ಇದೆಂಥ ಮೂರ್ಖತನ: ಸಲ್ಮಾನ್ ಖುರ್ಷಿದ್ ಮಾತಿಗೆ ದಿನೇಶ್ ಅಸಮಾಧಾನ

Published : Mar 03, 2019, 06:10 PM ISTUpdated : Mar 03, 2019, 06:39 PM IST
ಇದೆಂಥ ಮೂರ್ಖತನ: ಸಲ್ಮಾನ್ ಖುರ್ಷಿದ್  ಮಾತಿಗೆ ದಿನೇಶ್ ಅಸಮಾಧಾನ

ಸಾರಾಂಶ

ಅಭಿನಂದನ್ ವಾಯುಸೇನೆಗೆ ಸೇರಿದ್ದು ಕಾಂಗ್ರೆಸ್ ಅವಧಿಯಲ್ಲಿ. ಉತ್ತಮ ಪೈಲಟ್ ಆಗಿ ರೂಪುಗೊಂಡಿದ್ದು ಆಗ ಎಂದು ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ವಿವಾದಾತ್ಮಕ ಟ್ವೀಟ್ ಮಾಡಿದ್ದಕ್ಕೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು[ಮಾ.03] ಇಡೀ ದೇಶ ಭಾರತೀಯ ವಾಯುಸೇನೆ ವಿಂಗ್ ಕಮಾಂಡರ್ ಅಭಿನಂದನ್ ಅವರ ಸುರಕ್ಷಿತ ಬರುವಿಕೆಗೆ ಸಂತಸ ವ್ಯಕ್ತಪಡಿಸಿದ್ದರೆ ಕಾಂಗ್ರೆಸ್ ಇದರಲ್ಲಿಯೂ ರಾಜಕಾರಣ ಹುಡುಕಿದೆ ಎಂಬ ಅನುಮಾನ ವ್ಯಕ್ತವಾಗುವಂಥ ಹೇಳಿಕೆಗಳು ಬಂದಿವೆ.

ಆದರೆ ಕಾಂಗ್ರೆಸ್ ಕೇಂದ್ರ ನಾಯಕರಿಗೆ ಕೆಪಿಸಿಸಿ ಅಧ್ಯಕ್ಷರೆ ಟಾಂಗ್ ನೀಡಿದ್ದಾರೆ.  ಸಲ್ಮಾನ್ ಖುರ್ಷಿದ್ ವಿವಾದಾತ್ಮಕ ಟ್ವೀಟ್ ಗೆ ಪ್ರತಿಕ್ರಿಯಾತ್ಮಕ ಉತ್ತರ ನೀಡಿರುವ ದಿನೇಶ್ ಇದೆಂಥ ಮೂರ್ಖತನದ ಪ್ರತಿಕ್ರಿಯೆ, ಈ ರೀತಿಯ ಕೀಳು ಮಟ್ಟದ ಸ್ಥಿತಿ ಬಿಡಿ ಎಂದು ಟ್ವೀಟ್ ಮಾಡಿದ್ದಾರೆ.

ಅಭಿನಂದನ್ ಯುಪಿಎ ಅವಧಿಯಲ್ಲಿ ಪೈಲೆಟ್ ಆಗಿದ್ದು: ಸಲ್ಮಾನ್ ಖುರ್ಷಿದ್!

ಅಭಿನಂದನ್‌ ಕುರಿತು ಸರಣಿ ಟ್ವೀಟ್‌ಗಳನ್ನು ಮಾಡಿದ್ದ ಕೇಂದ್ರ ಮಾಜಿ ಸಚಿವ ಸಲ್ಮಾನ್ ಖುರ್ಷಿದ್, ‘ಶತ್ರುಗಳ ಆಕ್ರಮಣವನ್ನು ತಡೆದ ಭಾರತದ ಅಭಿನಂದನ್ ವರ್ಧಮಾನ್‌ಗೆ ಅಭಿನಂದನೆಗಳು. ವಿಂಗ್ ಕಮಾಂಡರ್ ಅಭಿನಂದನ್ ಪ್ರತಿಕೂಲ ಪರಿಸ್ಥಿತಿಯಲ್ಲಿ ಮಹಾನ್ ಸಮತೋಲನ ಮತ್ತು ವಿಶ್ವಾಸ ತೋರಿಸಿದ್ದಾರೆ. ಅವರು 2004ರಲ್ಲಿ ಸೇವೆಗೆ ಸೇರಿದ್ದು, ಯುಪಿಎ ಸರ್ಕಾರದ ಅವಧಿಯಲ್ಲಿ ಯುದ್ಧ ವಿಮಾನಗಳನ್ನು ಚಲಾಯಿಸುವ ಫೈಟರ್‌ ಪೈಲಟ್‌ ಆಗಿ ಪರಿಣತಿ ಹೊಂದಿದ್ದರು ಎಂದು ಟ್ವೀಟ್ ಮಾಡಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚಿಕ್ಕಮಗಳೂರು: ಬ್ಯಾನರ್ ಗಲಾಟೆ, ಕಾಂಗ್ರೆಸ್ ಮುಖಂಡನ ಬರ್ಬರ ಹತ್ಯೆ, ಬಜರಂಗದಳ ಕಾರ್ಯಕರ್ತರ ಮೇಲೆ ಶಂಕೆ!
ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ