ಅಮ್ಮಾ ಸಾವಿನ ಸುದ್ದಿ ಕೇಳಿ ಮೃತಪಟ್ಟವರಿಗೆ ಎಐಎಡಿಎಂಕೆಯಿಂದ ಪರಿಹಾರ

By Suvarna Web DeskFirst Published Dec 10, 2016, 10:44 AM IST
Highlights

ಚನ್ನೈನಲ್ಲಿ ಜಯಲಲಿತಾ ಸ್ಮಾರಕ ನಿರ್ಮಿಸಲು 15 ಕೋಟಿ ರೂಪಾಯಿಗಳನ್ನು ಕಾಯ್ದಿರಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಚೆನ್ನೈ(ಡಿ.10): ಇತ್ತೀಚೆಗಷ್ಟೇ ಮೃತಪಟ್ಟ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಸಾವಿನ ಸುದ್ದಿ ಕೇಳಿ 280 ಜನರು ಶಾಕ್'ನಿಂದ ಸಾವಿಗೀಡಾಗಿದ್ದರು. ಅದರಲ್ಲಿ 203 ಜನರು ಅಮ್ಮಾ ಸಾವಿನ ಸುದ್ದಿ ಕೇಳಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇವರ ಕುಟುಂಬಕ್ಕೆ ತಲಾ 3 ಲಕ್ಷ ರೂಪಾಯಿಗಳನ್ನು ಎಐಎಡಿಎಂಕೆ ಪಕ್ಷ ಘೋಷಿಸಿದೆ.

ಇದೇವೇಳೆ ಆತ್ಮಹತ್ಯೆಗೆ ಯತ್ನಿಸಿದ 77 ಪಕ್ಷದ ಕಾರ್ಯಕರ್ತರ ಕುಟುಂಬಗಳಿಗೂ ಎಐಎಡಿಎಂಕೆ ತಲಾ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದೆ. ಶೀಘ್ರದಲ್ಲಿಯೇ ಮೃತರ ಕುಟುಂಬಗಳಿಗೆ ಪರಿಹಾರ ಲಭ್ಯವಾಗಲಿದೆ ಎಂದು ರಾಜ್ಯಸರ್ಕಾರದ ಉನ್ನತಮೂಲಗಳು ತಿಳಿಸಿವೆ.

ಇದೇವೇಳೆ ಚನ್ನೈನಲ್ಲಿ ಜಯಲಲಿತಾ ಸ್ಮಾರಕ ನಿರ್ಮಿಸಲು 15 ಕೋಟಿ ರೂಪಾಯಿಗಳನ್ನು ಕಾಯ್ದಿರಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ. ಜಯಲಲಿತಾ ಮೃತಪಟ್ಟ ನಂತರ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡ ಓ ಪನೀರ್'ಸೆಲ್ವಂ ನೇತೃತ್ವದಲ್ಲಿ ಮೊದಲ ಸಚಿವ ಸಂಪುಟ ಸಭೆ ಇಂದು ನಡೆಯಲಿದೆ.

click me!