ಸುಷ್ಮಾ ದಾರಿಯಲ್ಲಿ ಸಾಗಲು ಹೆಮ್ಮೆಪಡುವೆ: ಜೈಶಂಕರ್ ಟ್ವೀಟ್!

By Web DeskFirst Published Jun 1, 2019, 2:49 PM IST
Highlights

ಕೇಂದ್ರ ವಿದೇಶಾಂಗ ಸಚಿವರಾಗಿ ಎಸ್. ಜೈಶಂಕರ್ ಅಧಿಕಾರ ಸ್ವೀಕಾರ| ಸುಷ್ಮಾ ಸ್ವರಾಜ್ ಸಾಗಿದ ದಾರಿಯಲ್ಲೇ ಸಾಗುವ ಅಭಯ| ಸುಷ್ಮಾ ಹಾಕಿಕೊಟ್ಟ ಮಾರ್ಗದಲ್ಲಿ ಸಾಗಲು ಹೆಮ್ಮೆ ಇದೆ ಜೈಶಂಕರ್|

ನವದೆಹಲಿ(ಜೂ.01): ಕೇಂದ್ರ ವಿದೇಶಾಂಗ ಸಚಿವರಾಗಿ ಮಾಜಿ ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್ ಅಧಿಕಾರ ಸ್ವೀಕರಿಸಿದ್ದು, ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸಾಗಿದ ದಾರಿಯಲ್ಲೇ ತಾವೂ ಕೂಡ ಸಾಗುವುದಾಗಿ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಟ್ವಿಟ್ ಮಾಡಿರುವ ಜೈಶಂಕರ್, ಸುಷ್ಮಾ ಸ್ವರಾಜ್ ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯಲು ಹೆಮ್ಮೆ ಎನಿಸುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ ತಮ್ಮ ಸಂಪುಟ ಸಹೋದ್ಯೋಗಿ ಮುರಳೀಧರನ್ ಅವರ ಜೊತೆ ದಿನದ 24 ಗಂಟೆಗಳ ಕಾಲ ಕೆಲಸ ನಿರ್ವಹಿಸಲು ಸಿದ್ಧ ಎಂದು ಎಂದು ಹೇಳಿದ್ದಾರೆ.

My first tweet.

Thank you all for the best wishes!
Honoured to be given this responsibility.
Proud to follow on the footsteps of ji

— Dr. S. Jaishankar (@DrSJaishankar)

ಭಾರತ- ಅಮೆರಿಕ ಪರಮಾಣು ಒಪ್ಪಂದದ ಸಂದರ್ಭದಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದ ಜೈಶಂಕರ್ ಅವರನ್ನು ಪ್ರಧಾನಿ ಮೋದಿ ವಿದೇಶಾಂಗ ಇಲಾಖೆ ಮಂತ್ರಿಯನ್ನಾಗಿ ನೇಮಿಸಿರುವುದು ತೀವ್ರ ಕುತೂಹಲ ಮೂಡಿಸಿದೆ.

 

click me!