ರಷ್ಯಾದಿಂದ ಭಾರತಕ್ಕೆ ಶಸ್ತ್ರಾಸ್ತ್ರ ಆಮದಿನಲ್ಲಿ ಶೇ.42 ರಷ್ಟುಕುಸಿತ

By Web DeskFirst Published Mar 12, 2019, 2:02 PM IST
Highlights

ರಷ್ಯಾದಿಂದ ಭಾರತಕ್ಕೆ ಶಸ್ತ್ರಾಸ್ತ್ರ ಆಮದಿನಲ್ಲಿ ಶೇ.42ರಷ್ಟು ಕುಸಿತ | 2014-18ನೇ ಸಾಲಿನಲ್ಲಿ ಭಾರತ ವಿಶ್ವದ ಎರಡನೇ ಅತಿಹೆಚ್ಚುವ ಶಸ್ತ್ರಾಸ್ತ್ರ ಆಮದು ರಾಷ್ಟ್ರವಾಗಿ ಹೊರಹೊಮ್ಮಿದೆ. 

ವಾಷಿಂಗ್ಟನ್‌ (ಮಾ. 12): ರಷ್ಯಾದಿಂದ ಭಾರತಕ್ಕೆ ರಫ್ತಾಗುತ್ತಿದ್ದ ಶಸ್ತ್ರಾಸ್ತ್ರಗಳ ಪ್ರಮಾಣ ಶೇ.42ರಷ್ಟುಕುಸಿತವಾಗಿದೆ ಎಂದು ವರದಿಯೊಂದು ತಿಳಿಸಿದೆ. 2009-13 ಮತ್ತು 2014-18ರ ನಡುವಿನ ಅವಧಿಯಲ್ಲಿ ವ್ಯತ್ಯಾಸವನ್ನು ಈ ವರದಿ ತಿಳಿಸಿದೆ.

2014-18ರ ಅವಧಿಯಲ್ಲಿ ಭಾರತದ ಒಟ್ಟಾರೆ ಶಸ್ತ್ರಾಸ್ತ್ರ ಆಮದಿಯಲ್ಲಿ ರಷ್ಯಾದ ಪಾಲು ಶೇ.58ರಷ್ಟಿದ್ದು, 2009-13ರ ಅವಧಿಯಲ್ಲಿ ಇದು ಶೇ.76ರಷ್ಟಿತ್ತು. ಸ್ಟಾಕ್‌ಹೋಂ ಅಂತಾರಾಷ್ಟ್ರೀಯ ಶಾಂತಿ ಮತ್ತು ಸಂಶೋಧನಾ ಸಂಸ್ಥೆಯು ‘ಟ್ರೆಂಡ್ಸ್‌ ಇನ್‌ ಇಂಟರ್‌ನ್ಯಾಷನಲ್‌ ಆಮ್ಸ್‌ರ್‍ ಟ್ರಾನ್ಸಫರ್‌- 2018’ರ ವರದಿಯಲ್ಲಿ ಈ ಅಂಶವನ್ನು ಉಲ್ಲೇಖಿಸಿದೆ.

ಪ್ರಧಾನಿ ನರೇಂದ್ರ ಮೋಧಿ ಅವರ ಪರಿಶ್ರಮ ಆಧರಿಸಿ ಶಸ್ತ್ರಾಸ್ತ್ರಕ್ಕಾಗಿ ಬೇರೆ ದೇಶಗಳ ಮೇಲಿನ ಅವಲಂಭನ ಕಡಿಮೆಗೊಳಿಸಿದ ಪರಿಣಾಮ ಭಾರತ ಶಸ್ತ್ರಾಸ್ತ್ರಗಳ ಆಮದಿನಲ್ಲಿ ಶೇ.24ರಷ್ಟನ್ನು ಕಡಿಮೆ ಮಾಡಿದೆ. ಆದಾಗ್ಯೂ 2001ರಲ್ಲಿನ ರಷ್ಯಾದಿಂದ ಯುದ್ದವಿಮಾನ ಖರೀದಿ ಮತ್ತು 2008ರಲ್ಲಿ ಫ್ರಾನ್ಸ್‌ನಿಂದ ಸಬ್‌ಮರೀನ್‌ ಖರೀದಿ ಪ್ರಕ್ರಿಯೆ ವಿಳಂಬವಾಗಿವೆ. 2014-18ನೇ ಸಾಲಿನಲ್ಲಿ ಭಾರತ ವಿಶ್ವದ ಎರಡನೇ ಅತಿಹೆಚ್ಚುವ ಶಸ್ತ್ರಾಸ್ತ್ರ ಆಮದು ರಾಷ್ಟ್ರವಾಗಿ ಹೊರಹೊಮ್ಮಿದ್ದು, ಇದು ವಿಶ್ವದ ಶೇ.9.5ರಷ್ಟುಭಾಗವಾಗಿದೆ ಎಂದು ವರದಿ ಹೇಳಿದೆ.

 

click me!