ಸಂಸ್ಕೃತ ಕಲಿಯದ್ದಕ್ಕೆ ಅಂಬೇಡ್ಕರ್ ವಿಷಾದ: ಭಾಗವತ್!

By Web DeskFirst Published Jul 21, 2019, 1:35 PM IST
Highlights

‘ಸಂಸ್ಕೃತ ಅರಿಯದೇ ಭಾರತ ಅರಿಯುವುದು ಕಷ್ಟ’|‘ಭಾರತದ ಎಲ್ಲಾ ಭಾಷೆಗಳಲ್ಲಿ ಶೇ.30ರಷ್ಟು ಸಂಸ್ಕೃತ ಅಡಕ’|‘ಸಂಸ್ಕೃತ ಕಲಿಯದ ಕಾರಣಕ್ಕೆ ಅಂಬೇಡ್ಕರ್ ಅವರಿಗೆ ವಿಷಾದವಿತ್ತು’|‘ಸಂಸ್ಕೃತ ದೇಶದ ಸಂಪರ್ಕ ಭಾಷೆಯಾಗಿ ಬೆಳವಣಿಗೆ ಹೊಂದಬೇಕು’|ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅಭಿಮತ|  

ನಾಗ್ಪುರ್(ಜು.21):  ಸಂಸ್ಕೃತ ಭಾಷೆ ಗೊತ್ತಿಲ್ಲದೆ ಭಾರತವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳುವುದು ಕಷ್ಟ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅಭಿಪ್ರಾಯಪಟ್ಟಿದ್ದಾರೆ.

ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಭಾಗವತ್, ಬುಡುಕಟ್ಟು ಸಮುದಾಯದ ಭಾಷೆ ಸೇರಿದಂತೆ ದೇಶದಲ್ಲಿರುವ ಎಲ್ಲಾ ಭಾಷೆಗಳಲ್ಲೂ ಶೇ. 30 ರಷ್ಟು ಸಂಸ್ಕೃತ ಪದಗಳಿರುತ್ತವೆ ಎಂದು ಹೇಳಿದರು. 

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕೂಡ ಸಂಸ್ಕೃತವನ್ನು ಕಲಿಯುವ ಅವಕಾಶ ತಮಗೆ ಸಿಗಲಿಲ್ಲ ಎಂದು ವಿಷಾದಿಸಿದ್ದರು ಎಂದು ಭಾಗವತ್ ಅಭಿಪ್ರಾಯಪಟ್ಟಿದ್ದಾರೆ. 

ಸಂಸ್ಕೃತ ಸಂಪರ್ಕ ಭಾಷೆಯಾಗಿ ಬೆಳವಣಿಗೆ ಹೊಂದಬೇಕು ಎಂದಿರುವ ಆರ್‌ಎಸ್‌ಎಸ್ ಮುಖ್ಯಸ್ಥ, ನಮ್ಮ ದೇಶ, ಜನರು ಹಾಗೂ ಸಂಸ್ಕೃತಿಯನ್ನು ತಿಳಿಯಬೇಕಾದರೆ ಪ್ರತಿಯೊಬ್ಬರು  ಸಂಸ್ಕೃತ ಕಲಿಯಬೇಕು ಎಂದು ಮನವಿ ಮಾಡಿದರು.

click me!