ಉಪಚುನಾವಣೆ: ಕಾಶ್ಮೀರದಲ್ಲಿ ಹಿಂಸಾಚಾರಕ್ಕೆ 3 ಸಾವು; ಉಳಿದೆಡೆ ಬಹುತೇಕ ಶಾಂತ ಮತದಾನ

By Suvarna Web DeskFirst Published Apr 9, 2017, 9:35 AM IST
Highlights

ಬುಡಗಾಮ್ ಜಿಲ್ಲೆಯ ಅನೇಕ ಕಡೆ ಇಂಥ ಹಿಂಸಾಚಾರ ಘಟನೆಗಳು ನಡೆದಿರುವುದು ವರದಿಯಾಗಿದೆ. ಜಿಲ್ಲೆಯಲ್ಲಿ ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವಿನ ಘರ್ಷಣೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಇನ್ನೂ ಅನೇಕರು ಗಾಯಗೊಂಡಿದ್ದಾರೆ.

ನವದೆಹಲಿ(ಏ. 09): ಶ್ರೀನಗರ ಲೋಕಸಭಾ ಕ್ಷೇತ್ರ ಹೊರತುಪಡಿಸಿ ದೇಶಾದ್ಯಂತ 10 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಬಹುತೇಕ ಶಾಂತ ರೀತಿಯಲ್ಲಿ ಮತದಾನ ನಡೆಯುತ್ತಿದೆ. ಕಾಶ್ಮೀರದ ಬುಡಗಾಮ್ ಜಿಲ್ಲೆಯಲ್ಲಿ ದುಷ್ಕರ್ಮಿಗಳ ಗುಂಪುಗಳು ಹಿಂಸಾಚಾರದಲ್ಲಿ ನಡೆಸಿರುವುದು ವರದಿಯಾಗಿದೆ. ದುಷ್ಕರ್ಮಿಗಳು ಮತಗಟ್ಟೆಯೊಂದರ ಮೇಲೆ ಪೆಟ್ರೋಲ್ ಬಾಂಬ್ ಎಸೆದು ಮತದಾನ ಪ್ರಕ್ರಿಯೆ ನಿಲ್ಲಿಸಲು ಯತ್ನಿಸಿದರೆನ್ನಲಾಗಿದೆ. ಬುಡಗಾಮ್ ಜಿಲ್ಲೆಯ ಅನೇಕ ಕಡೆ ಇಂಥ ಹಿಂಸಾಚಾರ ಘಟನೆಗಳು ನಡೆದಿರುವುದು ವರದಿಯಾಗಿದೆ. ಜಿಲ್ಲೆಯಲ್ಲಿ ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವಿನ ಘರ್ಷಣೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಇನ್ನೂ ಅನೇಕರು ಗಾಯಗೊಂಡಿದ್ದಾರೆ.

ಇದೇ ವೇಳೆ, ದೇಶದ 8 ರಾಜ್ಯಗಳಲ್ಲಿ ನಡೆದ 10 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗಳಲ್ಲಿ ಮತದಾನ ಬಹುತೇಕ ಶಾಂತ ರೀತಿಯಲ್ಲಿ ನಡೆಯುತ್ತಿದೆ. ಮಧ್ಯಪ್ರದೇಶದ ಭೀಂಡ್ ಬಳಿ ಕಾಂಗ್ರೆಸ್ ಅಭ್ಯರ್ಥಿಯ ಕಾರನ್ನು ಧ್ವಂಸ ಮಾಡಲು ಯತ್ನಿಸಿದ ದುಷ್ಕರ್ಮಿಗಳ ಗುಂಪೊಂದು ಮತಗಟ್ಟೆ ವಶಪಡಿಸಿಕೊಳ್ಳಲು ಯತ್ನಿಸಿದೆ. ಇದು ಬಿಜೆಪಿ ಕಾರ್ಯಕರ್ತರ ಕಾರ್ಯ ಎಂದು ಕಾಂಗ್ರೆಸ್ ಆರೋಪಿಸಿದೆ.

ಕರ್ನಾಟಕದ ನಂಜನಗೂಡು ಮತ್ತು ಗುಂಡ್ಲುಪೇಟೆ ಕ್ಷೇತ್ರಗಳಲ್ಲಿ ಮಧ್ಯಾಹ್ನದ ವೇಳೆ ಮತದಾನ ಪ್ರಮಾಣ ಶೇ.40 ದಾಟಿದೆ. ದೇಶಾದ್ಯಂತ ಒಟ್ಟು 1 ಲೋಕಸಭಾ ಕ್ಷೇತ್ರ ಹಾಗೂ 10 ವಿಧಾನಸಭಾ ಕ್ಷೇತ್ರಗಳಿಗೆ ಏಕಕಾಲದಲ್ಲಿ ಇಂದು ಮತದಾನ ನಡೆಯುತ್ತಿದೆ. ಏಪ್ರಿಲ್ 13ರಂದು ಎಲ್ಲಾ ಕಡೆ ಮತ ಎಣಿಕೆ ನಡೆಯುತ್ತದೆ. ಕರ್ನಾಟಕ ಹಾಗೂ ದೆಹಲಿಯ 3 ವಿಧಾನಸಭಾ ಕ್ಷೇತ್ರಗಳ ಚುನಾವಣಾ ಫಲಿತಾಂಶದ ಮೇಲೆ ಸಾಕಷ್ಟು ಜನರ ಗಮನ ನೆಟ್ಟಿದೆ.

ಎಲ್ಲೆಲ್ಲಿ ಮತದಾನ?

ಲೋಕಸಭೆ ಉಪಚುನಾವಣೆ:
1) ಶ್ರೀನಗರ, ಜಮ್ಮು-ಕಾಶ್ಮೀರ

ವಿಧಾನಸಭೆ ಉಪಚುನಾವಣೆ:
1) ನಂಜನಗೂಡು, ಕರ್ನಾಟಕ
2) ಗುಂಡ್ಲುಪೇಟೆ, ಕರ್ನಾಟಕ
3) ಲಿಟಿಪಾರಾ, ಜಾರ್ಖಂಡ್
4) ಧೋಲಪುರ್, ರಾಜಸ್ಥಾನ್
5) ಧೆಮಜಿ, ಅಸ್ಸಾಮ್
6) ಕಾಂತಿ ದಕ್ಷಿಣ್, ಪಶ್ಚಿಮ ಬಂಗಾಳ
7) ಭೋರಾಂಜ್, ಹಿಮಾಚಲ ಪ್ರದೇಶ
8) ಬಾಂಧವ್'ಗಡ್, ಮಧ್ಯಪ್ರದೇಶ
9) ಆತೆರ್, ಮಧ್ಯಪ್ರದೇಶ
10) ರಜೋರಿ ಗಾರ್ಡನ್, ದೆಹಲಿ

click me!