ಮಿಶನ್ 2024: RSS ನ ಮುಸ್ಲಿಂ ರಾಷ್ಟ್ರೀಯ ಮಂಚ್ ಹೈಪರ್ ಆ್ಯಕ್ಟೀವ್!

Published : Jul 03, 2019, 02:37 PM IST
ಮಿಶನ್ 2024: RSS ನ ಮುಸ್ಲಿಂ ರಾಷ್ಟ್ರೀಯ ಮಂಚ್ ಹೈಪರ್ ಆ್ಯಕ್ಟೀವ್!

ಸಾರಾಂಶ

ಮಿಶನ್ 2024 ಯೋಜನೆಯೊಂದಿಗೆ ಆ್ಯಕ್ಟೀವ್ ಆದ ಮುಸ್ಲಿಂ ರಾಷ್ಟ್ರೀಯ ಮಂಚ್| RSS ಅಲ್ಪಸಂಖ್ಯಾತ ಘಟಕವಾದ MRM ಭರ್ಜರಿ ಪ್ಲ್ಯಾನ್| ತೆಲಂಗಾಣದಲ್ಲಿ ಶಕ್ತಿ ವೃದ್ಧಿಸಲು ಮುಂದಾದ MRM| ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾ ಘಟಕ ಆರಂಭಿಸಿದ MRM| ಮುಸ್ಲಿಂ ಬೆಂಬಲ ಗಳಿಸಿ ಎಐಎಂಐಎಂ ಕಟ್ಟಿ ಹಾಕುವ ಪ್ರಯತ್ನ| MRM ಮುಖ್ಯಸ್ಥ ಇಂದ್ರೇಶ್ ಕುಮಾರ್ ನೇತೃತ್ವದಲ್ಲಿ ಸಭೆ| ಇಂದ್ರೇಶ್’ಗೆ ಶೇಖ್ ಮೊಯಿನುದ್ದೀನ್ ಶಾ ಖಾದ್ರಿ ಸಾಥ್| 

ಹೈದರಾಬಾದ್(ಜು.03): ತೆಲಂಗಾಣದಲ್ಲಿ ಪಕ್ಷದ ಶಕ್ತಿ ವೃದ್ಧಿಸಲು ಶತಪ್ರಯತ್ನ ನಡೆಸುತ್ತಿರುವ ಬಿಜೆಪಿ, ಮುಂದೊಂದು ದಿನ ಇಡೀ ತೆಲಂಗಾಣವನ್ನು ತೆಕ್ಕೆಗೆ ತೆಗೆದುಕೊಳ್ಳುವ ಇರಾದೆಯೊಂದಿಗೆ ಕಾರ್ಯಪ್ರವೃತ್ತವಾಗಿದೆ.

ಈ ಮಧ್ಯೆ ರಾಜ್ಯದಲ್ಲಿ ತನ್ನ ಪ್ರಭಾವ ವೃದ್ಧಿಸಲು ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಯ ಅಲ್ಪಸಂಖ್ಯಾತ ಘಟಕ ಮುಸ್ಲಿಂ ರಾಷ್ಟ್ರೀಯ ಮಂಚ್ ಕೂಡ ಸರ್ವಸನ್ನದ್ಧವಾಗಿದೆ.

ನಾಲ್ಕು ವರ್ಷಗಳ ಹಿಂದೆ ಹೈದರಾಬಾದ್’ನಲ್ಲಿ ಕೇವಲ ಇಬ್ಬರು ಸದಸ್ಯರೊಂದಿಗೆ ತನ್ನ ಮೊದಲ ಘಟಕ ಆರಂಭಿಸಿದ್ದ ಮುಸ್ಲಿಂ ರಾಷ್ಟ್ರೀಯ ಮಂಚ್, ಇದೀಗ ನಗರದಲ್ಲಿ ಸುಮಾರು 3 ಸಾವಿರ ಸದಸ್ಯರನ್ನು ಹೊಂದಿದೆ.

ಇದೀಗ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ರಾಷ್ಟ್ರೀಯ ಮುಸ್ಲಿಂ ಮಂಚ್’ನ ಘಟಕಗಳನ್ನು ತೆರೆಯಲಾಗಿದ್ದು, ರಾಜ್ಯದಲ್ಲಿ ಒಟ್ಟು 10 ಸಾವಿರ ಸದಸ್ಯತ್ವ ಪಡೆಯುವ ಇರಾದೆ ಸಂಘಟನೆಗಿದೆ.

ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವ MRM ಮುಖ್ಯಸ್ಥ ಇಂದ್ರೇಶ್ ಕುಮಾರ್, ಕಳೆದ ಭಾನುವಾರ ಹೈದರಾಬಾದ್’ನಲ್ಲಿ ಮುಸ್ಲಿಂ ನಾಯಕರೊಂದಿಗೆ ಸಭೆ ನಡೆಸಿದ್ದಾರೆ. ಇಂದ್ರೇಶ್ ಕುಮಾರ್ ಅವರಿಗೆ ನಗರದ ಪ್ರಮುಖ ಮುಸ್ಲಿಂ ವಿದ್ವಾಂಸರಾದ  ಶೇಖ್ ಮೊಯಿನುದ್ದೀನ್ ಶಾ ಖಾದ್ರಿ ಸಾಥ್ ನೀಡಿದ್ದಾರೆ.

ಮುಂದಿನ ತಿಂಗಳು ಆಂಧ್ರದ ಎಲ್ಲಾ ಜಿಲ್ಲೆಗಳಲ್ಲೂ ಘಟಕಗಳನ್ನು ತೆರೆಯಲು MRM ನಿರ್ಧರಿಸಿದ್ದು, ಪ್ರಮುಖವಾಗಿ ಮುಸ್ಲಿಂ ಬಾಹುಳ್ಯ ರಾಜ್ಯವಾದ ತೆಲಂಗಾಣದಲ್ಲಿ ತನ್ನ ಬದ್ಧ ವೈರಿ ಎಐಎಂಐಎಂ ನ್ನು ಮಣಿಸಲು ಹಾಗೂ ಮುಸ್ಲಿಮರ ಬೆಂಬಲ ಗಳಿಸಲು ಮಿಶನ್ 2024 ಘೊಷಣೆಯೊಂದಿಗೆ ಕಾರ್ಯೋನ್ಮುಖವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಪರೂಪದ ಕೋತಿ ಪ್ರಭೇದ ಬ್ಯಾಗ್‌ನಲ್ಲಿಟ್ಟು ವಿದೇಶದಿಂದ ಅಕ್ರಮ ಸಾಗಾಟ, ಬೆಂಗಳೂರು ಏರ್ಪೋರ್ಟ್‌ನಲ್ಲಿ ಸಿಕ್ಕಿಬಿದ್ದ ಪ್ರಯಾಣಿಕ!
ಡೆವಿಲ್ ಇನ್ ಟ್ರಬಲ್: ನಟ ದರ್ಶನ್‌ನಿಂದ ಒಂದು ಗನ್ ಕಿತ್ತುಕೊಂಡರೂ ಮತ್ತೊಂದು .22mm ರೈಫಲ್ ಮರೆತ ಪೊಲೀಸರು