
ಕೋಲ್ಕೊತ್ತಾ(ನ.14): ರಸಗುಲ್ಲಾ ಸಿಹಿ ಯಾರಿಗೆ ಗೊತ್ತಿಲ್ಲಾ ಹೇಳಿ. ವಿವಾಹ ಮುಂತಾದ ಸಮಾರಂಭಗಳಲ್ಲಿ ಇದು ಇದ್ದೆ ಇರುತ್ತದೆ. ಹೆಸರು ಕೇಳಿದರೆ ಒಮ್ಮೆ ರುಚಿ ಸವಿಯಬೇಕಿಸುತ್ತದೆ. ಆದರೆ ಈ ಸಿಹಿ ತಿಂಡಿಗಾಗಿ ಎರಡೂ ರಾಜ್ಯಗಳು ಕಾನೂನಿನ ಕದನಕ್ಕಿಳಿದಿವೆ.
ಬಹುತೇಕರು ಇದನ್ನು ಪಶ್ಚಿಮ ಬಂಗಾಳ ಮೂಲದ್ದು ಎಂದು ತಿಳಿದುಕೊಂಡಿದ್ದಾರೆ. ಆದರೆ ಕೆಲವು ವರ್ಷಗಳಿಂದ ಒಡಿಶಾ ರಾಜ್ಯ ಈ ಸಿಹಿ ತಿಂಡಿ ತಮ್ಮ ಮೂಲದೆಂದು ವಾದಿಸುತ್ತಾ ಕಾನೂನು ಸಮರಕ್ಕೆ ಇಳಿದಿತ್ತು. ಎರಡೂ ರಾಜ್ಯಗಳ ನಡುವಿನ ಫೈಟ್'ನಲ್ಲಿ ಈಗ ಬಂಗಾಳಕ್ಕೆ ಜಯ ಲಭಿಸಿದೆ.
2 ವರ್ಷಗಳ ವಾದದಲ್ಲಿ ಟ್ರೇಡ್ ಮಾರ್ಕ್ಸ್(ಜಿಐ) ಹಾಗೂ ಜಿಯೋಗ್ರಾಫಿಕಲ್ ಇಂಡಿಕೇಶನ್ ಸಂಸ್ಥೆ ರಸಗುಲ್ಲಾ ಸಹಿತಿಂಡಿ ಮೂಲತಃ ಪಶ್ಚಿಮ ಬಂಗಾಳ ಮೂಲದೆಂದು ತೀರ್ಪು ನೀಡಿದೆ. ಜಿಐ ಸಂಸ್ಥೆಯ ಸಹಾಯಕ ರಿಜಿಸ್ಟ್ರಾರ್ ಚೆನ್ನರಾಜ ಜಿ ನಾಯ್ಡು ' ರಸಗುಲ್ಲಾ ಬಂಗಾಳ ಮೂಲದೆಂದು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಒಡಿಶಾ ಮತ್ತು ಬಂಗಾಳ ರಸಗುಲ್ಲಾ ತಮ್ಮ ಮೂಲದೆಂದು ವಾದಿಸುತ್ತಾ ಟ್ರೇಡ್ ಮಾರ್ಕ್ಸ್(ಜಿಐ) ಹಾಗೂ ಜಿಯೋಗ್ರಾಫಿಕಲ್ ಇಂಡಿಕೇಶನ್ ಸಂಸ್ಥೆಗೆ ದೂರು ನೀಡಿದ್ದರು. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ' ರಸಗುಲ್ಲ ವಿಜಯಕ್ಕೆ ಸಂತಸ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.