ಇಂದು ಆರ್ ಆರ್ ನಗರದಲ್ಲಿ ಅಗ್ನಿ ಪರೀಕ್ಷೆ

First Published May 28, 2018, 7:37 AM IST
Highlights

ಮೈತ್ರಿ ಸರ್ಕಾರದ ಮೊದಲ ‘ಅಗ್ನಿ ಪರೀಕ್ಷೆ’ ಎಂದೇ ಪರಿಗಣಿತವಾಗುತ್ತಿರುವ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರ ಚುನಾವಣೆ ಇಂದು ನಡೆಯುತ್ತಿದೆ.  

ಬೆಂಗಳೂರು:  ಮೈತ್ರಿ ಸರ್ಕಾರದ ಮೊದಲ ‘ಅಗ್ನಿ ಪರೀಕ್ಷೆ’ ಎಂದೇ ಪರಿಗಣಿತವಾಗುತ್ತಿರುವ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರ ಚುನಾವಣೆ ಇಂದು ನಡೆಯುತ್ತಿದೆ.  

ಚುನಾವಣಾ ಕಣದಲ್ಲಿ ಕಾಂಗ್ರೆಸ್ಸಿನ ಹಾಲಿ ಶಾಸಕ ಮುನಿರತ್ನ, ಜೆಡಿಎಸ್‌ನಿಂದ ಸಿನಿಮಾ ತಾರೆ ಅಮೂಲ್ಯ ಅವರ ಮಾವ ಜಿ.ಎಚ್.ರಾಮಚಂದ್ರ, ಬಿಜೆಪಿಯ ಪಿ. ಮುನಿರಾಜು ಗೌಡ ಹಾಗೂ ಚಿತ್ರವಿಚಿತ್ರ ವರ್ತನೆ ಯಿಂದ ಜನಪ್ರಿಯತೆ ಗಳಿಸಿರುವ ಹುಚ್ಚ ವೆಂಕಟ್ ಸೇರಿ 14 ಮಂದಿ ಅಭ್ಯರ್ಥಿಗಳಿದ್ದು, ಅವರ ರಾಜಕೀಯ ಹಣೆಬರಹವನ್ನು ಕ್ಷೇತ್ರದ ಮತದಾರರು ನಿರ್ಧರಿಸಲಿದ್ದಾರೆ.

ಚುನಾವಣಾ ಅಕ್ರಮ ಆರೋಪ ಹಿನ್ನೆಲೆಯಲ್ಲಿ ಎಚ್ಚರಿಕೆ ವಹಿಸಿರುವ ಆಯೋಗವು, ಕ್ಷೇತ್ರದಲ್ಲಿ 421 ಮತಗಟ್ಟೆಗಳ ಪೈಕಿ 186 ಸೂಕ್ಷ್ಮ ಮತ್ತು 47 ಅತಿಸೂಕ್ಷ್ಮ ಎಂದು ಗುರುತಿಸಿದೆ. ಈ ಮತಗಟ್ಟೆಗಳಿಗೆ ಮುಂಜಾ ಗ್ರತೆಯಾಗಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದ್ದು, ಚುನಾ ವಣೆ ಕೆಲಸಕ್ಕೆ 2524 ಅಧಿಕಾರಿ ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 

ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಸಮ್ಮಿಶ್ರ ಸರ್ಕಾರ ರಚಿಸಿದ್ದರೂ ಈ ಕ್ಷೇತ್ರದಲ್ಲಿ ಪರಸ್ಪರ ಹೊಂದಾಣಿಕೆ ಸಾಧ್ಯವಾಗಲಿಲ್ಲ. ಉಭಯ ಪಕ್ಷಗಳ ಮುಖಂಡರು ತಾವು ಕಣದಿಂದ ಹಿಂದೆ ಸರಿಯುವುದಿಲ್ಲ, ಬೇಕಾ ದರೆ ನೀವೇ ಹಿಂದೆ ಸರಿಯಿರಿ ಎಂಬ ನಿಲುವಿಗೆ ಅಂಟಿಕೊಂಡಿ ದ್ದರಿಂದ ಈ ಚುನಾವಣೆಯಲ್ಲಿ ಮೈತ್ರಿ ಆಗಲಿಲ್ಲ.

click me!