
ಛಾಪ್ರಾ: ಸಾವಿರ ಕನಸುಗಳನ್ನು ಕಟ್ಟಿಕೊಂಡು ಹಸೆಮಣೆ ಏರಲು ಸಿದ್ಧವಾಗಿದ್ದಳು ಅವಳು. ಏನಿಲ್ಲದಿದ್ದರೂ ಸರಿ, ಕುಡುಕನಲ್ಲದ ಗಂಡ ಸಿಗಲಿ ಎಂಬುವುದು ಬಹುತೇಕ ಹೆಣ್ಣು ಮಕ್ಕಳ ಕನಸು. ಆದರೆ, ತಾಳಿ ಕಟ್ಟಲೂ ಒದ್ದಾಡುತ್ತಿದ್ದ ವರ. ಕುಡಿದ ಮತ್ತಿನಲ್ಲಿ ತಾನೇನು ಮಾಡುತ್ತಿದ್ದೇನೆ ಎಂಬ ಅರಿವೂ ಅವನಿಗೆ ಇರಲಿಲ್ಲ. ಸರಿ, ಮದುವೆಯೇ ಬೇಡವೆಂದಳು ವಧು.
ಅದೃಷ್ಟವಶಾತ್ ಹೆಣ್ಣನ್ನು ಒಲಿಸಲು ಪೋಷಕರು ಯತ್ನಿಸಿದರಾದರೂ, ಒತ್ತಾಯಿಸಲಿಲ್ಲ. ಅವನ ವರ್ತನೆಗೆ ಮದುವೆಗೆ ಆಗಮಿಸಿದ ಮಂದಿಯೇ ದಂಗಾಗಿದ್ದರು. ವರನ ವರ್ತನೆಗೆ ಬೇಸತ್ತಿದ್ದ ಪೋಷಕರೂ ಮಗಳ ನಿರ್ಧಾರವನ್ನು ಬೆಂಬಲಿಸಿದರು. ನಡೆಯಬೇಕಿದ್ದ ಮದುವೆ ಕ್ಯಾನ್ಸಲ್ ಆಯಿತು. ಈ ಯುವತಿಯ ನಿರ್ಧಾರ ಸಾವಿರಾರು ಹೆಣ್ಣು ಮಕ್ಕಳಿಗೆ ಮಾದರಿಯಾಯಿತು.
ತನ್ನ ಸುತ್ತಮುತ್ತ ಏನು ನಡೆಯುತ್ತಿದೆ ಎಂಬುವುದು ಅರಿವಿಗೆ ಬಾರದಷ್ಟು ಕಂಠಪೂರ್ತಿ ಕುಡಿದಿದ್ದ ವರ. ಹಸೆಮಣೆ ಮೇಲೆ ಕೂತ ಮೇಲೂ ಅವನ ವರ್ತನೆ ಅಸಭ್ಯವಾಗಿಯೇ ಇತ್ತು. ಇನ್ನು ಇಂಥವನೊಂದಿಗೆ ಬದುಕು ಸಾಗಿಸುವುದು ಹೇಗೆ? ಗಟ್ಟಿಯಾಗಿ ನಿರ್ಧರಿಸಿದಳು ಆ ಹೆಣ್ಣು.
ಬಿಹಾರದ ಛಾಪ್ರಾ ತಾಲೂಕಿನ ದುಮ್ರಿ ಚಾಪಿಯಾ ಗ್ರಾಮದಲ್ಲಿ ರಿಂಕಿ ಕುಮಾರಿ ವಿವಾಹ ಬಬ್ಲು ಕುಮಾರ್ ಜತೆ ನಡೆಯುವುದರಲ್ಲಿತ್ತು. ವರದಕ್ಷಿಣೆಯಾಗಿ ಪಡೆದ ಹಣವನ್ನು ಹಿಂದಿರುಗಿಸಿದ ನಂತರ ವರನ ಕಡೆಯವರನ್ನು ಗ್ರಾಮಸ್ಥರು ಮರಳಲು ಬಿಟ್ಟರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.