ರಾಜಕೀಯಕ್ಕೆ ಪ್ರಿಯಾಂಕಾ ಎಂಟ್ರಿ: ರಾತ್ರೋ ರಾತ್ರಿ ಆಯ್ತು ಈ ಬದಲಾವಣೆ!

Published : Feb 06, 2019, 04:54 PM IST
ರಾಜಕೀಯಕ್ಕೆ ಪ್ರಿಯಾಂಕಾ ಎಂಟ್ರಿ: ರಾತ್ರೋ ರಾತ್ರಿ ಆಯ್ತು ಈ ಬದಲಾವಣೆ!

ಸಾರಾಂಶ

ಪ್ರಿಯಾಂಕಾ ಗಾಂಧಿ ಸಕ್ರಿಯ ರಾಜಕೀಯಕ್ಕೆ ಎಂಟ್ರಿ ನೀಡಿದ್ದು, ಅಧಿಕೃತವಾಗಿ ಅಧಿಕಾರ ಸ್ವೀಕರಿಸುವುದೊಂದೇ ಬಾಕಿ ಇದೆ. ಹೀಗಿರುವಾಗ ಉತ್ತರ ಪ್ರದೇಶದಲ್ಲಿ ರಾತ್ರೋ ರಾತ್ರಿ ಮಹತ್ವದ ಬದಲಾವಣೆಯಾಗಿದ್ದು, ಈ ಮೂಲಕ ಕಾಂಗ್ರೆಸ್ ಸರ್ಕಾರ ಬಹುಮುಖ್ಯ ಸಂದೇಶವನ್ನು ರವಾನಿಸಿದೆ.

ಲಕ್ನೋ[ಫೆ.06]: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜ್ಯೋತಿರಾದಿತ್ಯ ಸಿಂಧಿಯಾ ಇಂದು ಬುಧವಾರ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಸಿಂಧಿಯಾಗೆ ಪಶ್ಚಿಮ ಯುಪಿಯ ಜವಾಬ್ದಾರಿ ವಹಿಸಲಾಗಿದ್ದು, ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಅವರು ವಿಧಿ- ವಿಧಾನದಂತೆ ಪೂಜೆ ನಡೆಸಿ ತಮ್ಮ ಕೆಲಸ ಆರಂಭಿಸಿದ್ದಾರೆ. ವಿಶೇಷವೆಂದರೆ ಸಿಂಧಿಯಾ ಹಾಗೂ ಪ್ರಿಯಾಂಕಾ ಗಾಂಧಿಯವರ ಕಚೇರಿ ಒಂದೇ ಕೋಣೆಯಲ್ಲಿರಲಿದೆ. ಪ್ರಿಯಾಂಕಾರನ್ನು ಪೂರ್ವ ಯುಪಿಯ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ. ಈ ಕಚೇರಿಯಲ್ಲಿ ಈ ಮೊದಲು ಕೇವಲ ಪ್ರಿಯಾಂಕಾ ಗಾಂಧಿ ವಾದ್ರಾರ ಹೆಸರಿನ ಬೋರ್ಡ್ ಲಗತ್ತಿಸಲಾಗಿತ್ತು. ಆದರೀಗ ರಾತ್ರೋ ರಾತ್ರಿ ಸಿಂಧಿಯಾರ ನೇಮ್ ಪ್ಲೇಟ್ ಕೂಡಾ ಹಾಕಲಾಗಿದೆ.

ಮಂಗಳವಾರದಂದು ನೇಮ್ ಪ್ಲೇಟ್ ಹಾಕಿದ ಬಳಿಕ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಪಕ್ಷದ ಪ್ರಧಾನ ಕಚೇರಿಯಲ್ಲಿ ತನ್ನ ತಮ್ಮ ಹಾಗೂ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಕೋಣೆಯ ಪಕ್ಕದ ಕೋಣೆಯಲ್ಲಿ ಕುಳಿತುಕೊಳ್ಳುವುದು ಸ್ಪಷ್ಟವಾಗಿತ್ತು. ಹೀಗಿದ್ದರೂ ಸಿಂಧಿಯಾ ಕಾರ್ಯ ಕಚೇರಿ ಎಲ್ಲಿರಲಿದೆ ಎಂಬುವುದು ಮಾತ್ರ ಅಸ್ಪಷ್ಟವಾಗಿತ್ತು. ಆದರೆ ಬುಧವಾರದಂದು ಈ ಗೊಂದಲವೂ ನಿವಾರಣೆಯಾಗಿದ್ದು, ಪ್ರಿಯಾಂಕಾ ಹಾಗೂ ಸಿಂಧಿಯಾರ ಕಾರ್ಯ ಕಚೇರಿ ಒಂದೇ ಕೋಣೆಯಲ್ಲಿರಲಿದೆ ಎಂಬುವುದು ಬಹಿರಂಗವಾಗಿದೆ.

ಈ ಮೂಲಕ ಕಾಂಗ್ರೆಸ್ ಪಕ್ಷವು ಪ್ರಿಯಾಂಕಾ ಹಾಗೂ ಸಿಂಧಿಯಾ ಇಬ್ಬರ ಜವಾಬ್ದಾರಿ ಸಮನಾಗಿದೆ. ರಾಹುಲ್ ಗಾಂಧಿ ತಂಗಿಯಾಗಿದ್ದರೂ ಪ್ರಿಯಾಂಕಾರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿಲ್ಲ. ಉತ್ತರ ಪ್ರದೇಶ ಹಾಗೂ ಪಕ್ಷಕ್ಕೆ ಇಬ್ಬರೂ ಸಮಾನರು ಎಂಬ ಸಂದೇಶ ರವಾನಿಸಿದೆ.

ಇತ್ತೇಚೆಗಷ್ಟೇ ಸಕ್ರಿಯ ರಾಜಕಾರಣಕ್ಕೆ ಎಂಟ್ರಿ ಕೊಟ್ಟ ಪ್ರಿಯಾಂಕಾ ಈವರೆಗೂ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿಲ್ಲ. ಹೀಗಿದ್ದರೂ ವಿದೇಶದಿಂದ ಮರಳಿದ ಬಳಿಕ ಅವರು ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಆಗು ಹೋಗುಗಳು ಮತ್ತು ರಾಜಕೀಯ ರಣತಂತ್ರಗಳಿಗೆ ಸಂಬಂಧಿಸಿದಂತೆ ನಿರಂತರವಾಗಿ ಸಭೆ ನಡೆಸುತ್ತಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಗುಜರಾತ್‌ನಲ್ಲೊಂದು ನಿರ್ಭಯಾ ಪ್ರಕರಣ
ಯುನೆಸ್ಕೋ ಪರಂಪರೆ ಪಟ್ಟಿಗೆ ದೀಪಾವಳಿ ಸೇರ್ಪಡೆ!