ದೇವಸ್ವಂ ಮಂಡಳಿ ಯೂ-ಟರ್ನ್: ಸುಪ್ರೀಂ ಕೋರ್ಟ್ ಶಬರಿಮಲೆ ತೀರ್ಪಿಗೆ ಬದ್ಧ!

By Web DeskFirst Published Feb 6, 2019, 5:01 PM IST
Highlights

ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂ ತೀರ್ಪಿನ ಮರುಪರಿಶೀಲನೆ ಅರ್ಜಿ ವಿಚಾರಣೆ| ಸುಪ್ರೀಂ ಮುಂದೆ ಯೂ-ಟರ್ನ್ ಹೊಡೆದ ಶಬರಿಮಲೆ ಅಯ್ಯಪ್ಪ ದೇಗುಲ ಆಡಳಿತ ಮಂಡಳಿ| ಸುಪ್ರೀಂ ಕೋರ್ಟ್ ತೀರ್ಪಿಗೆ ಬದ್ಧ ಎಂದ ದೇವಸ್ವಂ ಮಂಡಳಿ| ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಯಾವುದೇ ಅಭ್ಯಂತರವಿಲ್ಲ ಎಂದ ಟಿಡಿಬಿ

ನವದೆಹಲಿ(ಫೆ.06): ಮಹತ್ವದ ಬೆಳವಣಿಗೆಯೊಂದರಲ್ಲಿ ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿಚಾರಕ್ಕೆ ಸಂಬಂಧಿಸಿದಂತೆ ತಿರುವಾಂಕೂರು ದೇವಸ್ವಂ ಮಂಡಳಿ(ಟಿಡಿಬಿ) ಸುಪ್ರೀಂ ಕೋರ್ಟ್‌ನಲ್ಲಿ ಯೂ-ಟರ್ನ್ ಹೊಡೆದಿದೆ. 

ಶಬರಿಮಲೆಗೆ ಕೋರ್ಟ್ ತೀರ್ಪಿಗೆ ತಾನು ಬದ್ಧವಾಗಿದ್ದು, ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಯಾವುದೇ ಅಭ್ಯಂತರವಿಲ್ಲ ಎಂದು ದೇವಸ್ವಂ ಮಂಡಳಿ ಹೇಳಿದೆ.

TDB President A Padmakumar: Court had asked for Devaswom Board's opinion based on the verdict. Based on the verdict (September 28) we have decided not to file review petition. Devaswom Board accepts the SC verdict, we are of the opinion that there shouldn't be any discrimination. pic.twitter.com/38gzm6tB0O

— ANI (@ANI)

ಇಂದು ಶಬರಿಮಲೆಗೆ ಎಲ್ಲಾ ವಯೋಮಾನದ ಮಹಿಳೆಯರಿಗೂ ಪ್ರವೇಶ ನೀಡಿದ್ದ ಸುಪ್ರೀಂ ತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮರು ಪರಿಶೀಲನಾ ಅರ್ಜಿ ವಿಚಾರಣೆ ನಡೆಯಿತು. ಈ ವೇಳೆ ಮರುಪರಿಶೀಲನೆಯ ಅಗತ್ಯವಿಲ್ಲ ಎಂದು ಶಬರಿಮಲೆ ಅಯ್ಯಪ್ಪ ದೇಗುಲ ಆಡಳಿತ ಮಂಡಳಿ ಕೋರ್ಟ್ ಗೆ ತಿಳಿಸಿದೆ.
 

click me!