ಭೀಕರ ಅಪಘಾತ : ಕಾಂಗ್ರೆಸ್ ಶಾಸಕ ಸಾವು

Published : May 28, 2018, 07:04 AM ISTUpdated : May 28, 2018, 10:02 AM IST
ಭೀಕರ ಅಪಘಾತ : ಕಾಂಗ್ರೆಸ್ ಶಾಸಕ ಸಾವು

ಸಾರಾಂಶ

ಭೀಕರ  ರಸ್ತೆ ಅಪಘಾತದದಲ್ಲಿ ಜಮಖಂಡಿ ಕಾಂಗ್ರೆಸ್ ಶಾಸಕ ಸಿದ್ದು ನ್ಯಾಮಗೌಡ ಸಾವನ್ನಪ್ಪಿದ್ದಾರೆ. 

ಬಾಗಲಕೋಟೆ :  ಭೀಕರ  ರಸ್ತೆ ಅಪಘಾತದದಲ್ಲಿ ಜಮಖಂಡಿ ಕಾಂಗ್ರೆಸ್ ಶಾಸಕ ಸಿದ್ದು ನ್ಯಾಮಗೌಡ ಸಾವನ್ನಪ್ಪಿದ್ದಾರೆ. ಲಾರಿ ಹಾಗೂ ಕಾರಿನ ನಡುವೆ ಡಿಕ್ಕಿ ಸಂಭವಿಸಿದ್ದು, ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಅವರು ನಿಧನರಾಗಿದ್ದಾರೆ.  

ತುಳಸಿಗೇರಿ ಬಳಿಯಲ್ಲಿ ಕಾರು ಪಲ್ಟಿಯಾಗಿ ಟೈರ್ ಬ್ಲಾಸ್ಟ್ ಆಗಿದ್ದು ಈ  ವೇಳೆ ಅವರು ಗಂಭೀರವಾಗಿ ಗಾಯಗೊಂಡಿದ್ದರು.  ಬಳಿಕ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ.

ಹೆಗಡೆ ವಿರುದ್ಧ ಗೆದ್ದ ಹೆಗ್ಗಳಿಕೆ :  2013 ಹಾಗೂ 2018ರಲ್ಲಿ ಜಮಖಂಡಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಅವರು ರಾಮಕೃಷ್ಣ ಹೆಗಡೆ ಅವರನ್ನು ಸೋಲಿಸಿದ್ದರು.  1991ರ ಲೋಕಸಭಾ ಚುನಾವಣೆಯಲ್ಲಿ ಗೆದ್ದಿದ್ದ ನ್ಯಾಮಗೌಡ ಅವರು ಕೇಂದ್ರ ಕಲ್ಲಿದ್ದಲು ಖಾತೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 

ಕೃಷ್ಣ ತೀರ ರೈತ ಸಂಘದ ಮೂಲಕ ರೈತ ಪರ ಕಾರ್ಯಕ್ಕೆ ಖ್ಯಾತಿಯಾಗಿದ್ದ ಅವರು ರೈತರ ಶ್ರಮ ಹಾಗು ಆರ್ಥಿಕ ನೆರವಿನಿಂದ ಎರಡು ಬ್ಯಾರೇಜ್ ನಿರ್ಮಾಣ ಮಾಡಿ, ಜಮಖಂಡಿ ಹಾಗೂ ಅಥಣಿ ತಾಲೂಕಿಗೆ ಅನೂಕಲ ಒದಗಿಸಿದ್ದರು. 

ಅಂದು ಮುಖ್ಯಮಂತ್ರಿಯಾಗಿದ್ದ ನಾಯಕ ಬಂಗಾರಪ್ಪ ಅವರು  ರೈತ ನಾಯಕ ಎಂದು ಗುರುತಿಸಿ ನ್ಯಾಮಗೌಡ ಅವರಿಗೆ ಟಿಕೆಟ್ ಕೊಡಿಸಿದ್ದರು. ಈ ವೇಳೆಯೇ ರಾಮಕೃಷ್ಣ ಹೆಗಡೆ ಅವರನ್ನು ಸೋಲಿಸಿ ನ್ಯಾಮಗೌಡ ಅವರು ವಿಜಯಿಯಾಗಿದ್ದರು. ಈ ಬಾರಿ ಜಮಖಂಡಿಯಿಂದ ಸ್ಪರ್ಧಿಸಿ ವಿಜಯಿಯಾಗಿದ್ದ ಅವರು ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗುವ ಸಾಧ್ಯತೆ ಇತ್ತು - ಆದರೆ ಕಾರು ಅಪಘಾತದಲ್ಲಿ ಅಕಾಲಿಕವಾಗಿ ಸಿದ್ದು ನ್ಯಾಮಗೌಡ ನಿಧನರಾಗಿದ್ದಾರೆ. 

ಗಣ್ಯರ ಕಂಬನಿ : 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೇಂದ್ರ, ಮೋದಿ ಮಾಡಿದ್ದೆಲ್ಲ ತಪ್ಪು ಎನ್ನಲಾಗದು, Vote Chori ಆರೋಪದಿಂದ ಕಾಂಗ್ರೆಸ್‌ನ ನೈತಿಕತೆ ಕುಸಿತ!
ಪ್ರಧಾನಿ ಮೋದಿ ಸಮಾಧಿ ಉದ್ಘೋಷದ ವಿರುದ್ಧ ಸಂಸತ್ತಲ್ಲಿ ಗದ್ದಲ: ಕ್ಷಮೆಗೆ ಆಗ್ರಹ