ಕೋಮು ಘರ್ಷಣೆ: ದೆಹಲಿ ಪೊಲೀಸ್ ಮುಖ್ಯಸ್ಥರಿಗೆ ಶಾ ಸಮನ್ಸ್!

By Web DeskFirst Published Jul 3, 2019, 2:10 PM IST
Highlights

ದೆಹಲಿಯ ಚಾಂದನಿ ಚೌಕ್ ಬಳಿ ಸಂಭವಿಸಿದ ಕೋಮು ಘರ್ಷಣೆ| ದೆಹಲಿ ಪೊಲೀಸ್ ಮುಖ್ಯಸ್ಥರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮನ್ಸ್| ಕಮಿಷನರ್ ಅಮುಲ್ಯಾ ಪಟ್ನಾಯಕ್’ಗೆ ಸಮನ್ಸ್ ಜಾರಿ ಮಾಡಿದ ಅಮಿತ್ ಶಾ| ಪಾರ್ಕಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಕೋಮು ಘರ್ಷಣೆ| ಪರಿಸ್ಥಿತಿ ಶಾಂತವಾಗಿದೆ ಎಂದು ಕಮಿಷನರ್ ವಿವರಣೆ|

ನವದೆಹಲಿ(ಜು.03): ರಾಷ್ಟ್ರ ರಾಜಧಾನಿ ನವದೆಹಲಿಯ ಚಾಂದನಿ ಚೌಕ್’ನಲ್ಲಿ ಸಂಭವಿಸಿದ ಕೋಮು ಘರ್ಷಣೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸ್ ಮುಖ್ಯಸ್ಥರಿಗೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮನ್ಸ್ ನೀಡಿದ್ದಾರೆ.

ಚಾಂದನಿ ಚೌಕ್ ಬಳಿಯ ಹೌಜ್ ಖಾಜಿ ಪ್ರದೇಶದಲ್ಲಿ ಪಾರ್ಕಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಎರಡು ಕೋಮುಗಳ ಮಧ್ಯೆ ಘರ್ಷಣೆ ಸಂಭವಿಸಿತ್ತು. ಘರ್ಷಣೆಯಲ್ಲಿ ಪಕ್ಕದ ದೇಗುಲವೊಂದಕ್ಕೆ ಹಾನಿ ಕೂಡ ಮಾಡಲಾಗಿತ್ತು. 

Sources: Delhi Police Commissioner Amulya Patnaik was summoned by Home Minister Amit Shah. He was reprimanded by HM Shah over incident. A clash had broken out between 2 groups over parking and a temple was vandalised on June 30, in Hauz Qazi area pic.twitter.com/pbZ1nbyqkT

— ANI (@ANI)

ಈ ಕುರಿತು ವಿವರಣೆ ಕೋರಿ ಅಮಿತ್ ಶಾ ದೆಹಲಿ ಪೊಲೀಸ್ ಕಮಿಷನರ್ ಅಮುಲ್ಯಾ ಪಟ್ನಾಯಕ್ ಅವರಿಗೆ ಸಮನ್ಸ್ ಜಾರಿ ಮಾಡಿದ್ದಾರೆ.

ಘಟನೆಯ ಕುರಿತು ಮಾಹಿತಿ ನೀಡಿರುವ ಪಟ್ನಾಯಕ್, ಘಟನೆಗೆ ಸಂಬಂಧಿಸಿದಂತೆ ಇದುವರೆಗೂ ನಾಲ್ಕು ಜನರನ್ನು ಬಂಧಿಸಲಾಗಿದ್ದು, ಪರಿಸ್ಥಿತಿ ಶಾಂತವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
 

click me!