ಇನ್ಫೋಸಿಸ್ ಸಿಇಓ ಆಗಿ ಸಲೀಲ್ ಪಾರೇಖ್ ನೇಮಕ

Published : Dec 02, 2017, 04:38 PM ISTUpdated : Apr 11, 2018, 12:54 PM IST
ಇನ್ಫೋಸಿಸ್ ಸಿಇಓ ಆಗಿ ಸಲೀಲ್ ಪಾರೇಖ್ ನೇಮಕ

ಸಾರಾಂಶ

ಇನ್ಫೋಸಿಸ್’ನ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಓ) ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ (ಎಂಡಿ) ಸಲೀಲ್ ಎಸ್ ಪಾರೇಖ್ ಅವರನ್ನು ಇನ್ಫೋಸಿಸ್ ಶನಿವಾರ ನೇಮಿಸಿದೆ.

ಬೆಂಗಳೂರು: ಇನ್ಫೋಸಿಸ್’ನ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಓ) ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ (ಎಂಡಿ) ಸಲೀಲ್ ಎಸ್ ಪಾರೇಖ್ ಅವರನ್ನು ಇನ್ಫೋಸಿಸ್ ಶನಿವಾರ ನೇಮಿಸಿದೆ.

ಸಲೀಲ್ ಪಾರೇಖ್ ಜ.2ರಂದು ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗಿದೆ. ಮುಂದಿನ 5 ವರ್ಷಗಳ ಅವಧಿಗೆ ಅವರು ಆ ಹುದ್ದೆಯನ್ನು ನಿಭಾಯಿಸಲಿದ್ದಾರೆ ಎಂದು ಕಂಪನಿಯು ಹೇಳಿದೆ.   

ಕ್ಯಾಪ್’ಜೆಮಿನಿ ಕಂಪನಿಯ ಎಕ್ಸಿಕ್ಯೂಟಿವ್ ಬೋರ್ಡ್’ನ ಸದಸ್ಯರಾಗಿರುವ ಪಾರೇಖ್, ಐಐಟಿ ಬಾಂಬೆಯಿಂದ ಏರೋನಾಟಿಕಲ್    ಇಂಜಿನಿಯರಿಂಗ್’ನಲ್ಲಿ ಪದವಿ ಪಡೆದಿದ್ದು, ಬಳಿಕ ಕಾರ್ನೆಲ್ ವಿವಿಯಿಂದ ಕಂಪ್ಯೂಟರ್ ಸೈನ್ಸ್’ನಲ್ಲಿ ಉನ್ನತ ಶಿಕ್ಷಣವನ್ನು ಪಡೆದಿದ್ದಾರೆ.

ನಂದನ್ ನೀಲೆಕಣಿಯವರು ಇನ್ಫೋಸಿಸ್’ನ ಅಧ್ಯಕ್ಷರಾಗಿ ಮುಂದುವರೆಯಲಿದ್ದು, ಹಂಗಾಮಿ ಸಿಇಓ ಆಗಿದ್ದ ಪ್ರವೀಣ್ ರಾವ್  ಮತ್ತೊಮ್ಮೆ ಚೀಫ್ ಆಪರೇಟಿಂಗ್ ಅಧಿಕಾರಿಯಾಗಿ ಮುಂದುವರೆಯಲಿದ್ದಾರೆ ಎಂದು ಹೇಳಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಾಲೀಕನ ನಿಧನಕ್ಕೆ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ ಶ್ವಾನ; ವಿಡಿಯೋ ನೋಡಿ ಭಾವುಕರಾದ ಜನರು
ವಿದೇಶದಲ್ಲಿ ಇರುವವರಿಗೂ ಗ್ಯಾರಂಟಿ ಲಾಭ ಬಗ್ಗೆ ಸಿಎಲ್ಪೀಲಿ ಪ್ರಸ್ತಾಪ: ಸಚಿವ ಮಧು ಬಂಗಾರಪ್ಪ