
ನವದೆಹಲಿ: ರಷ್ಯಾದ ಸಾರಟೋವ್ ಏರ್’ಲೈನ್ಸ್ ಮಾಸ್ಕೋ ಬಳಿ ಪತನಗೊಂಡಿದ್ದು ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಹಾಗೂ ಸಿಬ್ಬಂದಿ ಸೇರಿ 71 ಸಾವನಪ್ಪಿದ್ದಾರೆಂದು ವರದಿಯಾಗಿದೆ.
ಮಾಸ್ಕೋದಿಂದ ಸುಮಾರು 1500 ಕಿ.ಮೀ ದೂರದಲ್ಲಿರುವ ಒರ್ಸ್ಕ್ ನಗರಕ್ಕೆ ಹೊರಟ್ಟಿದ್ದ AN-148 ವಿಮಾನದಲ್ಲಿ 65 ಮಂದಿ ಪ್ರಯಾಣಿಕರು ಹಾಗೂ 6 ಮಂದಿ ಸಿಬ್ಬಂದಿಗಳಿದ್ದರು ಎನ್ನಲಾಗಿದೆ.
ಮಾಸ್ಕೋ ಡೋಮೋಡಿಡೋವೋ ವಿಮಾನ ನಿಲ್ದಾಣದಿಂದ ಹಾರಾಟ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ವಿಮಾನವು ರಾಡಾರ್’ನಿಂದ ತನ್ನ ಸಂಪರ್ಕವನ್ನು ಕಳೆದುಕೊಂಡಿದೆ.
ಮಾಸ್ಕೋನಿಂದ ಸುಮಾರು 40 ಕಿ.ಮೀ. ದೂರದ ರ್ಯಾಮೆನ್ಸ್ಕೋಯ್ ಎಂಬ ಊರಿನಲ್ಲಿ ವಿಮಾನದ ಅವಶೇಷಗಳು ಪತ್ತೆಯಾಗಿದ್ದು, ಯಾರೂ ಬದುಕುಳಿದಿಲ್ಲವೆಂದು ಹೇಳಲಾಗಿದೆ.
ವಿಮಾನ ಪತನಕ್ಕೆ ಕಾರಣಗಳೇನು ಎಂಬುವುದು ಈವರೆಗೆ ಧೃಡಪಟ್ಟಿಲ್ಲವೆಂದು ರಷ್ಯಾ ಅಧಿಕಾರಿಗಳು ತಿಳಿಸಿದ್ದಾರೆ. ಪತನಕ್ಕೆ ಹವಾಮಾನ ವೈಪರೀತ್ಯವೋ ಅಥವಾ ಪೈಲಟ್’ ಪ್ರಮಾದವೋ ಎಂದು ತನಿಖೆಯಿಂದ ತಿಳಿಯುವುದು ಎಂದು ಅವರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.