
ಬೆಂಗಳೂರು(ಅ.28): ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಗೆದಷ್ಟೂ ಆಘಾತಕಾರಿ ಸುದ್ದಿಗಳು ಹೊರಬರುತ್ತಿವೆ. ರುದ್ರೇಶ್ ಕೊಲೆಗೆ ಸಂಚು ರೂಪಿತವಾಗಿದ್ದು ಕೇರಳದ ಕಣ್ಣೂರಿನಲ್ಲಿ ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ. ಈ ರುದ್ರೇಶ್ ಹತ್ಯೆ ಸಂಚಿಗೆ ಆರೋಪಿಗಳು ಇಟ್ಟ ಹೆಸರು ಆಪರೇಷನ್ ಮುರ್ಗಾ ಉರ್ದುವಿನಲ್ಲಿ ಮುರ್ಗಾ ಅಂದ್ರೆ ಕೋಳಿ ಅಂತ ಅರ್ಥ. ಆಪರೇಷನ್ ಮುರ್ಗಾ ಎಂದು ಹೆಸರಿಟ್ಟ ಹಂತಕರು ರುದ್ರೇಶ್ನನ್ನ ಮುಗಿಸಲು ಮೊದಲೇ ಸ್ಕೆಚ್ ಹಾಕಿದ್ದರು.
ಇದಕ್ಕೂ ಮೊದಲು ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಎಚ್ಕೆಪಿ ದರ್ಗಾದಲ್ಲಿ ಹತ್ಯೆ ಸಂಬಂಧ ಮೀಟಿಂಗ್ ನಡೆದಿತ್ತು. ಆ ಮೀಟಿಂಗ್`ನಲ್ಲಿ ಹಿಂದೂ ಮುಖಂಡನೊಬ್ಬನ ಹತ್ಯೆಗೆ ಯೋಜನೆ ರೂಪಿಸಲಾಗಿತ್ತು. ಆ ಹಿಟ್ ಲಿಸ್ಟ್`ನಲ್ಲಿ ಮೊದಲು ಬಂದ ಹೆಸರು RSS ಕಾರ್ಯಕರ್ತ ರುದ್ರೇಶ್. ಶಿವಾಜಿನಗರದಲ್ಲಿ ಪ್ರಭಾವಿಯಾಗಿ ಬೆಳೆಯುತ್ತಿದ್ದ ರುದ್ರೇಶ್ ಮುಗಿಸಲು ಸಂಚು ರೂಪಿಸಿದ್ದರು.ಆ ಸಭೆಯಲ್ಲಿ 25ಕ್ಕೂ ಹೆಚ್ಚು ಜನ ರುದ್ರೇಶ್ ಹತ್ಯೆ ಮಾಡಲು ರೆಡಿ ಅಂತಾ ಹೇಳಿದ್ದರು.
ಇನ್ನೂ, ರುದ್ರೇಶ್ ಹತ್ಯೆ ಆರೋಪಿಗಳ ಬೆನ್ನಿಗೆ ನಿಂತಿದ್ದು ಕೇರಳದ ಪ್ರಭಾವಿ ವ್ಯಕ್ತಿ ಎಂದು ಸುವರ್ಣ ನ್ಯೂಸ್`ಗೆ ತಿಳಿದು ಬಂದಿದೆ. ನಾಯಿಗಳ ಕುತ್ತಿಗೆ ಕತ್ತರಿಸುವಷ್ಟು ಸುಲಭವಾಗಿ ಕೊಲೆ ನಡೆಯಬೇಕು ಎಂದು ಸ್ಕೆಚ್ ಹಾಕಿದ್ದರು. ಇದಕ್ಕಾಗಿ ಕೇರಳದ ಕಣ್ಣೂರಿನ ಕಾಡುಗಳಲ್ಲಿ ತರಬೇತಿ ಪಡೆದಿದ್ದರು. ಬೈಕ್ ರೈಡ್ ಮಾಡುತ್ತಾ ನಾಯಿ ಕೊಲ್ಲುವ ತರಬೇತಿ ನಡೆಸಿದ್ದ ಹಂತಕರು, ಅದೇ ಮಾದರಿಯಲ್ಲೇ ಬೈಕ್`ನಲ್ಲಿ ಬಂದು ನಾಯಿ ಕೊಲ್ಲುವಂತೆಯೇ ರುದ್ರೇಶ್ ಕತ್ತು ಕತ್ತರಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.