ದೇಶದ ಪ್ರತಿಯೊಬ್ಬರ ಖಾತೆಗಳಿಗೆ 15 ಲಕ್ಷ ರೂ; ಮೋದಿ ಭರವಸೆ ಬಗ್ಗೆ ಮಾಹಿತಿ ನೀಡಲು ಆರ್’ಟಿಐ ನಕಾರ

First Published Apr 24, 2018, 7:50 AM IST
Highlights

2014ರ ಲೋಕಸಭಾ ಚುನಾವಣೆ ಪ್ರಚಾರದ ವೇಳೆ ದೇಶದ ಪ್ರತಿಯೊಬ್ಬರ ಖಾತೆಗಳಿಗೆ 15 ಲಕ್ಷ ರೂ ಠೇವಣಿ ಮಾಡಲಾಗುತ್ತದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಭರವಸೆ ಬಗ್ಗೆ ಆರ್‌ಟಿಐ ಕಾಯ್ದೆಯಡಿ ಮಾಹಿತಿ ನೀಡಲು ಪ್ರಧಾನಿ ಕಚೇರಿ ನಿರಾಕರಿಸಿದೆ. 

ನವದೆಹಲಿ (ಏ.24): 2014ರ ಲೋಕಸಭಾ ಚುನಾವಣೆ ಪ್ರಚಾರದ ವೇಳೆ ದೇಶದ ಪ್ರತಿಯೊಬ್ಬರ ಖಾತೆಗಳಿಗೆ 15 ಲಕ್ಷ ರೂ ಠೇವಣಿ ಮಾಡಲಾಗುತ್ತದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಭರವಸೆ ಬಗ್ಗೆ ಆರ್‌ಟಿಐ ಕಾಯ್ದೆಯಡಿ ಮಾಹಿತಿ ನೀಡಲು ಪ್ರಧಾನಿ ಕಚೇರಿ ನಿರಾಕರಿಸಿದೆ. 

ಈ ಬಗ್ಗೆ ಆರ್‌ಟಿಐ ಕಾಯ್ದೆಯಡಿ ಸಲ್ಲಿಕೆಯಾಗಿದ್ದ ಅರ್ಜಿಗೆ ಉತ್ತರಿಸಿದ ಪ್ರಧಾನಿ ಕಾರ್ಯಾಲಯ, ‘ಚುನಾವಣೆ ರಾರ‍ಯಲಿ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರು. ಹಾಕಲಾಗುತ್ತದೆ ಎಂಬ ವಿಚಾರವು ಆರ್‌ಟಿಐ ಕಾಯ್ದೆಯಡಿ ಬರುವುದಿಲ್ಲ. ಹೀಗಾಗಿ, ಈ ಕುರಿತು ಮಾಹಿತಿ ನೀಡಲು ಸಾಧ್ಯವಿಲ್ಲ,’ ಎಂದು ಕೇಂದ್ರೀಯ ಮಾಹಿತಿ ಆಯೋಗಕ್ಕೆ ಕಡ್ಡಿ ಮುರಿದಂತೆ ಹೇಳಿದೆ. 2016ರ ನ.26 ಅಂದರೆ, ಕೇಂದ್ರ ಸರ್ಕಾರ ನೋಟು ಅಪನಗದೀಕರಣ ಜಾರಿಗೊಳಿಸಿದ 18 ದಿನಗಳ ಬಳಿಕ ಪ್ರಧಾನಿ ಮೋದಿ ಅವರ ವಾಗ್ದಾನದಂತೆ ಯಾವ ದಿನಾಂಕದಂದು ದೇಶದ ನಾಗರಿಕರಿಗೆ ಸರ್ಕಾರ 15 ಲಕ್ಷ ರು. ಠೇವಣಿ ಮಾಡಿದೆ ಎಂದು ಅರ್ಜಿದಾರ ಮೋಹನ್‌ ಕುಮಾರ್‌ ಶರ್ಮಾ ಎಂಬುವರು ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ಸಲ್ಲಿಸಲಾಗಿದ್ದ ಅರ್ಜಿಗೆ ಪ್ರಧಾನಿ ಕಾರ್ಯಾಲಯ ಮತ್ತು ಆರ್‌ಬಿಐ ಸರಿಯಾದ ಮಾಹಿತಿ ನೀಡಿಲ್ಲ ಎಂದು ವಿಚಾರಣೆ ವೇಳೆ ಮಾಹಿತಿ ಆಯೋಗದ ಮುಖ್ಯಸ್ಥ ಆರ್‌.ಕೆ.ಮಾಥೂರ್‌ ಅವರಲ್ಲಿ ಅರ್ಜಿದಾರ ಶರ್ಮಾ ದೂರಿದ್ದರು.

click me!