ಮೋಡ, ಮಳೆಯ ಅಡ್ವಾಂಟೇಜ್: ಬಾಲಾಕೋಟ್ ರಹಸ್ಯ ಬಿಚ್ಚಿಟ್ಟ ಪ್ರಧಾನಿ!

Published : May 12, 2019, 12:37 PM ISTUpdated : May 12, 2019, 01:25 PM IST
ಮೋಡ, ಮಳೆಯ ಅಡ್ವಾಂಟೇಜ್: ಬಾಲಾಕೋಟ್ ರಹಸ್ಯ ಬಿಚ್ಚಿಟ್ಟ ಪ್ರಧಾನಿ!

ಸಾರಾಂಶ

ಬಾಲಾಕೋಟ್ ದಾಳಿಯ ಮಾಹಿತಿ ನೀಡಿದ ಪ್ರಧಾನಿ ಮೋದಿ| ಮೋಡ, ಮಳೆಯ ಲಾಭ ಪಡೆದು ದಾಳಿ ಎಂದ ಪ್ರಧಾನಿ| ಫೆ.26ರ ಬಾಲಾಕೋಟ್ ದಾಳಿಯ ರಹಸ್ಯ ಬಿಚ್ಚಿಟ್ಟ ಮೋದಿ| ಪಾಕಿಸ್ತಾನಿ ರೆಡಾರ್‌ನಿಂದ ತಪ್ಪಿಸಿಕೊಳ್ಳಲು ವಾತಾವರಣದ ಲಾಭ| ರಹಸ್ಯ ಮಾಹಿತಿ ಬಿಚ್ಚಿಟ್ಟ ಮೋದಿ ವಿರುದ್ಧ ಪ್ರತಿಪಕ್ಷಗಳು ಕಿಡಿ| ಟ್ವಿಟ್ ಮೂಲಕ ಮೋದಿ ವಾದ ಕುಹುಕವಾಡಿದ ಪ್ರತಿಪಕ್ಷಗಳು| 

ನವದೆಹಲಿ(ಮೇ.12): ಬಾಲಾಕೋಟ್ ವಾಯುದಾಳಿಯ ದಿನ ಮೋಡ ಮತ್ತು ಭಾರೀ ಮಳೆ ಸುರಿದ ಕಾರಣ, ಅದರ ಲಾಭ ಪಡೆದು ಪಾಕಿಸ್ತಾನಿ ರೆಡಾರ್‌ನಿಂದ ತಪ್ಪಿಸಿಕೊಂಡು ದಾಳಿ ನಡೆಸಲಾಗಿತ್ತು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಬಾಲಾಕೋಟ್ ವಾಯುದಾಳಿಯ ಮಾಹಿತಿ ಬಿಚ್ಚಿಟ್ಟ ಮೋದಿ, ಫೆ.26ರಂದು ಮೋಡ ಕವಿದ ವಾತಾವರಣ ಮತ್ತು ಭಾರೀ ಮಳೆಯ ಸಂಭವ ಎದುರಾಗಿತ್ತು. ಹೀಗಾಗಿ ದಾಳಿಯ ಯೋಜನೆಯನ್ನು ಮುಂದೂಡಲು ತಜ್ಞರು ಬಯಸಿದ್ದರು. ಆದರೆ ನಾನು ವಾತಾವರಣದ ಲಾಭ ಪಡೆದು ಪಾಕಿಸ್ತಾನಿ ರೆಡಾರ್‌ನಿಂದ ಕಣ್ತಪ್ಪಿಸಿಕೊಂಡು ದಾಳಿ ನಡೆಸುವ ನಿರ್ಧಾರಕ್ಕೆ ಬಂದಿದ್ದಾಗಿ ಹೇಳಿದ್ದಾರೆ.

ಆದರೆ ಮೋದಿ ಅವರ ವಾದವನ್ನು ಕುಹುಕವಾಡಿರುವ ಪ್ರತಿಪಕ್ಷಗಳು, ಅತ್ಯಂತ ರಹಸ್ಯವಾಗಿಡಬೇಕಿದ್ದ ಕಾರ್ಯಾಚರಣೆಯ ಮಾಹಿತಿಯನ್ನು ಮೋದಿ ಜಗಜ್ಜಾಹೀರುಗೊಳಿಸಿದ್ದಾರೆ ಎಂದು ಕಿಡಿಕಾರಿವೆ. ಅಲ್ಲದೇ ಮೋಡ, ಮಳೆಯ ಮೋದಿ ಪ್ಲ್ಯಾನ್ ಕುರಿತು ಕುಹುಕವಾಡಿವೆ.

ಬಿಜೆಪಿ ಈ ಮೊದಲು ಮೋದಿ ಸಂದರ್ಶನವನ್ನು ಟ್ವಿಟ್ ಮಾಡಿತ್ತು. ಆದರೆ ಈ ಕುರಿತು ಪ್ರಶ್ನೆಗಳೆದ್ದ ಮೇಲೆ ಟ್ವಿಟ್ ಡಿಲೀಟ್ ಮಾಡಿತ್ತಾದರೂ, ಪ್ರತಿಪಕ್ಷಗಳು ಸ್ಕ್ರೀನ್ ಶಾಟ್ ಮೂಲಕ ಬಿಜೆಪಿ ವಿರುದ್ಧ ಮುಗಿ ಬಿದ್ದಿವೆ.

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

'ಮಹಿಳೆಯರು ಇರೋದು ಗಂಡನ ಜೊತೆ ಮಲಗೋಕೆ ಮಾತ್ರ..' ವಿಜಯೋತ್ಸವ ಭಾಷಣದಲ್ಲಿ ಸಿಪಿಎಂ ನಾಯಕನ ವಿವಾದಿತ ಮಾತು
ಡಿ.16ರಂದು ಮಂಡ್ಯಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ, ಜಿಲ್ಲಾಡಳಿತದಿಂದ ಭರದ ಸಿದ್ದತೆ, ಕಟ್ಟುನಿಟ್ಟಿನ ಭದ್ರತೆ