರಡು ಬಾರಿ ಚುನಾವಣೆ ಸೋತಿದ್ದರಿಂದ ಈ ಬಾರಿ ತಟಸ್ಥವಾಗಿ ಇದ್ದುಬಿಡೋಣವೆಂದು ಕುಮಾರಸ್ವಾಮಿ ಅವರಿಗೆ ಹೇಳಿದ್ದೆ. ಆದರೆ ಪಕ್ಷ ಹಾಗೂ ಕ್ಷೇತ್ರದ ಹಿತದೃಷ್ಟಿಯಿಂದ ಜೆಡಿಎಸ್ ನಿಂದ ಸ್ಪರ್ಧಿಸುತ್ತಿದ್ದೇನೆಂದು ಕಳಲೆ ಕೇಶವಮೂರ್ತಿ ಹೇಳಿದ್ರು.

ಸಿದ್ದರಾಮಯ್ಯ ಅವರ ಸರ್ಕಾರಕ್ಕೆ ಯಾವುದಾದರೂ ಒಂದು ಸಂಕಷ್ಟ ತಂದೊಡ್ಡುವ ಕುಮಾರಸ್ವಾಮಿ ಅವರು ಈ ಬಾರಿ ನಂಜನಗೂಡು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಭ್ಯರ್ಥಿಯೇ ಇಲ್ಲದಂತೆ ಮಾಡಿ ಮೇಲುಗೈ ಸಾಧಿಸಿದ್ದಾರೆ. ಇನ್ನು ಉಪ ಚುನಾವಣೆ ಘೋಷಣೆ ಬಳಿಕ ಇನ್ನಾವ ರಣತಂತ್ರ ರೂಪಿಸುತ್ತಾರೋ ಕಾದುನೋಡಬೇಕಾಗಿದೆ.

 

click me!