
ಚಂಡೀಗಢ[ಜು.21]: ಲಿಂಗಾನುಪಾತದ ಕುಖ್ಯಾತಿಗೆ ಒಳಗಾದ ಹರ್ಯಾಣ ರಾಜ್ಯದ ಚಂಡೀಗಢ ಜಿಲ್ಲೆಯ ಕೈತಾಲ್ ನಗರದಲ್ಲಿ ನವಜಾತ ಹೆಣ್ಣು ಶಿಶುವನ್ನು ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿಚರಂಡಿಗೆ ಎಸೆದ ಅಮಾನವೀಯ ಘಟನೆ ಗುರುವಾರ ನಡೆದಿದೆ. ಆದರೆ ಬೀದಿ ನಾಯಿಗಳು ಈ ಪ್ಲಾಸ್ಟಿಕ್ ಚೀಲವನ್ನು ಚರಂಡಿಯಿಂದ ಹೊರಗೆಳೆದು ಜೋರಾಗಿ ಬೊಗಳಿ ಸಾರ್ವಜನಿಕರ ಗಮನ ಸೆಳೆದಿವೆ. ಈ ಮಾರ್ಗದಲ್ಲಿ ಸಾಗುತ್ತಿದ್ದ ವ್ಯಕ್ತಿಯೊಬ್ಬ ಪೊಲೀಸರಿಗೆ ಮಾಹಿತಿ ನೀಡಿದ್ದು, ಮಗುವನ್ನು ರಕ್ಷಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಆಸ್ಪತ್ರೆಗೆ ದಾಖಲಿಸಿದಾಗ ಮಗುವಿನ ತೂಕ ಕೇವಲ 1100 ಗ್ರಾಂ ಇದ್ದು, ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಚರಂಡಿಗೆ ಮಗು ಎಸೆದ ಸ್ಥಳದ ಸಮೀಪದಲ್ಲಿ ಸಿಸಿಟೀವಿ ಇದ್ದು, ಅದರಲ್ಲಿ ಗುರುವಾರ ಬೆಳಗಿನ ಜಾವ 4ರ ಹೊತ್ತಿಗೆ ಒರ್ವ ಮಹಿಳೆ ಈ ಮಗುವನ್ನು ಎಸೆದ ದೃಶ್ಯ ದಾಖಲಾಗಿದೆ.
ಸಂಬಂದಿಸಿದಂತೆ ತನಿಖೆ, ಪತ್ತೆ ಕಾರ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.