ಮೋದಿ ರಾಷ್ಟ್ರಪಿತ: ಸಂಬೀತ್ ವಿವಾದ

Published : Dec 10, 2017, 09:28 AM ISTUpdated : Apr 11, 2018, 01:08 PM IST
ಮೋದಿ ರಾಷ್ಟ್ರಪಿತ: ಸಂಬೀತ್ ವಿವಾದ

ಸಾರಾಂಶ

ಪ್ರಧಾನಿ ಮೋದಿ ಅವರು ರಾಷ್ಟ್ರಪಿತ ಎಂದು ಬಿಜೆಪಿ ವಕ್ತಾರ ಸಂಬೀತ್ ಪಾತ್ರ ಹೇಳಿಕೆ ನೀಡಿದ್ದು ಇದು ವಿವಾದಕ್ಕೆ ಕಾರಣವಾಗಿದೆ. ಗಾಂಧೀಜಿ ಅವರಿಗೆ ಬಿಜೆಪಿ ಅಪಮಾನ ಮಾಡಿದೆ. ಮೋದಿ ಅವರೇ ಈ ಬಗ್ಗೆ ಕ್ಷಮೆ ಕೇಳಿ ಅಥವಾ, ರಾಹುಲ್ ರೀತಿ ಸಂಬೀತ್‌ರನ್ನು ಉಚ್ಚಾಟಿಸಿ ಎಂದು ಕಾಂಗ್ರೆಸ್ ಆಗ್ರಹಿಸಿದೆ.

ನವದೆಹಲಿ: ಪ್ರಧಾನಿ ಮೋದಿ ಅವರು ರಾಷ್ಟ್ರಪಿತ ಎಂದು ಬಿಜೆಪಿ ವಕ್ತಾರ ಸಂಬೀತ್ ಪಾತ್ರ ಹೇಳಿಕೆ ನೀಡಿದ್ದು ಇದು ವಿವಾದಕ್ಕೆ ಕಾರಣವಾಗಿದೆ.

ಗಾಂಧೀಜಿ ಅವರಿಗೆ ಬಿಜೆಪಿ ಅಪಮಾನ ಮಾಡಿದೆ. ಮೋದಿ ಅವರೇ ಈ ಬಗ್ಗೆ ಕ್ಷಮೆ ಕೇಳಿ ಅಥವಾ, ರಾಹುಲ್ ರೀತಿ ಸಂಬೀತ್‌ರನ್ನು ಉಚ್ಚಾಟಿಸಿ ಎಂದು ಕಾಂಗ್ರೆಸ್ ಆಗ್ರಹಿಸಿದೆ.

ಕಾಂಗ್ರೆಸ್ಸಿಗರು ನನ್ನ ತಂದೆ, ತಾಯಿ ಬಗ್ಗೆ ಕೇಳ್ತಿದಾರೆ; ರಾಹುಲ್ ಆಪ್ತ ವಿರುದ್ಧ ಮೋದಿ ಆಕ್ರೋಶ

ಲೂನಾವಾಡ (ಗುಜರಾತ್): ನನ್ನನ್ನು ಪದಚ್ಯುತಿಗೊಳಿಸಲು ಹಿರಿಯ ಕಾಂಗ್ರೆಸ್ಸಿಗ ಮಣಿಶಂಕರ್ ಅಯ್ಯರ್ ಅವರು ಪಾಕಿಸ್ತಾನದಲ್ಲಿ ಸುಪಾರಿ ನೀಡಿದ್ದಾರೆ ಎಂದು ಹೇಳಿದ ಮರುದಿನವೇ ಪ್ರಧಾನಿ ನರೇಂದ್ರ ಮೋದಿ ಅವರು, ‘ಕಾಂಗ್ರೆಸ್ಸಿಗರು ನನ್ನ ತಂದೆ, ತಾಯಿ ಯಾರೆಂದು ಕೇಳುತ್ತಿದ್ದಾರೆ’ ಎಂದು ತರಾಟೆ ತೆಗೆದುಕೊಂಡಿದ್ದಾರೆ.

ರಾಹುಲ್ ಗಾಂಧಿ ಆಪ್ತ ಎನ್ನಲಾದ ಸಲ್ಮಾನ್ ನಿಜಾಮಿ ಎಂಬಾತ ಮಾಡಿದ್ದ ಟ್ವೀಟ್ ಉಲ್ಲೇಖಿಸಿ, ಹರಿಹಾಯ್ದ ಮೋದಿ ಅವರು, ‘ರಾಹುಲ್ ಗಾಂಧಿ ಪಕ್ಷದವರು ನನ್ನ ತಂದೆ- ತಾಯಿ ಯಾರೆಂದು ಕೇಳುತ್ತಿದ್ದಾರೆ. 

ಈ ದೇಶದ ಜನರೇ ನನ್ನ ಪೋಷಕರು. ಲೂನಾವಾಡದ ಮಣ್ಣಿನ ಮಗ ನಾನು. ಆದರೆ ಶತ್ರುಗಳಿಗಾದರೂ ಇಂತಹ ‘ಭಾಷೆಯನ್ನು ಬಳಸಬಹುದೆ? ಕಾಂಗ್ರೆಸ್ಸಿನ ನಾಯಕನೊಬ್ಬ ಆ ಪ್ರಶ್ನೆಯನ್ನು ನನಗೆ ಕೇಳಿದ್ದಾನೆ’ ಎಂದು ಕುಟುಕಿದರು. ಈ ನಡುವೆ ಕಾಂಗ್ರೆಸ್ ಪಕ್ಷವು ನಿಜಾಮಿಗೂ ಪಕ್ಷಕ್ಕೂ ಸಂಬಂಧ ಇಲ್ಲ ಎಂದು ಹೇಳಿಕೊಂಡಿದೆ.

ಆದರೆ ಪಕ್ಷದಲ್ಲಿ ನಿಜಾಮಿ ಹುದ್ದೆ ಹೊಂದಿರುವ ಬಗ್ಗೆ ಬಿಜೆಪಿಯವರು ಎಐಸಿಸಿ ಆದೇಶ ಪತ್ರವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿ ತಿರುಗೇಟು ನೀಡಿದ್ದಾರೆ.

ಮೀಸಲಿನ ಬಗ್ಗೆ ಚಾಟಿ: ಇದೇ ವೇಳೆ, ತಮ್ಮ ಪ್ರಚಾರ ‘ಭಾಷಣದಲ್ಲಿ ಇದೇ ಮೊದಲ ಬಾರಿಗೆ ಪಟೇಲ್ ಮೀಸಲಾತಿ ವಿಷಯವನ್ನು ಪ್ರಸ್ತಾಪಿಸಿದ ಮೋದಿ ಅವರು, ಕಾಂಗ್ರೆಸ್ ಪಕ್ಷ ಪಟೇಲರಿಗೆ ಮೀಸಲಾತಿ ನೀಡುವ ಭರವಸೆ ನೀಡಿದೆ. ಆದರೆ ಹೇಗೆ ಈಡೇರಿಸುತ್ತದೆ? ಪಟೇಲರಿಗೆ ಮೀಸಲು ಕೊಡಬೇಕಾದರೆ ಎಸ್ಸಿ, ಎಸ್ಟಿ ಹಾಗೂ ಒಬಿಸಿಗೆ ನೀಡಲಾಗಿರುವ ಮೀಸಲಾತಿಯ ಪಾಲನ್ನು ಕಿತ್ತುಕೊಳ್ಳಬೇಕು ಅಥವಾ ಸುಳ್ಳು ಭರವಸೆ ನೀಡಬೇಕು. ದೇಶಾದ್ಯಂತ ಹಲವು ರಾಜ್ಯಗಳಲ್ಲಿ ಮುಸ್ಲಿಮರಿಗೆ ಮೀಸಲು ನೀಡುವ ಲಾಲಿಪಾಪ್ ಅನ್ನು ಈಗಾಗಲೇ ಕಾಂಗ್ರೆಸ್ ನೀಡಿದೆ ಎಂದು ತರಾಟೆಗೆ ತೆಗೆದುಕೊಂಡರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಡ್ನಿ ಶೂಟಿಂಗ್ ದಾಳಿಗೆ ಪಾಕಿಸ್ತಾನ ಸಂಪರ್ಕ: ಆರೋಪಿ ಲಾಹೋರ್ ಮೂಲದ ನವೀದ್ ಅಕ್ರಮ್; ಫೋಟೋ ವೈರಲ್!
ತುರುವೇಕೆರೆ: ದೇವರ ಮೇಲೆ ಹಾಕಿದ್ದ 500 ಗ್ರಾಂ ಸರ, 10 ಸಾವಿರ ರೂ. ನಗದು ಕದ್ದ ಕಳ್ಳರು!