ಗೌರಿ ಲಂಕೇಶ್ ಹತ್ಯೆ ಖಂಡಿಸಿದ ಆರೆಸ್ಸೆಸ್, ನಿಷ್ಪಕ್ಷಪಾತ ತನಿಖೆಗೆ ಆಗ್ರಹ

By Suvarna Web DeskFirst Published Sep 8, 2017, 3:43 PM IST
Highlights

ಹಿರಿಯ ಪತ್ರಕರ್ತೆ ಹಾಗೂ ವಿಚಾರವಾದಿ ಗೌರಿ ಲಂಕೇಶ್ ಹತ್ಯೆಯನ್ನು ರಾಷ್ಟ್ಟ್ರೀಯ ಸ್ವಯಂಸೇವಕ ಸಂಘವು (ಆರೆಸ್ಸೆಸ್) ಖಂಡಿಸಿದೆ. ಹಿರಿಯ ಪತ್ರಕರ್ತೆ, ಚಿಂತಕಿ ಹಾಗೂ ಲೇಖಕಿ ಗೌರಿ ಲಂಕೇಶ್ ಅವರ ಹತ್ಯೆಯನ್ನು ಆರೆಸ್ಸೆಸ್ ಬಲವಾಗಿ ಖಂಡಿಸುತ್ತದೆ, ಎಂದು ದಕ್ಷಿಣ-ಮಧ್ಯ ಕ್ಷೇತ್ರದ ಸಂಘಚಾಲಕ ವಿ. ನಾಗರಾಜ್ ಪತ್ರಿಕಾ ಪ್ಟಕಟಣೆಯಲ್ಲಿ ಹೇಳಿದ್ದಾರೆ.

ನವದೆಹಲಿ: ಹಿರಿಯ ಪತ್ರಕರ್ತೆ ಹಾಗೂ ವಿಚಾರವಾದಿ ಗೌರಿ ಲಂಕೇಶ್ ಹತ್ಯೆಯನ್ನು ರಾಷ್ಟ್ಟ್ರೀಯ ಸ್ವಯಂಸೇವಕ ಸಂಘವು (ಆರೆಸ್ಸೆಸ್) ಖಂಡಿಸಿದೆ.

ಹಿರಿಯ ಪತ್ರಕರ್ತೆ, ಚಿಂತಕಿ ಹಾಗೂ ಲೇಖಕಿ ಗೌರಿ ಲಂಕೇಶ್ ಅವರ ಹತ್ಯೆಯನ್ನು ಆರೆಸ್ಸೆಸ್ ಬಲವಾಗಿ ಖಂಡಿಸುತ್ತದೆ, ಎಂದು ದಕ್ಷಿಣ-ಮಧ್ಯ ಕ್ಷೇತ್ರದ ಸಂಘಚಾಲಕ ವಿ. ನಾಗರಾಜ್ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

Latest Videos

ವಿ. ನಾಗರಾಜ್, ಕರ್ನಾಟಕ, ಆಂಧ್ರ ಪ್ರದೇಶ ಹಾಗೂ ತೆಲಾಂಗಣ ರಾಜ್ಯಗಳನ್ನೊಳಗೊಂಡ ದಕ್ಷಿಣ-ಮಧ್ಯ ಕ್ಷೇತ್ರದಲ್ಲಿ ಸಂಘದ ಕಾರ್ಯಚಟುವಟಿಕೆಗಳಿಗೆ ಮುಖ್ಯಸ್ಥರಾಗಿದ್ದಾರೆ.

ಕ್ಷೇತ್ರಸಂಘಚಾಲಕರ  ಈ ಪ್ರಕಟಣೆಗೆ ನಾಗಪುರದಲ್ಲಿರುವ ಆರೆಸ್ಸೆಸ್ ಪ್ರಧಾನ ಕಚೇರಿಯಿಂದ ಅಧಿಕೃತಗೊಂಡಿದೆಯೆನ್ನಲಾಗಿದೆ.

ಗೌರಿ ಲಂಕೇಶ್ ಹತ್ಯೆ ವಿಷಾದನೀಯ.  ನಷ್ಟವನ್ನು ಭರಿಸುವಂತೆ ಅವರ ಕುಟುಂಬಸ್ಥರಿಗೆ ಭಗವಂತನು ಶಕ್ತಿ ನೀಡಲಿ. ಹತ್ಯೆ ಕುರಿತು ನಿಷ್ಪಕ್ಷಪಾತ ತನಿಖೆಯಾಗಬೇಕೆಂದು ನಾವು ಸರ್ಕಾರವನ್ನು ಆಗ್ರಹಿಸುತ್ತೇವೆ, ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಕಳೆದ ಮಂಗಳವಾರ ಗೌರಿ ಲಂಕೇಶ್ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದಾರೆ.  

click me!