ಐಐಟಿ, ಐಐಎಂ, ಎನ್ಐಟಿಗಳಲ್ಲಿ ಇಂಗ್ಲಿಷ್ ರದ್ದು ಮಾಡಿ : ಸಚಿವಾಲಯಕ್ಕೆ ಆರೆಸ್ಸೆಸ್ ಸಲಹೆ

By Web DeskFirst Published Oct 21, 2016, 5:10 PM IST
Highlights

ಹೊಸಶಿಕ್ಷಣನೀತಿಜಾರಿಗೆಸಂಬಂಸಿದಪ್ರಕ್ರಿಯೆನಡೆಯುತ್ತಿರುವಹಿನ್ನೆಲೆಯಲ್ಲಿಆರೆಸ್ಸೆಸ್ಶಿಕ್ಷಣಘಟಕವಾದಶಿಕ್ಷಾಸಂಸ್ಕೃತಿಉತ್ಥಾನ್ನ್ಯಾಸ್(ಎಸ್ಎಸ್ಯುಎನ್) ಇಂತಹಅನೇಕಸಲಹೆಗಳನ್ನುಸಚಿವಾಲಯಕ್ಕೆಸಲ್ಲಿಸಿದೆ

ನವದೆಹಲಿ(ಅ.21): ದೇಶದ ಶಿಕ್ಷಣ ಸಂಸ್ಥೆಗಳಲ್ಲಿ ಇಂಗ್ಲಿಷ್ ಅನ್ನು ಬೋಧನಾ ಮಾಧ್ಯಮವಾಗಿ ಬಳಸಿಕೊಳ್ಳುವುದಕ್ಕೆ ಸಂಪೂರ್ಣ ನಿಷೇಧ ಹೇರಬೇಕು. ಐಐಟಿ, ಐಐಎಂ, ಎನ್‌ಐಟಿಯಂತಹ ಸಂಸ್ಥೆಗಳಲ್ಲೂ ಇಂಗ್ಲಿಷ್ ಅನ್ನು ಕಿತ್ತುಹಾಕಿ, ಅಲ್ಲಿ ಭಾರತೀಯ ಭಾಷೆಗಳನ್ನೇ ಕಡ್ಡಾಯಗೊಳಿಸಬೇಕು ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ ಆರೆಸ್ಸೆಸ್‌ನ ಶಿಕ್ಷಣ ಘಟಕ ಮನವಿ ಮಾಡಿದೆ.

ಹೊಸ ಶಿಕ್ಷಣ ನೀತಿ ಜಾರಿಗೆ ಸಂಬಂಸಿದ ಪ್ರಕ್ರಿಯೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಆರೆಸ್ಸೆಸ್‌ನ ಶಿಕ್ಷಣ ಘಟಕವಾದ ಶಿಕ್ಷಾ ಸಂಸ್ಕೃತಿ ಉತ್ಥಾನ್ ನ್ಯಾಸ್(ಎಸ್‌ಎಸ್‌ಯುಎನ್) ಇಂತಹ ಅನೇಕ ಸಲಹೆಗಳನ್ನು ಸಚಿವಾಲಯಕ್ಕೆ ಸಲ್ಲಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವಾಲಯವು, ‘‘ನಿಮ್ಮ ಸಲಹೆಗಳನ್ನು ಸ್ವೀಕರಿಸಲಾಗಿದ್ದು, ಅವುಗಳ ಬಗ್ಗೆ ಚರ್ಚಿಸಲಾಗುವುದು,’’ ಎಂದಿದೆ ಎಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.

ಏನೇನು ಸಲಹೆಗಳು?

ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣದವರೆಗೂ ನಮ್ಮ ದೇಶದ ಶಿಕ್ಷಣ ಸಂಸ್ಥೆಗಳಲ್ಲಿ ಬೋಧನಾ ಮಾಧ್ಯಮವಾಗಿ ಇಂಗ್ಲಿಷ್ ಭಾಷೆಯ ಬಳಕೆಯನ್ನು ಸಂಪೂರ್ಣವಾಗಿ ರದ್ದು ಮಾಡಬೇಕು. ಸಚಿವಾಲಯವು ಕ್ರಮೇಣವಾಗಿ ಶಿಕ್ಷಣದ ಎಲ್ಲ ಹಂತಗಳಲ್ಲೂ ಇಂಗ್ಲಿಷ್ ಭಾಷೆಯನ್ನು ತೆಗೆದುಹಾಕುತ್ತಾ ಬರಬೇಕು. ಖಾಸಗಿ ಮತ್ತು ಸರ್ಕಾರಿ ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾನಿಲಯಗಳಲ್ಲೂ ಇಂಗ್ಲಿಷ್ ಇರಬಾರದು. ಪಠ್ಯಕ್ರಮದಿಂದಲೇ ಅದನ್ನು ತೆಗೆದುಹಾಕಬೇಕು. ಆಂಗ್ಲಭಾಷೆಯನ್ನು ಬೋಧನಾ ಮಾಧ್ಯಮವಾಗಿ ಬಳಸುವುದನ್ನು ನಿಲ್ಲಿಸಬೇಕು ಎಂದು ಎಸ್‌ಎಸ್‌ಯುಎನ್ ಸಲಹೆ ನೀಡಿದೆ.

ಸಂಶೋಧನೆಗೂ ಸಲಹೆ: ಭಾರತದಲ್ಲಿ ನಡೆಯುವ ಎಲ್ಲ ಸಂಶೋಧನೆಗಳೂ ರಾಷ್ಟ್ರೀಯ ಅಗತ್ಯತೆಗೆ ಸಂಬಂಸಿದ್ದಾಗಿರಬೇಕು. ಈ ಮಾನದಂಡವನ್ನು ಅನುಸರಿಸದ ಪ್ರಾಜೆಕ್ಟ್‌ಗಳಿದ್ದರೆ, ಅವುಗಳಿಗೆ ಯುಜಿಸಿ ಸ್ಕಾಲರ್‌ಶಿಪ್ ಕೊಡಬಾರದು. ಭಾರತೀಯ ಸಂಸ್ಕೃತಿ, ಸಂಪ್ರದಾಯ, ಆಲೋಚನೆಗಳು, ಗಣ್ಯ ವ್ಯಕ್ತಿಗಳಿಗೆ ಅವಮಾನ ಮಾಡುವ ಎಲ್ಲ ಅಂಶಗಳನ್ನೂ ಕಿತ್ತುಹಾಕಬೇಕು ಎಂಬ ಶಿಾರಸನ್ನೂ ಮಾಡಲಾಗಿದೆ. ಎಸ್‌ಎಸ್‌ಯುಎನ್ ನಾಯಕರು ಈಗಾಗಲೇ ಸಚಿವ ಪ್ರಕಾಶ್ ಜಾವಡೇಕರ್‌ರನ್ನು ಭೇಟಿಯಾಗಿ ಈ ಕುರಿತ ಮನವಿ ಸಲ್ಲಿಸಿದ್ದಾರೆ.

click me!