
ಹೈದರಾಬಾದ್ (ಏ.09): ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವನ್ನು ವಿರೋಧಿಸುವವರ ರುಂಡ ಕಡಿಯಲು ಬಹಳ ವರ್ಷದಿಂದ ಕಾಯುತ್ತಿದ್ದೇವೆ ಎಂದು ಹೈದರಾಬಾದ್’ನ ಗೋಶಮಾಲ್ ಕ್ಷೇತ್ರದ ಶಾಸಕ ರಾಜಾಸಿಂಗ್ ಹೇಳಿದ್ದಾರೆ. ಆದರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ತನ್ನ ಕಾರ್ಯಕರ್ತನ ಹೇಳಿಕೆಯನ್ನು ಖಂಡಿಸಿದೆ.
ಕಳೆದ ಗುರುವಾರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುವ ವೇಳೆ ಶಾಸಕ ರಾಜಾಸಿಂಗ್, ರಾಮಮಂದಿರ ನಿರ್ಮಾಣವನ್ನು ವಿರೋಧಿಸುವುದಾಗಿ ಕೆಲವರು ಹೇಳುತ್ತಿದ್ದಾರೆ. ನಮಗೆ ಎಚ್ಚರಿಕೆ ನೀಡುವವರನ್ನು ನಾನು ಆಹ್ವಾನಿಸುತ್ತಿದ್ದೇನೆ. ಅಂತಹ ದೇಶದ್ರೋಹಿಗಳ ರುಂಡ ಕಡಿಯಲು ಬಹಳ ವರ್ಷಗಳಿಂದ ನಾವು ಕಾಯುತ್ತಿದ್ದೇವೆ,, ಹೇಳಿದ್ದಾರೆಂದು ಏಎನ್ಐ ವರದಿ ಮಾಡಿದೆ.
ಹಿಂಸೆಯನ್ನು ಪ್ರಚೋದಿಸುವ ಹೇಳಿಕೆಗಳನ್ನು ನಾವು ಖಂಡಿಸುತ್ತೇವೆ, ಆರೆಸ್ಸೆಸ್ಸ ಹಿಂಸೆಯನ್ನು ಎಂದಿಗೂ ಬೆಂಬಲಿಸುವುದಿಲ್ಲ, ಎಂದು ಆರೆಸ್ಸೆಸ್ ನಾಯಕ ರಾಕೇಶ್ ಸಿನ್ಹಾ ಹೇಳಿದ್ದಾರೆ.
ರಾಮಮಂದಿರ ನಿರ್ಮಾಣಕ್ಕಾಗಿ ತಾನು ಜೈಲಿಗೆ ಹೋಗಲು ಸಿದ್ಧವೆಂದು ಕೇಂದ್ರ ಸಚಿವೆ ಉಮಾ ಭಾರತಿ ನಿನ್ನೆ ಹೇಳಿದ್ದರು.
ಬಾಬ್ರಿ ಮಸೀದಿ- ರಾಮ ಮಂದಿರ ವಿವಾದವನ್ನು ಸೌಹಾರ್ದಾಯುತವಾಗಿ ಬಗೆಹರಿಸುವಂತೆ ಕಳೆದ ತಿಂಗಳು ಸುಪ್ರೀಂ ಕೋರ್ಟ್ ಸಲಹೆ ನೀಡಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.